4:16 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ನವೀಕೃತ ರಾಷ್ಟ್ರಕವಿ ಗೋವಿಂದ ಪೈ ವೃತ್ತ ಉದ್ಘಾಟನೆ: ಮೇರು ಕವಿಯ ಕಂಚಿನ ಪುತ್ಥಳಿ ಜತೆ ಸರ್ಕಲ್ ಗೆ ನ್ಯೂ ಲುಕ್

23/03/2022, 22:20

ಮಂಗಳೂರು(reporterkarnataka.com): ಆಧುನಿಕ ಸ್ಪರ್ಶದೊಂದಿಗೆ ಸಂಪ್ರದಾಯದ ತಳಹಾದಿಯ ಮೇಲೆ ನಗರದ ಕೊಡಿಯಾಲ್ ಬೈಲ್ ಸಮೀಪ ನವೀಕೃತಗೊಂಡ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ವೃತ್ತವನ್ನು ಶಾಸಕ ಡಿ.ವೇದವ್ಯಾಸ ಕಾಮತ್ ಬುಧವಾರ ಸಂಜೆ ಉದ್ಘಾಟಿಸಿದರು.

ಕನ್ನಡದ ಮೇರು ಕವಿ ಮಂಜೇಶ್ವರ ಗೋವಿಂದ ಪೈ ಅವರು ಕುಳಿತು ಪತ್ರಿಕೆ ಓದುವ ಭಂಗಿಯ ಕಂಚಿನ ಪ್ರತಿಮೆ ಈ ವೃತ್ತದ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

ಪ್ರಪ್ರಥಮ ಬಾರಿಗೆ ಕನ್ನಡಕ್ಕೆ ರಾಷ್ಟ್ರಕವಿ ಗೌರವವನ್ನು ತಂದುಕೊಟ್ಟ,ಗೋವಿಂದ ಪೈ ಅವರು ಗಡಿನಾಡು ಮಂಜೇಶ್ವರದಲ್ಲಿ ಹುಟ್ಟಿದರೂ ಇಡೀ ಶಿಕ್ಷಣವನ್ನು ಪಡೆದಿರುವುದು ಮಂಗಳೂರಿನಲ್ಲಿ.


ಇಡೀ ರಾಷ್ಟ್ರವೇ ಬೆರಗಾಗುವಂತಹ ಕೃತಿಗಳನ್ನು ಸೃಷ್ಟಿಸಿದವರು ಮಂಜೇಶ್ವರ ಗೋವಿಂದ ಪೈ. ಈ ಹಿನ್ನೆಲೆಯಲ್ಲಿ ಕೊಡಿಯಾಲ್ ಬೈಲ್ ನಲ್ಲಿರುವ ವೃತ್ತಕ್ಕೆ ಗೋವಿಂದ ಪೈ ಅವರ ಹೆಸರಿಡಲಾಗಿತ್ತು.

ಇದೀಗ ವೃತ್ತ ಹೊಸ ರೂಪದೊಂದಿಗೆ ಮೈದಳೆದುಕೊಂಡಿದೆ. ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಆಧುನಿಕತೆಯ ಸ್ಪರ್ಶ ಪಡೆದು ಸಿದ್ಧಗೊಂಡಿರುವ ಈ ವೃತ್ತ ಭವಿಷ್ಯದ ಪೀಳಿಗೆಗೆ ಸಾಹಿತ್ಯಲೋಕದ ಧ್ರುವತಾರೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನೆನಪನ್ನು ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಲಿದೆ. ರಾಷ್ಟ್ರಕವಿ ಗೋವಿಂದ ಪೈಗಳು ಕೈಯಲ್ಲಿ ‘ನವಭಾರತ ಪತ್ರಿಕೆ’ ಯನ್ನು ಹಿಡಿದು ಓದುತ್ತಾ ಕುಳಿತಿರುವ ಭಂಗಿಯಲ್ಲಿರುವ ಕಂಚಿನ ಪುತ್ಥಳಿ ಇಲ್ಲಿ ಸ್ಥಾಪಿಸಲಾಗಿದೆ. ಅದರ ನಿರ್ಮಾಣವನ್ನು ಕಾರ್ಕಳದ ಶಿಲ್ಪಿ ಕೃಷ್ಣ ಆಚಾರಿಯವರ ತಂಡದವರು  ಮಾಡಿದ್ದಾರೆ. ದೇಶ, ವಿದೇಶಗಳಿಂದ ಮಂಗಳೂರಿಗೆ ಬರುವ ಅತಿಥಿಗಳು ಉಳಿದುಕೊಳ್ಳುವ ಓಶಿಯನ್ ಪರ್ಲ್ ಹೋಟೇಲಿನ ಎದುರಿನಲ್ಲಿರುವ ಈ ವೃತ್ತ ಮಂಗಳೂರಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಜವಾಗಿ ಆಕರ್ಷಣೀಯ ಕೇಂದ್ರಬಿಂದುವಾಗಲಿದೆ. ವೃತ್ತದ ಒಳಗಿರುವ ಪುರಾತನ ಕಾಲದ ಬಾವಿಯನ್ನು ಹಾಗೆ ಉಳಿಸಲಾಗಿದ್ದು, ಅದರ ನೀರನ್ನೇ ಕಾರಂಜಿಯಂತೆ ವೃತ್ತದಲ್ಲಿ ಚಿಮ್ಮಿಸಿ ಇನ್ನಷ್ಟು ಆಕರ್ಷಣೀಯವಾಗಿಸುವ ಯೋಜನೆ ಮಾಡಲಾಗಿದೆ. ವೃತ್ತದ ಒಳಗೆ ಹೂಗಳನ್ನು ಮತ್ತು ಹಚ್ಚಹಸುರಿನ ಹುಲ್ಲುಗಳನ್ನು ಬೆಳೆಸಲಾಗುತ್ತಿದ್ದು, ಅದಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಖ್ಯಾತ ಸೌಂದರ್ಯ ವಿನ್ಯಾಸಕಾರರಾದ ಸುಜಯ್ ಲೋಬೋ ಅವರು ಗುರುತಿಸಿ ಅಭಿವೃದ್ಧಿಪಡಿಸಿದ್ದಾರೆ. ವೃತ್ತದ ಸುತ್ತಲೂ ಕೆತ್ತನೆಯ ಕಬ್ಬಿಣದ ಗ್ರೀಲ್ ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಸಾಂಪ್ರದಾಯಿಕ ಕುಸುರಿ ಕೆಲಸ ಮಾಡಲಾಗಿದೆ. ಕಾರಂಜಿ ಮತ್ತಿತರ ವಿದ್ಯುತ್ ಅಲಂಕಾರಿಕ ವಸ್ತುಗಳ ಅಳವಡಿಕೆ ಯನ್ನು ಗಣೇಶ್ ಎಲೆಕ್ಟ್ರಿಕಲ್ ನ ಸೀತಾರಾಂ ಅವರು ವಹಿಸಿಕೊಂಡಿದ್ದರು.  ಗೋವಿಂದ ಪೈಯವರ ಕಂಚಿನ ಮೂರ್ತಿಯ ನಿರ್ಮಾಣ ರಥಬೀದಿಯ ಗೋವರ್ಧನ್ ಮೆಟಲ್ಸ್ ನವರು ಮಾಡಿರುತ್ತಾರೆ. 

ಇದರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ಖ್ಯಾತ ಬಿಲ್ಡರ್ ಗಿರಿಧರ್ ಶೆಟ್ಟಿ ವಹಿಸಿದ್ದರು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಈ ವೃತ್ತದ ಪುನರ್ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಟ್ರಸ್ಟಿನ ಅಧ್ಯಕ್ಷರಾದ, ಶಾಸಕ ವೇದವ್ಯಾಸ ಕಾಮತ್ ಅವರ ಅಪೇಕ್ಷೆಯಂತೆ ಈ ವೃತ್ತ ಇತಿಹಾಸ ಮತ್ತು ಪ್ರಸ್ತುತ ಮಾದರಿಯ ಶೈಲಿಯ ಸಮರ್ಪಕ ಮಿಳಿತದೊಂದಿಗೆ ರಚನೆಯಾಗಿದೆ.


ಉದ್ಘಾಟನಾ ಸಮಾರಂಭದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಸ್ಥಳೀಯ ಕಾರ್ಪೊರೇಟರ್ ಗಳು, ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು