ಇತ್ತೀಚಿನ ಸುದ್ದಿ
ನೆಲ್ಯಾಡಿ: ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಉದ್ಘಾಟನೆ
26/02/2022, 20:39
ನೆಲ್ಯಾಡಿ(reporterkarnataka.com):
ವಿಶ್ವ ವಿದ್ಯಾನಿಲಯ ಕಾಲೇಜು ನೆಲ್ಯಾಡಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಉದ್ಘಾಟನಾ ಸಮಾರಂಭವು ಶುಕ್ರವಾರ ಕಾಲೇಜಿನ ಸಂಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಿಕೊಂಡ ನಾಯಕತ್ವ ಗುಣ ನಿಮ್ಮಲ್ಲಿ ನಿರ್ಮಾಣ ವಾಗುತ್ತದೆ. ಸರಕಾರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಅವರು ಹೇಳಿದರು.
ಪ್ರಾಂಶುಪಾಲ ಡಾ. ಜಯರಾಜ್ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿ, ದೇಶದ ಸೇವೆ ಮಾಡೋ ಮನಸಿದ್ದರೆ, ಎಂ.ಪಿ, ಎಂ.ಎಲ್.ಎ.ಆಗಬೇಕೆಂದಿಲ್ಲ. ಪೋಲಾಗುತ್ತಿರುವ ನೀರಿನ್ನು ಉಳಿಸುವ ಮುಖಂತರ ದೇಶ ಸೇವೆ ಮಾಡಿ ಎಂದರು.ದೇಶ ಕಟ್ಟು ವಲ್ಲಿ ಯುವಕರ ಪತ್ರ ಬಹಳ ಮುಖ್ಯ ಎಂದರು.
ಯೋಜನಾಧಿಕಾರಿ ವನಿತಾ ಪಿ. ಹಾಗೂ ಕಾಲೇಜಿನ ಉಪನ್ಯಾಸಕರಾದ ನೂರಂದಪ್ಪ, ಸೀತಾರಾಮ, ಸುರೇಶ್, ಸ್ಪೂರ್ತಿ ಕೆ. ಟಿ, ಲೀಲಾವತಿ, ಹೇಮಾವತಿ, ಶ್ರುತಿ, ಡೀನಾ. ಪಿ.ಪಿ, ದಿವ್ಯಶ್ರೀ,ದಿವ್ಯ. ಕೆ, ನಿಶ್ಮಿತಾ. ಪಿ, ಚಂದ್ರ ಕಲಾ. ಬಿ, ವೇರೋನಿಕ ಪ್ರಭಾ. ವಿ.ಆರ್, ಆನಂದ ಉಪಸ್ಥಿತರಿದ್ದರು.
ಸ್ವಯಂ ಸೇವಕರಾದ ವಿಶಾಲ್ ಸ್ವಾಗತಿಸಿದರು.ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.ಭಾರತಿ ವಂದಿಸಿದರು.