12:33 PM Friday5 - December 2025
ಬ್ರೇಕಿಂಗ್ ನ್ಯೂಸ್
New Delhi | ಬೆಳ್ಳಿ ವಸ್ತು, ಆಭರಣಗಳಿಗಿನ್ನು BIS ಹಾಲ್‌ಮಾರ್ಕ್‌, HUID ಕಡ್ಡಾಯ ರಾಜ್ಯ ಸರಕಾರ ಅನ್ನದಾತ ರೈತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಮಾಜಿ ಗೃಹ ಸಚಿವ… ವಿಶೇಷ ಚೇತನರು ಇನ್ನು ವಿಮಾನವೇರುವುದು ಸುಲಭ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಮೊಬಿಲಿಟಿ… ಕೊಡಗಿನಲ್ಲಿ ಮುಂದುವರಿದ ಆನೆ- ಮಾನವ ಸಂಘರ್ಷ: ಕುಶಾಲನಗರ ಬಳಿ ರೈಲ್ವೆ ಬ್ಯಾರಿಕೇಡ್ ಮುರಿದ… ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ

ಇತ್ತೀಚಿನ ಸುದ್ದಿ

New Delhi | ಬೆಳ್ಳಿ ವಸ್ತು, ಆಭರಣಗಳಿಗಿನ್ನು BIS ಹಾಲ್‌ಮಾರ್ಕ್‌, HUID ಕಡ್ಡಾಯ

05/12/2025, 12:33

* ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ

* ಮಾನದಂಡ ಪರಿಷ್ಕೃತ, 958, 999 ಎರಡು ಹೊಸ ಶ್ರೇಣಿ ಸೇರ್ಪಡೆ

* 17.35 ಲಕ್ಷಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು HUID-ಹಾಲ್‌ಮಾರ್ಕ್‌ ವ್ಯಾಪ್ತಿಗೆ

ನವದೆಹಲಿ(reporterkarnataka.com): ಕೇಂದ್ರ ಸರ್ಕಾರ ಇದೀಗ ಬೆಳ್ಳಿ ಮತ್ತು ಬೆಳ್ಳಿ ಆಭರಣಗಳ ಗುಣಮಟ್ಟ ಕಾಪಾಡುವಲ್ಲಿ #BIS ಹಾಲ್‌ಮಾರ್ಕ್‌ ಮತ್ತು #HUID ಅನ್ನು ಕಡ್ಡಾಯಗೊಳಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಬೆಳ್ಳಿಯ ಗುಣಮಟ್ಟದಲ್ಲಿ ಅತ್ಯುತ್ತಮ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಲ ಇಲಾಖೆ ಈ ಕ್ರಮ ಕೈಗೊಂಡಿದೆ. BIS ಹಾಲ್‌ಮಾರ್ಕ್‌ ಮಾಡಿದ ಪ್ರತಿ ಬೆಳ್ಳಿ ವಸ್ತು, ಆಭರಣಗಳ ಮೇಲೆ #HUID ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತದಲ್ಲಿ 17.35 ಲಕ್ಷಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು HUID -ಹಾಲ್‌ಮಾರ್ಕ್‌ ಆಗಿವೆ. ಬೆಳ್ಳಿಯ ಪರಿಶುದ್ಧತೆಯಿಂದ ಬೆಳ್ಳಿ ಖರೀದಿ ನಂತರವೂ ಪಾರದರ್ಶಕತೆ ಕಾಪಾಡಲೆಂದು ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಗ್ರಾಹಕರ ಹಿತರಕ್ಷಣೆಗೆ ಸರ್ಕಾರ ಬದ್ಧತೆ ತೋರಿದೆ ಎಂದಿದ್ದಾರೆ.

ಕೇಂದ್ರ ಗ್ರಾಹಕ ಇಲಾಖೆ ಬೆಳ್ಳಿಗೆ BIS ಮಾನದಂಡವನ್ನು ಪರಿಷ್ಕೃತಗೊಳಿಸಿದ್ದು, ಈವರೆಗಿದ್ದ 5 ಶ್ರೇಣಿಗಳನ್ನು 7ಕ್ಕೆ ವಿಸ್ತರಿಸಲಾಗಿದೆ. ಅದರಂತೆ ಇದೀಗ ಈ ಮಾನದಂಡವು ಒಟ್ಟು 7 ಪರಿಶುದ್ಧತೆ ಶ್ರೇಣಿಗಳನ್ನು ಒಳಗೊಂಡಿದೆ. ಇದರಲ್ಲಿ 958 ಮತ್ತು 999 ಎರಡು ಹೊಸ ಶ್ರೇಣಿಗಳನ್ನು ಸೃಷ್ಟಿಸಲಾಗಿದೆ. ಒಟ್ಟಾರೆ 800, 835, 925, 958 (ಹೊಸ), 970, 990 ಮತ್ತು 999(ಹೊಸ) ಶ್ರೇಣಿಗಳಿವೆ ಎಂದು ಹೇಳಿದ್ದಾರೆ.

ಗ್ರಾಹಕರು ಆಭರಣದಲ್ಲಿ ನಮೂದಿಸಿರುವ HUID ಮೂಲಕ ಬೆಳ್ಳಿಯ ಪರಿಶುದ್ಧತೆ, ಆಣಭರಣದ ಪ್ರಕಾರ (ಉಂಗುರ, ಕಾಲುಂಗರ, ಚೈನ್‌ ಇತ್ಯಾದಿ) ಹಾಗೂ ಬೆಳ್ಳಿ ವಸ್ತುಗಳಿಗೆ ಹಾಲ್‌ಮಾರ್ಕ್‌ ಮಾಡಿದ ಆಭರಣ ವ್ಯಾಪಾರಿಯ ವಿವರ ಮತ್ತು ಮೌಲ್ಯಮಾಪನ, ಹಾಲ್‌ಮಾರ್ಕ್‌ ಮಾಡಿದ ಕೇಂದ್ರದ ವಿವರವನ್ನೆಲ್ಲ ಪಡೆಯಬಹುದು ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು