5:01 AM Wednesday30 - October 2024
ಬ್ರೇಕಿಂಗ್ ನ್ಯೂಸ್
ಪಿಎಲ್ಐ ಯೋಜನೆಯಡಿ ಮೆರಿಲ್ ಸುಧಾರಿತ ಉತ್ಪಾದನಾ ಸೌಲಭ್ಯ: ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು…

ಇತ್ತೀಚಿನ ಸುದ್ದಿ

ಆನ್ಲೈನ್ ಮೂಲಕವೇ ಹೊಸ ವಾಹನಗಳ ನೋಂದಣಿ: ರಾಜ್ಯ ಸರಕಾರ ತಂದಿದೆ ಹೊಸ ರೂಲ್ಸ್

27/10/2021, 10:13

ಬೆಂಗಳೂರು(reporterkarnataka.com) : ಪ್ರಾದೇಶಿಕ ಸಾರಿಗೆ ಕಚೇರಿಯ ವಾಹನ ನಿರೀಕ್ಷಕರ ಪರಿವೀಕ್ಷಣೆಗೆ ಕೊಂಡೊಯ್ಯದೇ, ಮೊದಲ ಬಾರಿಗೆ ಖರೀದಿಸಿದಂತ ಹೊಸ ವಾಹನಗಳನ್ನು  ಆನ್ ಲೈನ್ ಮೂಲಕವೇ ನೊಂದಣಿಗೆ ಅವಕಾಶ ನೀಡಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ.

ತಯಾರಿಕಾ ಹಂತದಲ್ಲಿಯೇ ರಸ್ತೆ ಬಳಕೆಗೆ ಯೋಗ್ಯವಾಗುವಂತೆ ಸಂಪೂರ್ಣ ನಿರ್ಮಿತವಾಗಿರುವ  ಹಾಗೂ ಅಧಿಕೃತ ಮಾರಾಟಗಾರರಿಂದ ಮಾರಾಟಗೊಂಡ ಪ್ರಥಮ ಬಾರಿಗೆ ನೋಂದಣಿ ಮಾಡಿಸಿಕೊಳ್ಳುವಂತ ವಾಹನಗಳನ್ನು ಮೋಟಾರು ವಾಹನ ನಿರೀಕ್ಷಕರ ಪರಿವೀಕ್ಷಣೆಗಾಗಿ ಪ್ರಾದೇಶಿಕ ಸಾರಿಗೆ ಕಛೇರಿಗೆ ಕೊಂಡೊಯ್ದನಂತ್ರ ನೋಂದಣಿ ಮಾಡುವ ಪದ್ದತಿ ಈವರೆಗೆ ಜಾರಿಯಲ್ಲಿದೆ.

ವಾಹನಗಳನ್ನು ಪ್ರಥಮ ಬಾರಿಗೆ ನೋಂದಣಿ ಮಾಡಲು ಪರಿವೀಕ್ಷಣೆಗಾಗಿ ನೋಂದಣಿ ಪ್ರಾಧಿಕಾರದ ಮುಂದೆ ಹಾಜರು ಪಡಿಸುವ ಅವಶ್ಯಕತೆಯನ್ನು ಕೇಂದ್ರ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿತಂದು, ತೆಗೆದುಹಾಕಲಾಗಿದೆ. ಹೊಸ ತಿದ್ದುಪಡಿ ನಿಯಮದಂತೆ ಇನ್ಮುಂದೆ ಅಧಿಕೃತ ಮಾರಾಟಗಾರರಿಂದ ಖರೀದಿಸಿದ ಸಂಪೂರ್ಣವಾಗಿ ನಿರ್ಮಿತವಾಗಿರುವ ಮೋಟಾರು ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ಯದೇ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ಬರುವಂತೆ ತರಲಾಗಿದೆ.

ಅಧಿಕೃತ ಮಾರಾಟಗಾರರಿಂದ ಮಾರಾಟಮಾಡಿದ ವಾಹನಗಳ ವಿವರಗಳನ್ನು ವಾಹನ-4 ಪೋರ್ಟಲ್ ನಲ್ಲಿ ಮಾರಾಟಗಾರರು  ನಮೂದಿಸಿ, ನೋಂದಣಿಗೆ ತಗಲುವ ತೆರಿಗೆ ಮತ್ತು ಶುಲ್ಕಗಳನ್ನು ಆನ್ ಲೈನ್ ಮೂಲಕ ಪಾವತಿಸಿ, ಅರ್ಜಿಯನ್ನು ಆನ್ ಲೈನ್ ಮುಖಾಂತರವೇ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸುವುದು.

ಆನ್ ಲೈನ್ ನಲ್ಲಿ ಸ್ವೀಕರಿಸಿದಂತಹ ಅರ್ಜಿಗಳನ್ನು ಆನ್ ಲೈನ್ ನಲ್ಲಿಯೇ ಪರಿಶೀಲಿಸಿ, ನೋಂದಣಿ ಪ್ರಾಧಿಕಾರದಿಂದ ಅನುಮೋದನೆಗೊಳ್ಳುತ್ತದೆ ಹಾಗೂ ನೋಂದಣಿ ಕ್ರಮಾಂಕವನ್ನು ನೀಡಲಾಗುತ್ತದೆ. ಈ ಬಗ್ಗೆ ರಾಜ್ಯದ ಎಲ್ಲಾ ನೋಂದಣಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು