6:48 AM Thursday24 - October 2024
ಬ್ರೇಕಿಂಗ್ ನ್ಯೂಸ್
ವಯನಾಡು ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ; ಬೃಹತ್… ಪಂಚಾಯತ್ ಪಾಲಿಟಿಕ್ಸ್: ಅಧಿಕಾರ, ಅನುದಾನದ ಆಸೆಗೆ ಗ್ರಾಪಂ ಸದಸ್ಯೆಯ ಪತಿಯ ಭೀಕರ ಹತ್ಯೆ:… ಮೂಡಿಗೆರೆ ರೈತ ಭವನದಲ್ಲಿ ಅ.25ರಂದು ವೈವಿಧ್ಯಮಯ ‘ಮಲೆನಾಡು ಹಬ್ಬ’ ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ನಾಟೆಕಲ್‌ನಲ್ಲಿ ಶೀಘ್ರದಲ್ಲೇ ನೂತನ ಉಳ್ಳಾಲ ತಾಲೂಕು ಕಚೇರಿ ಕಾರ್ಯಾರಂಭ: ಶಾಸಕ ಯು.ಟಿ ಖಾದರ್ ಭರವಸೆ

29/01/2022, 22:58

ಮಂಗಳೂರು(reporterkarnataka.com): ನೂತನ ಉಳ್ಳಾಲ ತಾಲೂಕು ಕಚೇರಿಯನ್ನು ತಾತ್ಕಾಲಿಕವಾಗಿ ನಾಟೆಕಲ್‌ನ ಹಳೆಯ ಆಸ್ಪತ್ರೆಯ ಕಟ್ಟಡದಲ್ಲಿ ಅತೀ ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ಉಳ್ಳಾಲ ಶಾಸಕ ಯು.ಟಿ. ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟೆಕಲ್‌ನ ಹಳೆಯ ಆಸ್ಪತ್ರೆಯ ಕಟ್ಟಡದಲ್ಲಿ ಸೋಮವಾರದಿಂದ ಕಚೇರಿ ಕಾರ್ಯದ ವಯರಿಂಗ್, ಸಾಫ್ಟ್‌ವೇರ್ ಅಳವಡಿಕೆ ಹೀಗೆ ತಾಂತ್ರಿಕ ಕೆಲಸ ಆರಂಭವಾಗುತ್ತದೆ. ಇದಾದ ಒಂದು ತಿಂಗಳೊಳಗೆ ಅಧಿಕೃತವಾಗಿ ಎಲ್ಲಾ ಸವಲತ್ತುಗಳೊಂದಿಗೆ ಉದ್ಘಾಟನೆ ನಡೆಸಲಿದ್ದೇವೆ.

ನೂತನ ಉಳ್ಳಾಲ ತಾಲೂಕು ಆಡಂ ಕುದ್ರುವಿನಿಂದ ಆರಂಭವಾಗಿ ತಲಪಾಡಿ ಗಡಿ ಹಾಗೂ ಸಜಿಪ ಪಡು ಸಾಲೆತ್ತೂರುವರೆಗೆ ಉಳ್ಳಾಲ ತಾಲೂಕು ಇರಲಿದೆ. ಇದರ ಜೊತೆಗೆ ಮಂಗಳೂರು ವಿಧಾನಸಭೆ ಕ್ಷೇತ್ರದ ಕೋಡ್ಮಣ್, ಮೇರಮಜಲ್, ಪುದು ಹಾಗೂ ತುಂಬೆ ಬಂಟ್ವಾಳ ತಾಲ್ಲೂಕಿನಲ್ಲೇ ಮುಂದುವರೆಯಲಿದೆ.

ಈಗಾಗಲೇ ಸಜಿಪದಿಂದ ತುಂಬೆಗೆ ಸಂಪರ್ಕಿಸುವ ಸೇತುವೆಯ ಕಾರ್ಯ ಕೊನೆಯ ಹಂತದಲ್ಲಿದೆ. ಅದರ ಕೆಲಸ ಮುಗಿದ ತಕ್ಷಣ ಉಳ್ಳಾಲ ಗ್ರಾಮಕ್ಕೆ ಈ ಗ್ರಾಮಗಳನ್ನು ಸೇರಿಸುವ ಬಗ್ಗೆ ಪರಿಶೀಲಿಸಲಾಗುವುದು.

ಕಳೆದ ಬಾರಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಉಳ್ಳಾಲ ನೂತನ ತಾಲೂಕು ಆಗಿ ಘೋಷಣೆಯಾಗಿತ್ತು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು