ಇತ್ತೀಚಿನ ಸುದ್ದಿ
ನಂಜುಂಡನಿಗೆ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ: ದರುಶನ ವೇಳೆ ದರ್ಶನ್ ಧೃವನಾರಾಯಣ್ ಸಾಥ್
06/01/2024, 16:52
*ಇತ್ತೀಚಿಗೆ ನಂಜುಂಡನ ಸನ್ನಿಧಿಯಲ್ಲಿ ಭುಗಿಲೆದ್ದ ಅಂದಕಾಸುರ ಮತ್ತು ಮಹಿಷಾಸುರ ಘಟನೆಯ ವಿಚಾರದ ಬಗ್ಗೆ ನೋ ಕಾಮೆಂಟ್ಸ್ ಎಂದ ಬಿವೈ ವಿಜಯೇಂದ್ರ
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.ಕಂ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಇಂದು ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.
ತಮ್ಮ ತೂಕದಷ್ಟು ಬೆಲ್ಲ ದೇವಾಲಯಕ್ಕೆ ನೀಡಿ ಹರಕೆ ತೀರಿಸಿದ್ದಾರೆ. ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಿ.ವೈ.ವಿಜಯೇಂದ್ರ ನಂಜನಗೂಡು ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.







ನಂತರ ನಂಜುಂಡೇಶ್ವರನ ದರುಶನ ಪಡೆಯುವ ವೇಳೆ ಶಾಸಕ ದರ್ಶನ್ ಧೃವನಾರಾಯಣ್ ಸಹ ದೇವಾಲಯಕ್ಕೆ ಆಗಮಿಸಿದ ಸಂದರ್ಭ ಕಾಕತಾಳೀಯವೆಂಬಂತೆ ಇಬ್ಬರು ಯುವ ನಾಯಕರು ಪರಸ್ಪರ ಭೇಟಿ ಯಾಗಿ ಒಂದಾಗಿ ನಂಜುಂಡನ ದರುಶನ ಪಡೆದಿದ್ದು ವಿಶೇಷವಾಗಿತ್ತು.
ದೇವಾಲಯದ ಭೇಟಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿದರು.














