4:23 PM Tuesday30 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಒಳ ಮೀಸಲಾತಿ ಶೀಘ್ರದಲ್ಲೇ ಜಾರಿಗೊಳಿಸಿ: ರಾಜ್ಯ ಸರಕಾರಕ್ಕೆ ದಲಿತ ಪರ ಒಕ್ಕೂಟ ಆಗ್ರಹ

03/08/2024, 16:12

ಗಣೇಶ ಇನಾಂದಾರ ಬಳ್ಳಾರಿ
info.reporterkarnataka@gmail.com
ರಾಜ್ಯ ಸರ್ಕಾರ ಆದಷ್ಟು ಬೇಗನೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ದಲಿತ ಪರ ಒಕ್ಕೂಟದ ಮುಖಂಡರು ಇಂದು ಒತ್ತಾಯಿಸಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಹೋರಾಟವು ಕಳೆದ 30 ವರ್ಷಗಳಿಂದ ಹಲವಾರು ಹೋರಾಟ ಮಾಡಿದ ಫಲವಾಗಿ ಸರ್ವೋಚ್ಛ ನ್ಯಾಯಾಲಯವು ಇದೇ ತಿಂಗಳು ಒಂದನೇ ತಾರೀಕಿನಂದು ಒಳ ಮೀಸಲಾತಿಯ ಕುರಿತು ಮಹತ್ವದ ತೀರ್ಪನ್ನು ನೀಡಿ, ಪರಿಶಿಷ್ಟ ಜಾತಿಯಲ್ಲಿ ವರ್ಗೀಕರಣ ಅಗತ್ಯವಿದೆಯೆಂದು ತನ್ನ ಮಹತ್ತರವಾದ ತೀರ್ಪಿನಲ್ಲಿ ತಿಳಿಸಿದೆ, ಇದನ್ನು ಆಯಾ ರಾಜ್ಯಗಳು ಒಳ ಮೀಸಲಾತಿಗಳನ್ನು ಜಾರಿ ಮಾಡಬಹುದೆಂದು ಸಹ ತೀರ್ಪು ಉಲ್ಲೇಖಿಸಲಾಗಿದೆ, ಕಾರಣ
ರಾಜ್ಯ ಸರ್ಕಾರ ಆದಷ್ಟು ಬೇಗನೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ದಲಿತ ಪರ ಒಕ್ಕೂಟದ ಮುಖಂಡರು ಆಗ್ರಹಿಸಿದರು.
ನ್ಯಾಯಾಲಯದ ತೀರ್ಪಿನ್ನು ನೀಡಿರುವ ಸರ್ವೋಚ್ಛ ನ್ಯಾಯಾಲಯದ 7 ಜನ ನ್ಯಾಯಾಧೀಶರುಗಳಿಗೆ ಕರ್ನಾಟಕ ರಾಜ್ಯದ ಮಾದಿಗ ಜನಾಂಗದ ಸಂಘಟನೆಗಳು ದಲಿತ ಪರ ಹೋರಾಟಗಾರರು ಅಭಿನಂದನೆಯನ್ನು ಸಲ್ಲಿಸುತ್ತೇವೆ. ಇದರ ಅನುಗುಣವಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು
ತ್ವರಿತವಾಗಿ ಒಳ ಮೀಸಲಾತಿಯನ್ನು ಜಾರಿ ಮಾಡಬೇಕೆಂದು  ಒತ್ತಾಯ ಮಾಡುತ್ತಿದ್ದೇವೆಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿಯ ಉಪ ಜಾತಿ ಮಾದಿಗ ಎಂದು ನಮೂದಿಸಲು ಕ್ರಮಕೈಗೊಳ್ಳಬೇಕು. ಸರ್ಕಾರದ ಎಲ್ಲಾ ಜಿಲ್ಲೆಯ ಜಿಲ್ಲಾಡಳಿತಗಳಿಗೆ ಆದೇಶ ನೀಡಬೇಕೆಂದು ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆದೇಶದ ಮೇರೆಗೆ ತ್ವರಿತವಾಗಿ ಒಳಮೀಸಲಾತಿ ಜಾರಿ ಗೊಳಿಸಬೇಕು, ಉದಾಸೀನ ಮಾಡಿದಲ್ಲಿ ರಾಜ್ಯ ಸರ್ಕಾರದ ವಿರುದ್ದ ರಾಜ್ಯಾದ್ಯಾಂತ ಉಗ್ರವಾದ ಹೋರಾಟ ಹಮ್ಮಿ ಕೊಳ್ಳಲಾಗುವುದೆಂದು ಒಕ್ಕೂಟದ ಮುಖಂಡರುಗಳಾದ ಕೆ ಈಶ್ವರಪ್ಪ, ದುರುಗಪ್ಪ ತಳವಾರ, ಎ.ಕೆ. ಗಂಗಾಧರ್, ಸಂಗನಕಲ್ಲು ನೆಟ್ಟೆಪ್ಪ, ದಾನಪ್ಪ, ಹುಸೇನಪ್ಪ ಸೇರಿದಂತೆ ಹಲವಾರು ಜನರು ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಮೂರ್ತಿ, ಚಿಕ್ಕ ಗಾದಿಲಿಂಗಪ್ಪ, ರಮೇಶ್ ಕುಮಾರ್, ಪೃಥ್ವಿರಾಜ್, ವೀರಭದ್ರಪ್ಪ, ಕರ್ಚೇಡು ಶ್ರೀನಿವಾಸ್, ವೀರಸ್ವಾಮಿ, ಬಾಬು, ದುರುಗೇಶ್, ಗಾದಿಲಿಂಗ, ರುದ್ರಪ್ಪ, ಶಂಕರ್ ಸೇರಿದಂತೆ ಹಲವಾರು ಜನ ದಲಿತಪರ ಒಕ್ಕೂಟದ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು