ಇತ್ತೀಚಿನ ಸುದ್ದಿ
ಪಡೀಲ್ ಅಂಡರ್ ಪಾಸ್ ನಲ್ಲಿ ಭೀಕರ ಬೈಕ್ ಅಫಘಾತ: ಓರ್ವ ಸಾವು; ಇನ್ನಿಬ್ಬರಿಗೆ ತೀವ್ರ ಗಾಯ
14/09/2023, 19:16

ಮಂಗಳೂರು(reporterkarnataka.com): ನಗರದ ಪಡೀಲ್ ಅಂಡರ್ ಪಾಸ್ ನಲ್ಲಿ ಗುರುವಾರ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಸಾವನ್ನಪ್ಪಿದ ಯುವಕನನ್ನು ಬಜಾಲ್ ಪಲ್ಲಕೆರೆಯ ನಿವಾಸಿ ಭುವನ್ ರಾಜ್ (18) ಎಂದು ಗುರುತಿಸಲಾಗಿದೆ.
ಬೈಕ್ ನಲ್ಲಿ ಮೂವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿದ ಹಿನ್ನೆಲೆಯಲ್ಲಿ ಫುಟ್ ಪಾತ್ ನ ಗೋಡೆಯ ಡಿಕ್ಕಿ ಹೊಡೆದು ಬೈಕ್ ಫುಟ್ ಪಾತ್ ಒಳಗಡೆ ಎಸೆಯಲ್ಪಟ್ಟಿದೆ. ಗಾಡ್ವಿನ್(19) ಹಾಗೂ ಆಷಿತ್(17) ಎಂಬವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಕನಾಡಿ ಸಂಚಾರಿ ಠಾಣೆ ಎಸ್ ಐ ಚಂದ್ರ, ಸಿಬ್ಬಂದಿ ತಿಪ್ಪೆಸ್ವಾಮಿ ಹಾಗೂ ಇತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ.