4:20 AM Saturday14 - February 2026
ಬ್ರೇಕಿಂಗ್ ನ್ಯೂಸ್
ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ ಸೋಮವಾರಪೇಟೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು,… ನಟ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 100 ಕಿಮೀ. ನಡಿಗೆ Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ

ಇತ್ತೀಚಿನ ಸುದ್ದಿ

ನೈಟ್ ಕರ್ಫ್ಯೂ ನೆಪದಲ್ಲಿ ಪೊಲೀಸ್ ದರ್ಬಾರ್: ಸಂಕಷ್ಟದಲ್ಲಿ ಫುಡ್ ಡೆಲಿವರಿ ಬಾಯ್ ಗಳು, ಸಾರ್ವಜನಿಕರು!

03/08/2022, 22:49

ಸಾಂದರ್ಭಿಕ ಚಿತ್ರ
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾತ್ರಿ ಕರ್ಫ್ಯೂ ಬಂದೋಬಸ್ತ್ ನೆಪದಲ್ಲಿ ಪೊಲೀಸ್ ದರ್ಬಾರ್ ಜಾಸ್ತಿಯಾಗಿದ್ದು, ಸಿಕ್ಕ ಸಿಕ್ಕ ಕಡೆ ವಾಹನ ಸವಾರರ ಮೇಲೆ ದಂಡ ಹಾಕುವ, ದಾಖಲೆ ಪರಿಶೀಲಿಸುವ ಕೆಲಸ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರು ಕೇಳಿ ಬರುತ್ತಿದೆ.

ಸುರತ್ಕಲ್ ನಲ್ಲಿ ಫಾಝಿಲ್ ಕೊಲೆ ನಡೆದ ಬಳಿಕ ‘ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಮುಚ್ಚಿದರು’ ಎನ್ನುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಸಂಜೆ 6ರ ಬಳಿಕ ನೈಟ್ ಕರ್ಫ್ಯೂ ವಿಧಿಸಿ ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರ ಹೊಟ್ಟೆ ಮೇಲೆ ಕಲ್ಲು ಚಪ್ಪಡಿ ಎಳೆದಿದೆ. 

ಮುಂಜಾಗರುಕತೆ ಕ್ರಮವಾಗಿ ಸಂಜೆ 6 ಗಂಟೆಯ ನಂತರ ರಸ್ತೆಯ ಆಯಕಟ್ಟಿನ ಜಾಗದಲ್ಲಿ ಬ್ಯಾರಿಗೇಟ್ ಹಾಕಿ ತಪಾಸಣೆ ನಡೆಸುವ ನೆಪದಲ್ಲಿ ಡೆಲಿವರಿ ಬಾಯ್ ಆರಂಭಗೊಂಡು ಜನಸಾಮಾನ್ಯರನ್ನು ಪೀಡಿಸಲು ಆರಂಭಿಸಿದೆ. ದ್ವಿಚಕ್ರ ವಾಹನಗಳು, ಹಳೆಯ ಸಣ್ಣ ಕಾರುಗಳ ಮಾಲೀಕರು ಇವರ ಟಾರ್ಗೆಟ್. ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುವವರಿಗೆ ಇವರದ್ದೇನು ತೊಂದರೆ ಇಲ್ಲ.

ಪೊಲೀಸರು ದಂಡದ ನೆಪದಲ್ಲಿ ವಿಚಾರಣೆ, ಆರ್ಡರ್ ಪ್ರೊಫ್ ಇದ್ದರೂ ಡಾಕ್ಯುಮೆಂಟ್ ಚೆಕ್ಕಿಗ್ ನೆಪದಲ್ಲಿ  ದರ್ಬಾರ್ ನಡೆಸುತ್ತಾರೆ. ಫುಡ್ ಡೆಲಿವರಿ ಬಾಯ್ ಗಳಂತೂ ಇದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಡೆಲಿವರಿ ವಿಳಂಬವಾದರೆ ಗ್ರಾಹಕರು ಡೆಲಿವರಿ ಬಾಯ್ ಜತೆ ಜಗಳಕ್ಕೆ ನಿಲ್ಲುತ್ತಾರೆ. ಆರ್ಡರ್ ಕ್ಯಾನ್ಸಲ್ ಆದ ನಿದರ್ಶನವೂ ಇದೆ. ಇದ್ಯಾವುದೂ ಜಿಲ್ಲಾಧಿಕಾರಿಗಳಿಗಾಗಲಿ, ಪೊಲೀಸ್ ಕಮಿಷನರ್ ಅವರಿಗಾಲಿ ಅಥವಾ ನಮ್ಮನ್ನು ಆಳುವವರಿಗಾಗಲಿ ಅರ್ಥವಾಗುವುದಿಲ್ಲ.
ವಿಶೇಷ ಎಂದರೆ 9 ಗಂಟೆಯ ನಂತರ ಯಾವ ಪೊಲೀಸರು ಬ್ಯಾರೀಕೆಡ್ ಪಕ್ಕ ಇಲ್ಲ.ಯಾವ ತಪಾಸಣೆಯು ಇಲ್ಲ.


ಈ ಹಿಂದೆ ಪೊಲೀಸ್ ಆಯುಕ್ತ  ನೀಡಿರುವ ಆದೇಶ ಪ್ರಕಾರ ಫುಡ್ ಡೆಲಿವರಿಯ ಫುಡ್ ಆರ್ಡರ್ ದಾಖಲೆ ತೋರಿಸಿ ಸಂಚರಿಸಲು ಅವಕಾಶ ಇತ್ತು. ಆದರೀಗ ಗಂಟೆ ಗಟ್ಟಲೆ ನಿಲ್ಲಿಸಿ ಡಾಕ್ಯುಮೆಂಟ್ ಚೆಕ್ಕಿಂಗ್,  ದಂಡ ವಸೂಲಿಯಿಂದ ಎಲ್ಲೂ ಕಷ್ಟವಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಕಾರ್ಯ ನಿರತ ಪೊಲೀಸರಿಗೆ ಮಾರ್ಗದರ್ಶನ ನೀಡಬೇಕಾದ ಅನಿವಾರ್ಯ ಎದುರಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು