ಇತ್ತೀಚಿನ ಸುದ್ದಿ
ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು ಸಾವಿಗೆ ಶರಣು
18/05/2024, 18:44
ಹೈದರಾಬಾದ್(reporterkarnataka.com): ಕಿರುತೆರೆಯ ಪ್ರಸಿದ್ಧ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿ ಒಂದು ವಾರ ಕಳೆಯುವ ಮುನ್ನವೇ ಅವರ ಸ್ನೇಹಿತ ಕಿರು ತೆರೆಯ ನಟ ಚಂದ್ರಕಾಂತ್ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೈದರಾಬಾದ್‌ನ ಮಣಿಕೊಂಡದಲ್ಲಿರುವ ಸ್ವಗೃಹದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಹನಕೆರೆಯ ಪವಿತ್ರಾ ಜಯರಾಂ ಅವರ ಸಾವಿನ ಬೆನ್ನಲ್ಲೇ ಆಕೆಯ ಜತೆ ಸ್ನೇಹ ಹೊಂದಿದ್ದ ತೆಲುಗು ಕಿರುತೆರೆ ನಟ ಚಂದು ಶುಕ್ರವಾರ ಸಾವಿಗೆ ಶರಣಾಗಿದ್ದಾರೆ.
ಮೇ 12ರಂದು ಹೈದರಾಬಾದ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್ ಸಾವನ್ನಪ್ಪಿದ್ದರು. ಅಪಘಾತ ನಡೆದಾಗ ಅದೇ ಕಾರಿನಲ್ಲಿ ಚಂದ್ರಕಾಂತ್ ಕೂಡ ಪ್ರಯಾಣಿಸುತ್ತಿದ್ದರು. ಸಕಾಲದಲ್ಲಿ ಆ್ಯಂಬ್ಯುಲೆನ್ಸ್ ಸಿಗುತ್ತಿದ್ದರೆ ಪವಿತ್ರಾ ಅವರ ಪ್ರಾಣ ಉಳಿಸಬಹುದಿತ್ತು ಎಂದು ಚಂದ್ರಕಾಂತ್ ಆವತ್ತು ದುಃಖ ತೋಡಿಕೊಂಡಿದ್ದರು. ನಂತರ ಅವರು ಖಿನ್ನತೆಗೆ ಜಾರಿದ್ದರು. ಪವಿತ್ರಾ ಅವರ ಸಾವಿನಿಂದ ಮನನೊಂದು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ತ್ರಿನಯನಿ ತೆಲುಗು ಧಾರಾವಾಹಿಯಲ್ಲಿ ಚಂದು ಹಾಗೂ ಪವಿತ್ರಾ ಜಯರಾಮ್ ಅವರು ಒಟ್ಟಿಗೇ ನಟಿಸುತ್ತಿದ್ದರು.
ಚಂದ್ರು ಅವರು 2015ರಲ್ಲಿ ಶಿಲ್ಪಾಳನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪವಿತ್ರಾ ಅವರ ಪರಿಚಯವಾದ ಬಳಿಕ ಚಂದ್ರು ಅವರು ಪತ್ನಿಯಿಂದ ದೂರವಾಗಿದ್ದರು.ಹೈದರಾಬಾದ್‌ನ ನಾರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ