ಇತ್ತೀಚಿನ ಸುದ್ದಿ
ನಿಟ್ಟೆ: ಜೀವನದಲ್ಲಿ ಜಿಗುಪ್ಸೆಯಿಂದ ಯುವತಿ ನೇಣು ಬಿಗಿದು ಆತ್ಮಹತ್ಯೆ
07/09/2022, 20:27
ಕಾರ್ಕಳ(reporterkarnataka.com): ನಿಟ್ಟೆ ಗ್ರಾಮದ ಪರ್ಪಲೆ ಎಂಬಲ್ಲಿ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ರೆನಿಟಾ (32) ಎಂದು ಗುರುತಿಸಲಾಗಿದೆ.
ಮೃತ ರೆನಿಟಾ ಅವರಿಗೆ 11 ವರ್ಷದ ಹಿಂದೆ ಮುಲ್ಕಿಯ ಕಿರಣ್ ನೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ 6 ವರ್ಷದಲ್ಲೆ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಪಡೆದಿದ್ದರು. ಮೃತ ರೆನಿಟಾ ರವರು ಕಳೆದ 2-3 ದಿನಗಳಿಂದ ತಲೆ ನೋವು ಆಗುತ್ತಿರುವುದಾಗಿ ತಿಳಿಸುತ್ತಿದ್ದು ಗುರುವಾರ ಮನೆಯ ಹಿಂಬದಿಯ ಹಾಡಿಯಲ್ಲಿ ಗೇರು ಮರದ ಗೆಲ್ಲಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಾರ್ಕಳ ಗ್ರಾ ಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














