4:23 AM Friday9 - January 2026
ಬ್ರೇಕಿಂಗ್ ನ್ಯೂಸ್
ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ… ಬಾಂಗ್ಲಾದವರು ನುಸುಳುವವರೆಗೆ ಕೇಂದ್ರ ಗೃಹ ಇಲಾಖೆ ನಿದ್ದೆಗೆ ಜಾರಿತ್ತಾ?: ಸಚಿವ ಕೃಷ್ಣ ಬೈರೇಗೌಡ… ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ…

ಇತ್ತೀಚಿನ ಸುದ್ದಿ

ಒಲಿಂಪಿಕ್ಸ್ ನಡೆಸಬಲ್ಲ ವಿಶ್ವದರ್ಜೆಯ ಮಂಗಳೂರು ಎಮ್ಮೆಕೆರೆ ನೂತನ ಸ್ವಿಮ್ಮಿಂಗ್ ಪೂಲ್: ಒಂದೇ ಅಂತಸ್ತಿನಲ್ಲಿ 3 ಕೊಳಗಳ ಸಂಗಮ

21/11/2023, 12:44

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಪಾಂಡೇಶ್ವರ ಸಮೀಪದ ಎಮ್ಮೆಕೆರೆಯಲ್ಲಿ ಸುಮಾರು 24.94 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ವಿಶ್ವ ದರ್ಜೆಯ ಈಜುಕೊಳ ಉದ್ಘಾಟನೆ ಸಜ್ಜಾಗಿದೆ. ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಬಲ್ಲ ಈ ಸ್ವಿಮ್ಮಿಂಗ್ ಪೂಲ್ ನವೆಂಬರ್ 24ರಂದು ಲೋಕಾರ್ಪಣೆಗೊಳ್ಳಲಿದೆ.


ಈಜುಕೊಳದ ಎಲ್ಲ ಪ್ರಮುಖ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಅಂತಿಮ ಸ್ಪರ್ಶ ಮಾತ್ರ ಬಾಕಿ ಉಳಿದಿದೆ. ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಈಗಾಗಲೇ ಇಲ್ಲಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದಾರೆ. ಈಜುಕೊಳವನ್ನು ಒಡಿಶಾ ಮೂಲದ ಕಂಪನಿಯೊಂದು ನಿರ್ಮಿಸಿದೆ. ಇದೇ ಕಂಪನಿ ಮುಂದಿನ 3 ವರ್ಷಗಳ ಕಾಲ ಈಜುಕೊಳದ ನಿರ್ವಹಣೆ ಕೂಡ ಮಾಡಲಿದೆ. ಉದ್ಘಾಟನೆಯ ದಿನ ರಾಷ್ಟ್ರ ಮಟ್ಟದ ಹಿರಿಯರ 19ನೇ ಈಜು ಸ್ಪರ್ಧೆ ಕೂಡ ನಡೆಯಲಿದೆ.
ಎಮ್ಮೆಕೆರೆ ಈಜುಕೊಳ ವಿಶಾಲವಾದ ನೆಲ ಅಂತಸ್ತನ್ನು ಹೊಂದಿದೆ. ವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪುರುಷ ಮತ್ತು ಮಹಿಳಾ ಅತ್ಲೆಟಿಕ್ ಗಳಿಗೆ ಪ್ರತ್ಯೇಕ ರೆಸ್ಟ್ ರೂಮ್ ಸೌಲಭ್ಯ ಕಲ್ಪಿಸಲಾಗಿದೆ. ಟಾಯ್ಲೆಟ್, ಬಾತ್ ರೂಮ್ ಹೊಂದಿದೆ. ನೆಲ ಮಹಡಿಯಲ್ಲೇ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಬಾಡಿ ಬಿಲ್ಡರ್ ಗಳಿಗೆ ವ್ಯವಸ್ಥಿತ ಜಿಮ್ ಇದೆ. ಸುಸಜ್ಜಿತ ವಸ್ತ್ರ ಬದಲಾವಣೆ ಕೊಠಡಿ, ಶೌಚಾಲಯ, ಲಾಕರ್ ವ್ಯವಸ್ಥೆ ಇದೆ.
ಇನ್ನು 2ನೇ ಮಹಡಿಗೆ ಕಾಲಿಟ್ಟ ತಕ್ಷಣ ನೀಲಿ ಬಣ್ಣದ ಜಲರಾಶಿ ಎದುರುಗೊಳ್ಳುತ್ತದೆ. ತೆರೆದ ಈಜು ಕೊಳ ಇದಾಗಿದೆ. ಇದು 50 ಮೀಟರ್ ಉದ್ದ ಹಾಗೂ 25 ಮೀಟರ್ ಅಗಲ ಹೊಂದಿದ ಪ್ರಮುಖ ಈಜುಕೊಳ ಆಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 25 ಮೀಟರ್ ಉದ್ದ ಹಾಗೂ 10 ಮೀಟರ್ ಅಗಲದ ಮತ್ತೊಂದು ಈಜುಕೊಳವಿದೆ. ಇದು ಈಜು ಆಕಾಂಕ್ಷಿಗಳಿಗೆ ತರಬೇತಿ ನೀಡುವ ಕೊಳವಾಗಿದೆ. ಇಷ್ಟೆಲ್ಲ ಇದ್ದ ಬಳಿಕ ಪುಟಾಣಿಗಳನ್ನು ಮರೆಯಲು ಸಾಧ್ಯವೇ? ಅದಕ್ಕಾಗಿಯೇ ಮಕ್ಕಳಿಗಾಗಿ ಬೇಬಿ ಪೂಲ್ ನಿರ್ಮಿಸಲಾಗಿದೆ. ಇದು 13.8 ಮೀಟರ್ ಉದ್ದ ಹಾಗೂ10 ಮೀಟರ್ ಅಗಲ ಹೊಂದಿದೆ. ಒಟ್ಟು ವಿವಿಧ ವಿಭಾಗಗಳಿಗೆ 3 ಈಜು ಕೊಳಗಳು ತಲೆ ಎತ್ತಿ ನಿಂತಿವೆ.

ಈಜು ಸ್ಪರ್ಧೆ ನಡೆಯುವಾಗ ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಇದೆ. ಇಲ್ಲಿ ಏಕಕಾಲದಲ್ಲಿ ಸುಮಾರು 500 ಮಂದಿ ಒಟ್ಟಿಗೆ ಕುಳಿತು ಸ್ಪರ್ಧೆಯನ್ನು ವೀಕ್ಷಿಸಬಹುದಾಗಿದೆ. ಒಟ್ಟಿನಲ್ಲಿ ಮಂಗಳೂರಿಗರ ಬಹುದಿನಗಳ ಕನಸು ನನಸಾಗಿದೆ. ಕಡಲನಗರಿಗೆ ಇದು ಹೆಮ್ಮೆಯೂ ಹೌದು.

ಬೇರೆ ಏನೆಲ್ಲ ಇದೆ?
* ವಿಶಾಲವಾದ ಪಾರ್ಕಿಂಗ್
* ನೀರು ಶುದ್ಧೀಕರಣ ಘಟಕ
* ಲಾಕರ್ ವ್ಯವಸ್ಥೆ
* ಸಸಜ್ಜಿತ ಜಿಮ್

ಇತ್ತೀಚಿನ ಸುದ್ದಿ

ಜಾಹೀರಾತು