12:16 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ನೋಡುಗರ ಕೌತುಕಕ್ಕೆ ಕಾರಣವಾಗಿ ವಿಚಿತ್ರ ಅಣಬೆ!: ಪ್ರಕೃತಿ ವೈಚಿತ್ರ್ಯದ ಸೊಬಗು ಇಲ್ಲಿದೆ ನೋಡಿ!

14/10/2023, 12:02

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.ಕಂ

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಗಿರೀಶ್ ಎಂಬುವರ ತೋಟದಲ್ಲಿ ವಿಚಿತ್ರ ಅಣಬೆವೊಂದು ಹುಟ್ಟಿದ್ದು ನೋಡುಗರ ಕೌತುಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಅಣಬೆಗಳು ಹುಟ್ಟೋದೇ ರಾತ್ರಿ ವೇಳೆ. ರಾತ್ರಿ ಹುಟ್ಟಿ ಸಂಜೆ ವೇಳೆಗೆ ಬಾಡಿ ಹೋಗುತ್ತೆ. ಆದ್ರೆ, ನಿನ್ನೆ ಸಂಜೆ ಇಲ್ಲದ ಈ ವಿಚಿತ್ರ ಅಣಬೆ ಬೆಳಗಾಗುವಷ್ಟರಲ್ಲಿ ವಿಚಿತ್ರವಾಗಿ ಬೆಳೆದಿದೆ. ಈ ರೀತಿಯ ಅಣಬೆಗಳು ಬೆಳೆಯುತ್ತೆ. ಆದರೆ, ತುಂಬಾ ವಿರಳ. ಇದನ್ನ ಮೆಟ್ಟಿಲು ಅಣಬೆ ಅಥವ ಬಲೆ ಅಣಬೆ ಅಂತಾನೂ ಕರೆಯುತ್ತಾರೆ. ಗುಡುಗು-ಸಿಡಿಲು-ಮಿಂಚು ಬರುವ ವೇಳೆ ಈ ರೀತಿಯ ಅಣಬೆಗಳು ಹುಟ್ಟುತ್ತೆ ಅನ್ನೋದು ಹಿರಿಯ ನಂಬಿಕೆ. ನಿನ್ನೆ ಸಂಜೆ ಚಿಕ್ಕಮಗಳೂರು

ತಾಲೂಕಿನ ಮಲೆನಾಡು ಭಾಗದಲ್ಲಿ ಸಮೃದ್ಧ ಮಳೆಯಾಗಿದೆ.

ಮಲ್ಲಂದೂರು ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಗುಡುಗು-ಮಿಂಚು-ಸಿಡಿಲು ಕೂಡ ಇತ್ತು. ಹಾಗಾಗಿ, ನಿನ್ನೆ ಸಂಜೆ ಇಲ್ಲದ ಈ ಅಣಬೆ ಬೆಳಗಾಗುವಷ್ಟರಲ್ಲಿ ಈ ರೀತಿ ವಿಚಿತ್ರವಾಗಿ ಬೆಳೆದಿದ್ದು ನೋಡುಗುರ ಪ್ರಕೃತಿಯಲ್ಲಿನ ವೈಚಿತ್ರ್ಯದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ, ಇತ್ತೀಚಿನ ಹಲವು ವರ್ಷಗಳಲ್ಲಿ ಈ ರೀತಿಯ ಇಷ್ಟು ದೊಡ್ಡ ಬಲೆ ಅಣಬೆ ಬೆಳೆದಿರಲಿಲ್ಲ. ಈ ಬಾರಿ ಮಳೆಗಾಲದಲ್ಲಿ ಸಮರ್ಪಕ ಮಳೆ ಆಗಿಲ್ಲ. ಈಗ ಧಾರಾಕಾರ ಮಳೆ ಸುರಿಯುತ್ತಿದೆ. ಈಗ ಬೆಳೆದಿರುವುದು ಪ್ರಕೃತಿಯ ಅಸಮಾತೋಲನದಿಂದಲೇ ಈ ರೀತಿಯ ಬಲೆ ಅಣಬೆ ಹುಟ್ಟಿದೆ ಅನ್ನೋದು ಸ್ಥಳಿಯರು ಮಾತು.

ಇತ್ತೀಚಿನ ಸುದ್ದಿ

ಜಾಹೀರಾತು