ಇತ್ತೀಚಿನ ಸುದ್ದಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಣಸಗಿ ತಾಲೂಕು ಅಧ್ಯಕ್ಷರಾಗಿ ನಿಂಗಣ್ಣ ಕಟ್ಟಿಮನಿ ಆಯ್ಕೆ
13/03/2025, 11:03

ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com
ಪ್ರೊ. ಬಿ. ಕೃಷ್ಣಪ್ಪ ನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಹುಣಸಗಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ನಿಂಗಣ್ಣ ಎಂ. ಗೋನಲ್ (ಜಿಲ್ಲಾ ಸಂಚಾಲಕರು ಯಾದಗಿರಿ) ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್. ಆರ್. ಬಡಿಗೇರ್ ಹಾಗೂ ಸುರಪುರ ತಾಲೂಕು ಡಿಎಸ್ ಎಸ್ ಮುಖಂಡರಾದ ಭೀಮಣ್ಣ ಅಡ್ಡಡೊಡಗಿ ಹಾಗೂ ಹನುಮಂತ ದೊಡ್ಡಮನಿ ಅವರು ಈ ಸಭೆಯಲ್ಲಿ ಉಪಸ್ಥಿತರಿದ್ದರು ಹುಣಸಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಕುಂದು ಕೊರತೆಗಳ ಬಗ್ಗೆ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಸಂಚಾಲಕರ ನೇತೃತ್ವದಲ್ಲಿ ನೆರವೇರಿತು .
ಹುಣಸಗಿ ತಾಲೂಕು ಸಂಚಾಲಕರಾಗಿ ನಿಂಗಣ್ಣ ಅವರು ಆಯ್ಕೆಯಾಗಿದ್ದಾರೆ ಹಾಗೂ ಸಂಘಟನಾ ಸಂಚಾಲಕರಾಗಿ ಸುರೇಶ,
ಶರಣು, ಶಿವಪ್ಪ, ಮಹಾಂತೇಶ, ರವಿ, ಶಿವಶರಣಪ್ಪ, ಹನುಮಂತ್ರಾಯ ದೊಡ್ಮನೆ , ಶೇಖರ್ ಸುರಪುರ , ಜೆಟ್ಟಪ್ಪ ಹಾದಿಮನಿ , ಪರಶುರಾಮ್ ಚಲವಾದಿ, ಪರಶುರಾಮ್ ಸುರಪುರ, ಜೆಟ್ಟಪ್ಪ ಕಚಕನೂರ ಅವರು ಆಯ್ಕೆಗೊಂಡರು.