ಇತ್ತೀಚಿನ ಸುದ್ದಿ
ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಕ್ಲಾರಿಸ್ಸ ಎಂಜಲ್ ಮೊಂತೆರೋ ಆಯ್ಕೆ
23/08/2024, 13:18
ಮಂಗಳೂರು(reporterkarnataka.com): ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ,+81,+87 ಚಿನ್ನದ ಪದಕ ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿ,ಹಿಮಾಚಲ ಪ್ರದೇಶದಲ್ಲಿ ಅಕ್ಟೋಬರ್ 2024 ರಂದು ನಡೆಯಲಿರುವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕ್ಲಾರಿಸ್ಸ ಎಂಜಲ್ ಮೊಂತೆರೋ ಆಯ್ಕೆಯಾಗಿದ್ದಾರೆ.
ಈಕೆ ಮಂಗಳಾ ಕ್ರೀಡಾಂಗಣದ ಡಿಸಿಸಿ ಕ್ಲಬ್ ವಿದ್ಯಾರ್ಥಿನಿಯಾಗಿದ್ದು, ಕ್ಲಬ್ ನ ಮುಖ್ಯ ತರಬೇತಿದಾರರಾದ ಸರಸ್ವತಿ ಪುತ್ರನ್, ಹರೀಶ್ ಗೌಡ, ಪ್ರೇಮನಾಥ ಉಳ್ಳಾಲರಿಂದ ತರಬೇತು ಪಡೆದಿದ್ದಾರೆ.
ಈಕೆ ವಿಲ್ಫಿ ಮೊಂತೆರೋ ಮತ್ತು ಕವಿತಾ ದಂಪತಿಯ ಪುತ್ರಿ.