ಇತ್ತೀಚಿನ ಸುದ್ದಿ
ಎಲ್ಲೆ ಮೀರುತ್ತಿರುವ ಭ್ರಷ್ಟಾಚಾರ: ತಾಯಿ ಕಾರ್ಡಿಗೂ ಲಂಚದ ಡಿಮಾಂಡ್! ಮೊಬೈಲ್ ನಲ್ಲಿ ನರ್ಸಮ್ಮ ಲಾಕ್!!
12/07/2025, 14:08

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸರಕಾರ ಹಲವು ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡುತ್ತದೆ. ಇದರಲ್ಲಿ ತಾಯಿ ಕಾರ್ಡ್ ಕೂಡ ಒಂದು. ಇಲ್ಲೊಬ್ರು ದಾದಿ, ಫ್ರೀ ಆಗಿ ತಾಯಿ ಕಾರ್ಡ್ ಅನ್ನು ಭರ್ತಿ ಮಾಡಿ ನೀಡಬೇಕಾಗಿದ್ದರೂ ಕೂಡ, ಇಷ್ಟೇ ಹಣ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈಕೆಯ ಲಾಂಚಾವತಾರಕ್ಕೆ ಬೇಸತ್ತ ಸ್ಥಳೀಯರು ನರ್ಸಮ್ಮನ ಡಿಮ್ಯಾಂಡಿನ ಪ್ರಲಾಪವನ್ನು ಮೊಬೈಲ್ ನಲ್ಲಿ ರಹಸ್ಯವಾಗಿ ಸೆರೆ ಹಿಡಿದ್ದಾರೆ.
ಅಂದ ಹಾಗೇ ತಾಯಿ ಕಾರ್ಡ್ ಗಾಗಿ ಲಂಚದ ಡಿಮ್ಯಾಂಡ್ ನ ಈ ಘಟನೆ ನಡೆದಿರುವುದು ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕಿನ ಸಿಲುಪಾಡಿ ಎಂಬಲ್ಲಿನ ಆರೋಗ್ಯ ಇಲಾಖೆಯ ಸಬ್ ಸೆಂಟರ್ ವ್ಯಾಪ್ತಿಯ ಆಲಾಹಳ್ಳಿಯಲ್ಲಿ.