10:47 AM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ನಿಯಮ ಉಲ್ಲಂಘನೆ; ಇಂಡಿಗೋ, ಸ್ಪೈಸ್​ಜೆಟ್​ ಬಳಿಕ ಏರ್​ ವಿಸ್ತಾರಾಗೂ ಬಿತ್ತು 10 ಲಕ್ಷ ರೂ. ದಂಡ..!

03/06/2022, 11:53

ಹೊಸದಿಲ್ಲಿ(reporterkarnataka.com): ಕೆಲ ದಿನಗಳ ಹಿಂದೆ ಇಂಡಿಗೋ ಹಾಗೂ ಸ್ಪೈಸ್​ಜೆಟ್​ ಏರ್​ಲೈನ್ಸ್​ಗೆ ದಂಡ ವಿಧಿಸಿದ್ದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಇದೀಗ ಏರ್​ ವಿಸ್ತಾರಾಗೂ 10 ಲಕ್ಷ ರೂಪಾಯಿ ದಂಡ ಹಾಕಿದೆ.

ಮಧ್ಯಪ್ರದೇಶದ ಇಂದೋರ್​​ ವಿಮಾನ ನಿಲ್ದಾಣದಲ್ಲಿ ತರಬೇತಿ ಇಲ್ಲದ ಪೈಲಟ್​​ನಿಂದ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ಮಾಡಿಸಿದ್ದಕ್ಕಾಗಿ ಈ ದಂಡ ವಿಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡಿಜಿಸಿಎ ನೀಡಿರುವ ಟೇಕಾಫ್​ ಮತ್ತು ಲ್ಯಾಂಡಿಂಗ್​ ಕ್ಲಿಯರೆನ್ಸ್​ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಏರ್​ಲೈನ್ಸ್​ ಕಂಪನಿಗೆ ದಂಡ ಹಾಕಲಾಗಿದೆ. ಏರ್​​ಲೈನ್ಸ್​ ಕಂಪನಿ ತೆಗೆದುಕೊಂಡಿರುವ ನಿಯಮದಿಂದ ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇತ್ತು. ಇದೊಂದು ಗಂಭೀರ ನಿಯಮ ಉಲ್ಲಂಘನೆ ಅಪರಾಧವಾಗಿದೆ ಎಂದಿದೆ.

ಸಿಮ್ಯುಲೇಟರ್​​ನಲ್ಲಿ ಅಗತ್ಯ ತರಬೇತಿ ಪಡೆಯದ ಪೈಲಟ್​​ ವಿಮಾನ ಲ್ಯಾಂಡ್ ಮಾಡಿದ್ದು, ಫರ್ಸ್ಟ್ ಆಫೀಸರ್ ವಿಮಾನವನ್ನು ಲ್ಯಾಂಡ್ ಮಾಡುವುದಕ್ಕೂ ಮುನ್ನ ಸಿಮ್ಯುಲೇಟರ್​​ನಲ್ಲಿ ತರಬೇತಿ ಪಡೆದಿರಬೇಕು. ಈ ರೀತಿ ತರಬೇತಿ ಪಡೆದವರನ್ನು ಲ್ಯಾಂಡ್ ಮಾಡುವುದಕ್ಕೆ ಅನುಮತಿಸುವ ಕ್ಯಾಪ್ಟನ್ ಸಹ ತರಬೇತಿ ಪಡೆದಿರಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ 30ರಂದು ಈ ಘಟನೆ ನಡೆದಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು