9:53 PM Tuesday31 - March 2026
ಬ್ರೇಕಿಂಗ್ ನ್ಯೂಸ್
ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4… ಭಕ್ತ ಸಾಗರದ ಹರ್ಷೋದ್ಗಾರದೊಂದಿಗೆ ನಡೆದ ನಂಜನಗೂಡಿನ ದೊಡ್ಡ ಜಾತ್ರೆ: ಶ್ರೀ ಗೌತಮ ಪಂಚ…

ಇತ್ತೀಚಿನ ಸುದ್ದಿ

ನಂಬರ್ ಪ್ಲೇಟ್ ಜತೆ ಹೆಸರು ಬರೆಸುವ ಹುಚ್ಚು: ಶಿಕ್ಷಣ ಸಂಸ್ಥೆ, ರಾಷ್ಟ್ರೀಕೃತ ಬ್ಯಾಂಕ್ ಗಳ ಅಧಿಕಾರಿಗಳಿಗೂ ಈ ಶೋಕಿ !!

25/05/2022, 11:35

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಸರಕಾರ ಎರಡು ವರ್ಷ ಗಳ ಹಿಂದೆಯೇ ಜಾರಿಗೊಳಿಸಿರುವ ನಿಯಮನುಸಾರ ವಾಹನದ ನಂಬರ್ ಪ್ಲೇಟ್ ಮೇಲೆ ಯಾವುದೇ ಲೋಗೋ, ಶಿಕ್ಷಣ ಸಂಸ್ಥೆಗಳ ಹೆಸರು ಹಾಕುವಂತಿಲ್ಲ. ಆದರೆ ಶಿಕ್ಷಣ ಸಂಸ್ಥೆಗಳು, ಬ್ಯಾಂಕ್ ಅಧಿಕಾರಿಗಳು, ಖಾಸಗಿ ಸಂಸ್ಥೆಯವರು ನಂಬರ್ ಪ್ಲೇಟ್ ಮೇಲೆ ತಮ್ಮ ಸಂಸ್ಥೆಗಳ ಹೆಸರು, ಡೆಸಿಗ್ನೇಶನ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ.

ನಂಬರ್ ಪ್ಲೇಟ್ ಜತೆಗೆ ಹೆಸರು ಬರೆಸಿಕೊಳ್ಳುವ ಹುಚ್ಚು ಎಲ್ಲಿಯವರೆಗೆ ತಲುಪಿದೆ ಎಂದರೆ ಇತ್ತೀಚೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ತಮ್ಮ ಕಾರಿಗೆ ಸಚಿವ ಕಾರಿನಲ್ಲಿ ಇರುವ ಮಾದರಿಯಲ್ಲಿ ಬರೆಸಿಕೊಂಡಿದ್ದರು. ರಿಪೋರ್ಟರ್ ಕರ್ನಾಟಕ ಈ ಕುರಿತು ವರದಿ ಪ್ರಕಟಿಸಿತ್ತು.

ಮೋಟಾರು ವಾಹನ ಕಾಯಿದೆ ಪ್ರಕಾರ ನಂಬರ್ ಪ್ಲೇಟ್ ಮೇಲ್ಭಾಗದಲ್ಲಿ ಸರ್ಕಾರಿ ಲೋಗೋ ಹಾಕುವುದದರೂ ಸರಕಾರದ ಅನುಮತಿ ಪಡೆಯಬೇಕು. ಆದರೆ ಇತ್ತೀಚೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಮಾನ್ಯ ಮೆನೇಜರ್ ಗಳು ಕೂಡ ತಮ್ಮ ಹೊರಗುತ್ತಿಗೆಯ ವಾಹನದ ಮೇಲೆ Govt of India ಎಂದು ಬರೆಸುವುದು ಸಾಮಾನ್ಯವಾಗಿದೆ. ಇದೀಗ ರಾಜ್ಯದಲ್ಲಿ ಯಾವುದೇ ಖಾಸಗಿ ವಾಹನ ಹಾಗೂ ಸರಕಾರಿ ವಾಹನಗಳ ನಂಬರ್ ಪ್ಲೇಟ್ ನಲ್ಲಿ ಯಾವುದೇ ಸ್ಟಿಕರ್ ಅಥವಾ ಲೋಗೋ ಇರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ

ಹೀಗಿರುವಾಗ ಕೆವಿಜಿ ಡೆಂಟಲ್ ಕಾಲೇಜು ಅಂಡ್ ಹಾಸ್ಪಿಟಲ್ ವಾಹನ, ರಾಷ್ಟೀಕೃತ ಬ್ಯಾಂಕ್ ಗಳು ಕೂಡ ಹೊರತಲ್ಲ. ಕೆವಿಜಿ ಸಂಸ್ಥೆಯ  ವಾಹನದ ಹಿಂಭಾಗ ನಂಬರ್ ಪ್ಲೇಟ್ ಕೆವಿಜಿ ಸಂಸ್ಥೆಯ ಹೆಸರು ಅಳವಡಿಸಲಾಗಿದೆ. ಇಂತಹ ಹತ್ತಾರು ಸಂಸ್ಥೆಗಳ ವಾಹನದ ನಂಬರ್ ಪ್ಲೇಟ್ ಜತೆಗೆ ಸಂಸ್ಥೆಯ ಹೆಸರಿದೆ. ಕೆವಿಜಿ ಒಂದು ಉದಾಹರಣೆ ಅಷ್ಟೇ. ಅಲ್ಲದೆ ಪಂಚಿಂಗ್   ನಂಬರ್ ಪ್ಲೇಟ್ ಅಳವಡಿಸುವ ನಿಯಮವು ಇದೆ. ಅದು ಈ ವಾಹನದಲಿಲ್ಲ, ನೊಂದಣಿ ಸಂಖ್ಯೆಯ ಮಾತ್ರ ಅಳವಡಿಸಬೇಕೆಂಬ ಸೂಚನೆ ಇದ್ದು. ಶಿಕ್ಷಣ ಸಂಸ್ಥೆಗಳೇ ಈ ರೀತಿ ನಿಯಮ ಉಲ್ಲಂಘಿಸಿದರೆ ಜನಸಾಮಾನ್ಯರು ಎಡವುದು ಸಾಮಾನ್ಯ.ಈ ಬಗ್ಗೆ ಸಂಬಂಧಪಟ್ಟ ಆರ್. ಟಿ. ಓ ಕ್ರಮ ಗೊಳ್ಳುವ ಅವಶ್ಯಕತೆ ಇದೆ.

1989 ಮೋಟರು ಕಾಯ್ದೆ ಪ್ರಕಾರ ಕಡ್ಡಾಯ ನಿಯಮಗಳನ್ನು ಪಾಲಿಸಬೇಕು. ಇದಕ್ಕೆ ಸರಕಾರಿ, ಖಾಸಗಿ ಕಾಲೇಜು, ಸಂಘ ಸಂಸ್ಥೆಗಳು, ಹೊರತಾಗಿಲ್ಲ.ಯಾವುದೇ ಲೋಗೋ, ಸರಕಾರಿ ಲಾಂಛನ , ಇನ್ನಿತರ ಯಾವುದೇ ಹೆಸರುಗಳು ಹಾಕುವಂತಿಲ್ಲ.ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಸೂಚಿಸಿದೆ. ಇನ್ನೂ  ಹಲವಾರು ಖಾಸಗಿ 

ವಾಹನಗಳ ನಂಬರ್ ಪ್ಲೇಟ್ ಜತೆ ಈ ರೀತಿಯ  ಫಲಕವನ್ನು ಹೊಂದಿದ್ದು.ಸಂಬಂಧ ಪಟ್ಟ ಕ್ರಮ ಜರುಗಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು