ಇತ್ತೀಚಿನ ಸುದ್ದಿ
ಪಶ್ಚಿಮ ಬಂಗಾಳದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟ: ಬಣಕಲ್ ನಜರೆತ್ ಶಾಲೆಗೆ ಕಂಚಿನ ಪದಕ
29/09/2023, 19:36
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಸಿಐಎಸ್ ಸಿಇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಬಣಕಲ್ ನಜರೆತ್ ಶಾಲೆಯ ಅಧೀರತ್ ಎಚ್. ಎನ್., ಧೀಮಂತ್ ಎಂ., ತನ್ಮಯ್ ಗೌಡ ಡಿ.ಆರ್. ಮತ್ತು ವಿಧಾತ್ ಟಿ. ಗೌಡ ಭಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ.
14ರ ವಯೋಮಾನದ ಬಾಲಕರ ಕರ್ನಾಟಕ ತಂಡದ ತರಬೇತುದಾರರಾಗಿ ನಜರೆತ್ ಶಾಲೆಯ ದೈಹಿಕ ಶಿಕ್ಷಕ ಪ್ರವೀಣ್ ಆರ್. ಉತ್ತಮ ತಂಡವನ್ನು ಸಜ್ಜುಗೊಳಿಸಿದ್ದರು. ನಜರೆತ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ತನ್ಮಯ್ ಗೌಡ ಡಿ. ಆರ್. ಮತ್ತು ವಿಧಾತ್ ಟಿ. ಗೌಡ ನವದೆಹಲಿಯಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲೆಯ ಪ್ರಾಂಶುಪಾಲೆ ಹಿಲ್ಡಾ ಲೋಬೋ ಸಂತಸ ವ್ಯಕ್ತಪಡಿಸಿದ್ದಾರೆ.