2:55 PM Monday1 - July 2024
ಬ್ರೇಕಿಂಗ್ ನ್ಯೂಸ್
ಪಿಎಂ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಕಲ್ಯಾಣ ಕರ್ನಾಟಕ ಅಭಿವೃದ್ದಿ, ಬೆಂಗಳೂರಿನಲ್ಲಿ ಸುರಂಗ… 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ… ಶಹಪುರ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಬದನೆ ಸಾಂಬಾರಿನಲ್ಲಿ ಹುಳ… ನಿಮ್ಮ ಕನಸಿನ ಮನೆಯನ್ನು ಬಹುಮಾಮವಾಗಿ ಗೆಲ್ಲಬೇಕೆ ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ ಫುಟ್ ಪಾತ್ ಇರುವುದು ಸಾರ್ವಜನಿಕರಿಗೆ; ಅನಧಿಕೃತ ಗೂಡಂಗಡಿಗಳ ತೆರವಿಗೆ ಕ್ರಮ: ಮೇಯರ್ ಸುಧೀರ್… ಜಪ್ಪಿನಮೊಗರು ನೆರೆ ಸಮಸ್ಯೆ ಮಳೆಯಿಂದಲ್ಲ, ಅವೈಜ್ಞಾನಿಕ ಲೇಔಟ್ ನಿಂದ!!: ಪಾಲಿಕೆ, ಮುಡಾ ಇನ್ನಾದರೂ… ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ತುಂಬಿ ಹರಿಯುತ್ತಿರುವ ತುಂಗಾ- ಭದ್ರಾ: ಹೆಬ್ಬಾಳೆ ಸೇತುವೆಗೆ… ಪುತ್ತೂರು: ಮನೆ ಮೇಲೆ ತಡೆಗೋಡೆ ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳ ರಕ್ಷಿಸಿದ… ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿರುವ ಮನೆಗಳ ತಕ್ಷಣ ಸರ್ವೆ: ದ.ಕ. ಜಿಲ್ಲಾಡಳಿತಕ್ಕೆ ಕಂದಾಯ ಸಚಿವ… ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ: ರೆಡ್ ಅಲರ್ಟ್ ಘೋಷಣೆ; ನಾಳೆ ಶಾಲೆಗಳಿಗೆ ರಜೆ

ಇತ್ತೀಚಿನ ಸುದ್ದಿ

ನಾರಾಯಣಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಧರಣಿ; ಸಿಇಗೆ ಮನವಿ

26/06/2024, 23:31

ಶಿವು ರಾಠೋಡ ನಾರಾಯಣಪುರ ಯಾದಗಿರಿ

info.reporterkarnataka@gmaik.com

ನಾರಾಯಣಪುರ ಕೆಬಿಜೆಎನ್‌ಎಲ್ ಮುಖ್ಯ ಇಂಜನೀಯರ ವಲಯ ಕಚೇರಿ ಮುಂದೆ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಧರಣಿ ನಡೆಸಿ, ವಿವಿಧ ಬೇಡಿಕೆಗಳು ಈಡೇರಿಸುವಂತೆ ಸಿಇ ಆರ್.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ಸುರಪುರ ಘಟಕ ಅಧ್ಯಕ್ಷ ಹಣಮಂತರಾಯ ಚಂದ್ಲಾಪುರ ಮಾತನಾಡಿ, ಕಳೆದ ವರ್ಷ ಬರಗಾಲ ಹಿನ್ನೆಲೆ ರೈತರೂ ಸಂಕಷ್ಟ ಅನುಭವಿಸಿ ಬೆಳೆ ಬೆಳೆದಿಲ್ಲಾ, ಸದ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆೆ. ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉಪ-ಕಾಲುವೆಗಳು, ವಿತರಣಾ ಕಾಲುವೆಗಳಲ್ಲಿ ಮಣ್ಣಿನ ಹೂಳು, ಕಸದ ತ್ಯಾಜ್ಯದ ರಾಶಿ ಇದ್ದು ಕೂಡಲೇ ಅವುಗಳನ್ನು ತೆರವುಗೊಳಿಸುವ ಕ್ಲೋಸರ್ ಕಾಮಗಾರಿಗಳನ್ನು ಕೂಡಲೇ ಕೈಗೆತ್ತುಕೊಳ್ಳಬೇಕು. ಆಗ ಮಾತ್ರ ಕಾಲುವೆಯ ಕೊನೆ ಭಾಗದ ರೈತರ ಜಮೀನಿಗೆ ನೀರು ತಲುಪಲಿದೆ ಎಂದು ಹೇಳಿದರು.


ಇನ್ನೋರ್ವ ರೈತ ಸಂಘದ ಹುಣಸಗಿ ಘಟಕ ಅಧ್ಯಕ್ಷ ಹನುಮಗೌಡ ಪೊಲಿಸ್‌ ಪಾಟೀಲ್ ಮಾತನಾಡಿ, ನೀರಾವರಿ ಯೋಜನೆಗೆ ಅಗತ್ಯವಿರುವಷ್ಟು ವರ್ಕ ಇನ್‌ಸ್ಪೆಕ್ಟರ ನೇಮಕ ಮಾಡಬೇಕು, ಜಂಗಿನಗಡ್ಡಿ, ಮೇಲಿನಗಡ್ಡಿ, ರೈತರ ಜಮೀನುಗಳಿಗೆ ಹೊಸ ಕಾಲುವೆಯ ನಿರ್ಮಿಸುವ ಮೂಲಕ ನೀರು ಹರಿಸಲು ಕ್ರಮವಹಿಸಬೇಕು, ಬೋನಾಳ ಏತ ನೀರಾವರಿ ಯೋಜನೆಯ ಎಲ್ಲಾ ನ್ಯೂನೆತೆಗಳನ್ನು ಸರಿ ಪಡಿಸಿ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರೊದಿಗಿಸಬೇಕು, ಬೋನಾಳ ಏತ ನೀರಾವರಿ ಕಚೇರಿ ಸುರಪುರಕ್ಕೆ ವರ್ಗಾಯಿಸಬೇಕು, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅನುಭವವಿರುವ ರೈತ ಪ್ರತಿನಿಧಿಯನ್ನು ಆವ್ಹಾನಿಸಬೇಕು ಎಂದು ಒತ್ತಾಯಿಸಿದ ಅವರು ರೈತರ ಬೇಡಿಕೆಗಳು ಈಡೇರದೆ ಇದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ಹೇಳಿದರು.
ಮನವಿ ಸ್ವೀಕರಿಸಿದ ಸಿಇ ಆರ್.ಮಂಜುನಾಥ ಮನವಿಯಲ್ಲಿನ ಬೇಡಿಕೆಗಳ ಕುರಿತು ಮೇಲಾಧಿಕಾರಿಗಳಿಗೆ, ಸರ್ಕಾರದ ಗಮನಕ್ಕೆ ತರಲಾಗುವದು ಎಂದು ಭರವಸೆ ನೀಡಿದರು.
ಪ್ರತಿಭಟನೆಗೂ ಮುನ್ನ ಇಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದಿಂದ ರೈತ ಸಂಘದವರು ಸಿಇ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅಧೀಕ್ಷಕ ಅಭಿಯಂತರ ರಮೇಶ ಪವಾರ್, ರೈತ ಸಂಘದ ಮುಖಂಡರುಗಳಾದ ಸಾಹೇಬಗೌಡ ಮದಲಿಂಗನಾಳ, ಗದ್ದೆಪ್ಪ ನಾಗಬೇನಾಳ, ತಿಪ್ಪಣ್ಣ ಜಂಪಾ, ನಿಂಗನಗೌಡ ಗುಳಬಾಳ, ಅವಿನಾಶ ನಾಯಕ, ಮಲ್ಲಣ್ಣ, ನಾಗನಗೌಡ, ಮಹಬೂಬ ಅಂಗಡಿ, ಸಿದ್ದಪ್ಪ ಕ್ಯಾದಗಿ, ಬಾಗಪ್ಪ, ಅಮರೇಶ ಕಾಮನಕೇರಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು, ಕೆಬಿಜೆಎನ್‌ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಪೊಲೀಸ್ ಠಾಣೆ ಪಿಎಸೈ ಇಂದುಮತಿ ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು