4:24 PM Thursday13 - November 2025
ಬ್ರೇಕಿಂಗ್ ನ್ಯೂಸ್
Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ…

ಇತ್ತೀಚಿನ ಸುದ್ದಿ

ಎನ್ ಐಟಿಕೆ ಮತ ಎಣಿಕೆ ಕೇಂದ್ರ: ವಾಹನಗಳ ಪಾರ್ಕಿಂಗ್ ಸ್ಥಳ ಹಾಗೂ ಪಾರ್ಕಿಂಗ್ ನಿಷೇಧ ಪ್ರದೇಶದ ವಿವರ ಇಲ್ಲಿದೆ ನೋಡಿ

12/05/2023, 23:43

ಮಂಗಳೂರು(reporterkarnataka.com): ಸುರತ್ಕಲ್ ಎನ್.ಐ.ಟಿ.ಕೆ ಯಲ್ಲಿ ವಿಧಾನ ಸಭಾ ಚುನಾವಣೆಯ ಮತ ಎಣಿಕೆಯ ಕಾರ್ಯ ಮೇ 13ರಂದು ನಡೆಯದಿರುವುದರಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರುಗಳ ಹಾಗೂ ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಮಾಡಲಾಗಿರುವ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಪಾರ್ಕಿಂಗ್ ಸ್ಥಳಗಳ ವಿವರ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳ ವಿವರಗಳು ಈ ಕೆಳಗಿನಂತಿದೆ.
ವಾಹನ ನಿಲುಗಡೆ ಸ್ಥಳಗಳು: ಮಂಗಳೂರು ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ಎನ್.ಐ.ಟಿ.ಕೆ ಜಂಕ್ಷನ್ ಬಳಯಲ್ಲಿ ಎಡಕ್ಕೆ ತಿರುಗಿ ಎನ್.ಐ.ಟಿ.ಕೆ ಕ್ಯಾಂಪಸ್‌ನ ಅಂಡರ್‌ಪಾಸ್‌ ಮುಖಾಂತರ ನಾಲು ಚಕ್ರ (4-Wheeler) ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿರುವ ಎನ್.ಐ.ಟಿ.ಕೆ. ವಸತಿಗೃಹದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದು. ಅದೇ ರೀತಿ, ದ್ವಿ-ಚಕ್ರ (2-Wheeler) ವಾಹನಗಳನ್ನು ಎನ್.ಐ.ಟಿ.ಕೆ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಮೈದಾನದಲ್ಲಿ ನಿಲುಗಡೆ ಮಾಡುವುದು. ಅಥವಾ ಸುರತ್ಕಲ್ ಸುಪ್ರಿಂ: ಮಹಲ್ ಸಮುದಾಯ ಭವನ (Supreme Mahal Community Hall)ನ ಬಳ ರಾಷ್ಟ್ರೀಯ ಹೆದ್ದಾರಿಯಿಂದ ಎಡಬದಿಯ ತಡಂಬೈಲ್‌ ಸದಾಶಿವ ಮಹಾ ಗಣಪತಿ ದೇವಸ್ಥಾನ ರಸ್ತೆಯಲ್ಲಿ ಸಾಗಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
ಮುಲ್ಕಿ ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ಎನ್.ಐ.ಟಿ.ಕೆ ಜಂಕ್ಷನ್ ಬಳಯಲ್ಲಿ ಬಲಕ್ಕೆ ತಿರುಗಿ, ಎನ್.ಐ.ಟಿ.ಕೆ ಕ್ಯಾಂಪಸ್‌ನ ಅಂಡರ್‌ಪಾಸ್‌ ಮುಖಾಂತರ ನಾಲು ಚಕ್ರ (4-Wheeler) ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿರುವ ಎನ್.ಐ.ಟಿ.ಕೆ ವಸತಿಗೃಹದ ಬಳಯ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದು, ಅದೇ ರೀತಿ ದ್ವಿ-ಚಕ್ರ (2-Wheeler) ವಾಹನಗಳನ್ನು ಎನ್.ಐ.ಟಿ.ಕೆ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಮೈದಾನದಲ್ಲಿ ನಿಲುಗಡೆ ಮಾಡುವುದು, ಅಥವಾ ರಾಷ್ಟ್ರೀಯ ಹೆದ್ದಾರಿಯ ಸುಪ್ರಿಂ ಮಹಲ್ ಸಮುಧಾಯ ಭವನ (Supreme Mahal Community Hall)ನ ಬಳಿ ಯು-ಟರ್ನ್ ಮಾಡಿ ಎಡಬದಿಯ ತಡಂಬೈಲ್ ಸದಾಶಿವ ಮಹಾ ಗಣಪತಿ ದೇವಸ್ಥಾನ ರಸ್ತೆಯಲ್ಲಿ ಸಾಗಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
ಮತ ಎಣಿಕೆ ಕರ್ತವ್ಯಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಎನ್.ಐ.ಟಿ.ಕೆ ಯ ಮುಖ್ಯ ದ್ವಾರದ ಮೂಲಕ ಒಳ ಪ್ರವೇಶಿಸಿ ಎನ್.ಐ.ಟಿ.ಕೆ ಫುಟ್‌ಬಾಲ್ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದು.


ವಾಹನ ನಿಲುಗಡೆ ನಿಷೇದಿತ ಸ್ಥಳಗಳು:
ರಾಷ್ಟ್ರೀಯ ಹೆದ್ದಾರಿ-66 ರ ಬಳ ಇರುವ ಎನ್.ಐ.ಟಿ.ಕೆ ಸಮೀಪದ ಸುಪ್ರಿಂ ಮಹಲ್‌ ಸಮುಧಾಯ ಭವನ (Supreme Mahal Community Hall) ನಿಂದ ಟೋಲ್ ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಸರ್ವಿಸ್ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ಬೆಳಗ್ಗೆ 6-00 ಗಂಟೆಯಿಂದ ಮತ ಎಣಿಕೆ ಕಾರ್ಯ ಮುಗಿಯುವವರೆಗೆ ಸಂಪೂರ್ಣ ನಿಷೇಧಿಸಲಾಗಿದೆ.

ವಿಶೇಷ ಸೂಚನೆ: ಮತ ಎಣಿಕೆ ಕೇಂದ್ರಕ್ಕೆ ಸಾಕಷ್ಟು ಸಾರ್ವಜನಿಕರು ಆಗಮಿಸುವ ಕಾರಣದಿಂದಾಗಿ, ಎನ್.ಐ.ಟಿ.ಕೆ ಯ ಬಳಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿದ್ದು, ಆಗ್ಗಾಗಿ ಸದರಿ ರಸ್ತೆಯಲ್ಲಿ ಉಡುಪಿ ಹಾಗೂ ಮಂಗಳೂರು ಕಡೆಗಳಿಗೆ ಸಂಚರಿಸುವ ಸಾರ್ವಜನಿಕರು ಬದಲ ರಸ್ತೆಯನ್ನು ಉಪಯೋಗಿಸುವಂತೆ ಕೋರಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು