3:50 AM Thursday12 - February 2026
ಬ್ರೇಕಿಂಗ್ ನ್ಯೂಸ್
ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ…

ಇತ್ತೀಚಿನ ಸುದ್ದಿ

ನೀರು ತುಂಬಿದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ದಾರುಣ ಸಾವು: ಆಟವಾಡುತ್ತಾ ಪ್ರಾಣತೆತ್ತ ಕೂಸು

26/10/2021, 20:28

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಪಾತ್ರೆ ತೊಳೆಯಲು ನೀರು ತುಂಬಿಟ್ಟ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಅಥಣಿ
ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.

ತಾಂವಶಿ ಗ್ರಾಮದ ಸನದಿ ತೋಟದಲ್ಲಿ ವಾಸವಿರುವ ನಿಂಗಪ್ಪ ಮಸರಗುಪ್ಪಿ ಅವರ ಒಂದೂವರೆ ವರ್ಷದ ವಿಜಯ ಮಸರಗುಪ್ಪಿ ಎಂಬ ಮಗು ಅಂಗಳದಲ್ಲಿ ಆಟ ಆಡುತ್ತಿರುವಾಗ ಪಾತ್ರೆ ತೊಳೆಯಲು ನೀರಿಟ್ಟ ಬಕೇಟನಲ್ಲಿ ಆಟವಾಡುತ್ತಾ ಬಕೇಟ್ ಗೆ ಬಿದ್ದು ತನ್ನ  ಪ್ರಾಣವನ್ನು ಕಳೆದುಕೊಂಡಿದೆ.

ಮಗುವಿನ ತಂದೆ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದರು.ತಾಯಿ ಮಗುವನ್ನು ಆಟಾಡಲು ಬಿಟ್ಟು ಅಡುಗೆಮನೆ ಕೆಲಸದಲ್ಲಿ ತೊಡಗಿದ್ದರು. ಮಗು ಕಾಣಿಸದಿದ್ದಾಗ ಹುಡುಕಾಟ ನಡೆಸಿದಾಗ ಅಷ್ಟರಲ್ಲಿ ಮಗು ನೀರಿನ ಬಕೆಟಲ್ಲಿ ಕುತ್ತಿಗೆವರೆಗೆ ಮುಳಗಿ ಕಾಲುಗಳು ಮೇಲಕ್ಕೆ ಆಗಿದನ್ನ ಗಮನಿಸಿ ಮನೆಯವರು ತಕ್ಷಣ ಹೊರಗೆ ತೆಗೆದು ನೋಡಿದಾಗ ಅಸ್ಟೊತ್ತಿಗೆ ಮಗು ತನ್ನ ಪ್ರಾಣ ಕಳೆದುಕೊಂಡಿತ್ತು. ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚಿನ ಸುದ್ದಿ

ಜಾಹೀರಾತು