11:40 AM Saturday22 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ಅಥಣಿ: ಒಂದೇ ದಿನ ಅಂಚೆ ಕಚೇರಿ ಹಾಗೂ 6 ಮನೆಗಳಿಗೆ ಕನ್ನ; ಲಕ್ಷಾಂತರ ಮೌಲ್ಯದ ನಗ, ನಗದು ಕಳವು

25/04/2022, 09:14

ಬೆಳಗಾವಿ(reporterkarnataka.com):

ಅಥಣಿ ಖಿಳೆಗಾಂವ ಗ್ರಾಮದಲ್ಲಿ ಒಂದೇ ದಿನ 6 ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕಳ್ಳತನ ಮಾಡಿದ ಘಟನೆ ನಡೆದಿದೆ.

ಖಿಳೇಗಾಂವ ಗ್ರಾಮದಲ್ಲಿ ಒಂದೇ ದಿನ 6 ಮನೆಗಳ ಹಾಗೂ ಅಂಚೆ ಕಛೇರಿಯ ಬೀಗ ಮುರಿದು ಲಕ್ಷಾಂತರ ರೂ.ಗಳ ಚಿನ್ನಾಭರಣ, ಮೋಟಾರ್ ಬೈಕ್, ಆಡಿನ ಮರಿ, ಟಿವಿ ಮತ್ತು ನಗದು ಹಣ ದೋಚಿಕೊಂಡು ಹೋದ ಘಟನೆ ನಡೆದಿದೆ

ಖಿಳೇಗಾಂವ ಗ್ರಾಮದ ಸುಶೀಲಾಬಾಯಿ ಹೊನ್ನಾಗೋಳ ಮನೆಯಲ್ಲಿ 25 ಸಾವಿರ ನಗದು ಹಾಗೂ 1 ತೊಲೆ ಬಂಗಾರದ ಆಭರಣ, ಶೀತಲ್ ಸುರೇಶ ಚಂಡಿ ಮನೆಯಲ್ಲಿ 3 ತೊಲೆ ಬಂಗಾರ ಹಾಗೂ ಸ್ಮಾರ್ಟ ಟಿವಿಯನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಲ್ಲದೆ  ಸಾಗರ ಸದಾಶಿವ ದಿವಾನಗೋಳ ಮನೆಯ ಹೊರಗಿದ್ದ ಮೋಟಾರ್ ಬೈಕ್ ಹಾಗೂ ಒಂದು ಆಡಿನ ಮರಿಯನ್ನು ಹೊತ್ತುಕೊಂಡು ಹೋಗಿದ್ದಾರೆ. ಗ್ರಾಮದಲ್ಲಿರುವ ಅಪ್ಪಾಸಾಹೇಬ ಮಲ್ಲಾಸಾಹೇಬ ಬಸರಗಿ ಮನೆಯ ಬೀಗ ಮುರಿದು ಎಲ್ಲ ಕಡೆ ಹುಡುಕಿದ ಕಳ್ಳರು ಅಲ್ಲಿ ಎನೂ ಸಿಗದೇ ಇದ್ದಾಗ ಮನೆಯ ಇನ್ನೊಂದು ಭಾಗದಲ್ಲಿದ್ದ ಅಂಚೆ ಕಛೇರಿಯ ಬೀಗವನ್ನೂ ಕೂಡ ಮುರಿದು ದಾಖಲೆಗಳನ್ನು ತಡಕಾಡಿ ಏನೂ ಸಿಗದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. 

ಸುದ್ದಿ ತಿಳಿದ ತಕ್ಷಣ ಅಥಣಿ ಪೊಲೀಸ್ ಠಾಣೆಯ ಪಿಎಸ್‍ಐ ಕುಮಾರ ಹಾಡಕರ ಖಿಳೇಗಾಂವ ಗ್ರಾಮಕ್ಕೆ ಭೇಟಿ ನೀಡಿ ಕಳ್ಳತನವಾದ ಎಲ್ಲ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋಗುವ ಮುನ್ನ ಪಂಚಾಯತ ಸಿಬ್ಬಂದಿ ಮೂಲಕ ಗ್ರಾಮದ ಬೀಟ್ ಪೊಲೀಸ್ ರಿಗೆ ಮಾಹಿತಿ ನೀಡಿ ಅಥವಾ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಹೋಗಿ ಜೊತೆಗೆ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ನಿಮಗೆ ವಿಶ್ವಾಸ ಎನಿಸಿದ ಸಂಬಂಧಿಕರ ಅಥವಾ ಹಿತೈಶಿಗಳ ಮನೆಯಲ್ಲಿಟ್ಟು ಹೋಗಿ ಎಂದು ಮನವಿ ಮಾಡಿದರು. 

ಖಿಳೇಗಾಂವ ಗ್ರಾಮ ಪಂಚಾಯತ ಅಧ್ಯಕ್ಷ ರವಿ ನಾಗಗೋಳ ಮಾತನಾಡಿ, ಕೆಲವೇ ದಿನಗಳಲ್ಲಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತೇವೆ ಅಲ್ಲದೆ ಗ್ರಾಮಸ್ಥರು ಕೂಡ ಮನೆಯಿಂದ ಹೊರ ಹೋಗುವಾಗ ಮನೆಯಲ್ಲಿ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಇಡಬೇಡಿ ಹಾಗೇನಿದ್ದರೂ ಕೂಡ ಹಣ ಮತ್ತು ಚಿನ್ನಾಭರಣಗಳನ್ನು ಸಂಬಂಧಿಕರ ಮನೆಯಲ್ಲಿ ಇಟ್ಟು ಹೋಗಿ ಎಂದು ಮನವಿ ಮಾಡಿದರು.

ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಇತ್ತೀಚಿನ ಸುದ್ದಿ

ಜಾಹೀರಾತು