ಇತ್ತೀಚಿನ ಸುದ್ದಿ
ಎನ್ನೆಸ್ಸೆಸ್, ನೆಹರು ಯುವ ಕೇಂದ್ರದ ವತಿಯಿಂದ ಮಂಗಳೂರು ಹೃದಯ ಭಾಗದಲ್ಲಿ ಸ್ವಚ್ಛತಾ ಅಭಿಯಾನ
20/10/2021, 11:37
ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ ಹಾಗೂ ರೋಟರಿ ಕ್ಲಬ್ ಮಂಗಳೂರು ಜಂಟಿ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರಿನ ಹೃದಯ ಭಾಗದಲ್ಲಿರುವ ಸೆಂಟ್ರಲ್ ಮಾರ್ಕೆಟ್ ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಸ್ವಚ್ಛತಾ ಅಭಿಯಾನ ಜರುಗಿತು.
ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ., ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆ, ರೋಟರಿ ಕ್ಲಬ್ ನ ಡಾ. ರಂಜನ್ ಹಾಗೂ ಕಾನ್ಯೂಟ್ ಪಿಂಟೋ ಸ್ವಚ್ಛತಾ ಅಭಿಯಾನದಲ್ಲಿ ಉಪಸ್ಥಿತರಿದ್ದರು.
ಸುತ್ತ ಮುತ್ತ ಅಂಗಡಿಗಳ ಮಾಲೀಕರಿಗೆ ತಮ್ಮ ಸುತ್ತ ಮುತ್ತ ಪ್ಲಾಸ್ಟಿಕ್ ಎಸೆಯದಂತೆ ಮನವರಿಕೆ ಮಾಡಲಾಯಿತು.
ವಿಶ್ವ ವಿದ್ಯಾನಿಲಯ ಕಾಲೇಜಿನ ಹಾಗೂ ರಥ ಬೀದಿ ಪ್ರಥಮ ದರ್ಜೆ ಕಾಲೇಜಿನ ರಾ. ಸೇ.ಯೋ ಸ್ವಯಂ ಸೇವಕ, ಸೇವಕಿಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.