ಇತ್ತೀಚಿನ ಸುದ್ದಿ
ನೇಪಾಳದಲ್ಲಿ ಪ್ರಬಲ ಭೂಕಂಪ: ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಭೂಕಂಪನ
03/10/2023, 16:44

ಹೊಸದಿಲ್ಲಿ(reporterkarnataka.com): ದೇಶದ ರಾಜಧಾನಿ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಇಂದು ಭೂಕಂಪನ ಸಂಭವಿಸಿದೆ.
ನೇಪಾಳದಲ್ಲಿ ಎರಡು ಭೂಕಂಪಗಳ ನಂತರ ಇಂದು ದೆಹಲಿಯಲ್ಲಿ ಭಾರೀ ಕಂಪನಗಳು ಸಂಭವಿಸಿವೆ . ಒಂದು ರಿಕ್ಟರ್ ಮಾಪಕದಲ್ಲಿ 4.6 ಮತ್ತು ಇನ್ನೊಂದು 6.2 ದಾಖಲಾಗಿದೆ. ಭೂಮಿಯಲ್ಲಿ
5 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿದೆ. ನೇಪಾಳದಲ್ಲಿ ಮೊದಲ ಭೂಕಂಪ ಮಧ್ಯಾಹ್ನ 2:25 ಕ್ಕೆ ಸಂಭವಿಸಿತು, ಎರಡನೆಯದು ಮಧ್ಯಾಹ್ನ 2:51ಕ್ಕೆ ನಡೆಯಿತು.
“ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2 ದಾಖಲಾಗಿದೆ. ಇದು 5 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಹೇಳಿಕೆಯಲ್ಲಿ ತಿಳಿಸಿದೆ.
ಹಾಗೆ ದೆಹಲಿ ಮತ್ತು ಇತರ ಭಾಗಗಳಲ್ಲಿ ಭೂಕಂಪದ ಅನುಭವವಾಗಿದೆ. ಉತ್ತರ ಪ್ರದೇಶದ ಲಕ್ನೋ, ಹಾಪುರ್ ಮತ್ತು ಅಮ್ರೋಹಾದಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ನೇಪಾಳದಲ್ಲಿ ಸಂಭವಿಸಿದ ಭೂಕಂಪಗಳ ನಂತರ ಉತ್ತರಾಖಂಡದ ಕೆಲವು ಭಾಗಗಳಲ್ಲಿಯೂ ಕಂಪನಗಳು ಸಂಭವಿಸಿವೆ.