11:38 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ಹಿರಿಯೂರು: ನವಂಬರ್ 28ರಂದು ವಧು-ವರರ ಉಚಿತ ಸಮಾವೇಶ 

23/11/2021, 08:55

 
ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಹಿರಿಯೂರು ಗ್ರಾಮೀಣ ಮತ್ತು ನಗರ ಪ್ರದೇಶಗಳ ಕುಂಚಿಟಿಗ ಸಮುದಾಯದವರ ಗಂಡು- ಹೆಣ್ಣು ನೋಡಲಿಕ್ಕೆ ಯಾವುದೇ ಮಧ್ಯವರ್ತಿಗಳ ಕಮಿಷನ್ ಇಲ್ಲದೆ ಉಚಿತವಾಗಿ ಒಂದೇ ಸೂರಿನಡಿ ನಡೆಯುವ ಕಾರ್ಯಕ್ರಮವಾಗಿದೆಯೇ ಹೊರತು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಇದು ಸಮುದಾಯದವರ ಅಭ್ಯುದಯದ ಕಾರ್ಯಕ್ರಮವಾಗಿದೆ ಎಂಬುದಾಗಿ  ಸಪ್ತಪದಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹೇಳಿದರು.
ಧರ್ಮಪುರದಲ್ಲಿ ಸೋಮವಾರದಂದು ಸಪ್ತಪದಿ ಸೇವಾ ಟ್ರಸ್ಟ್ ವತಿಯಿಂದ ಹಿರಿಯೂರಿನಲ್ಲಿ ನವಂಬರ್ 28ರ ಭಾನುವಾರದಂದು ನಡೆಯಲಿರುವ ಉಚಿತ ವಧು ವರರ ಸಮಾವೇಶದ ನಿಮಿತ್ತ ಕರೆಯಲಾಗಿದ್ದ ಕುಂಚಿಟಿಗ ವಧು-ವರರ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಭೆಯಲ್ಲಿ ಧರ್ಮಪುರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಜಕುಮಾರ್, ನಿರ್ದೇಶಕ ನರೇಂದ್ರಪ್ಪ, ಪ್ರಾಂಶುಪಾಲರಾದ ವಸಂತಕುಮಾರ್, ಡಾ.ವಿ.ವೀರಣ್ಣ, ಉಪನ್ಯಾಸಕರಾದ ವೆಂಕಟೇಶ್, ನಾ.ಸಿದ್ದೇಶ್ವರ, ತಿಪ್ಪೇಸ್ವಾಮಿ, ರಂಗೇಗೌಡ, ಶ್ರೀನಿವಾಸ್, ಹರಿಯಬ್ಬೆ ಮಂಜುನಾಥ್, ಯೋಗೇಂದ್ರಪ್ಪ, ಸಕ್ಕರ ನಾಗೇಂದ್ರ, ಶಿವಪ್ರಸಾದಗೌಡ, ರಾಘು, ಏಲಕ್ಕಿ ತಮ್ಮಣ್ಣ, ರಂಗಸ್ವಾಮಿ, ಸುಬ್ರಮಣಿ, ಪ್ರವೀಣ್, ರಂಗನಾಥ್, ಉದಯ್ ಗೌಡ, ಕೃಷ್ಣಪ್ಪ, ಹನುಮಂತರಾಯ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು