ಇತ್ತೀಚಿನ ಸುದ್ದಿ
ನೀಲೇಶ್ವರ: ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರುಗೆ ‘ಪತ್ರಿಕಾ ದಿನ ಪ್ರಶಸ್ತಿ’ ಪ್ರದಾನ
13/07/2025, 14:40

ಕಾಸರಗೋಡು(reporterkarnataka.com):ಕಾಸರಗೋಡು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ‘ಪತ್ರಿಕಾ ದಿನ ಪ್ರಶಸ್ತಿ’ಯನ್ನು ಇಂದು ನೀಲೇಶ್ವರದ ತಾಜ್ ಕ್ರೂಸ್ ಬೋಟ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರು ಅವರಿಗೆ ಪ್ರದಾನಿಸಲಾಯಿತು.
ಗಂಗಾಧರ ಪಿಲಿಯೂರು ಅವರು ರಾಜ್ಯಮಟ್ಟದ ಹಲವು ಕನ್ನಡ ದಿನಪತ್ರಿಕೆ, ಸಂಜೆ ಪತ್ರಿಕೆ ಹಾಗೂ ವಾರ ಪತ್ರಿಕೆಗಳಲ್ಲಿ ದುಡಿದು ಅನುಭವ ಹೊಂದಿದ್ದಾರೆ. ರಂಗ ಕಲಾವಿದನೂ ಆಗಿರುವ ಅವರು ನಾಟಕ ನಿರ್ದೇಶನ ಕೂಡ ಮಾಡಿದ್ದಾರೆ. ಪತ್ರಿಕಾ ರಂಗದಲ್ಲಿ ಅವರು ನೀಡಿದ ಅನುಪಮ ಸೇವೆಯ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ದೊರೆತಿದೆ.
ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಗಂಗಾಧರ ಪಿಲಿಯೂರು ಅವರ ಪತ್ನಿ ಧನ್ಯಾ ಜಿ. ಪಿಲಿಯೂರು ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.