9:44 PM Thursday14 - November 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಕ್ಸಲ್ ಚಟುವಟಿಕೆ ಪ್ರಕರಣ; ಇಬ್ಬರು ಶಂಕಿತ ನಕ್ಸಲರು ಸೇರಿ 4 ಮಂದಿ… ಬೆಂಗಳೂರು ಸೈಂಟ್ ಜೋಸೆಫ್ ವಿವಿಯ ಫ್ಯಾಕಲ್ಟಿ ಡೆವಲಪ್ ಮೆಂಟ್ ಪ್ರೋಗ್ರಾಂ: ಹೆಲ್ತ್ ಕೇರ್… ಶ್ರೀನಿವಾಸಪುರ ತಾಲೂಕು ವಕೀಲರಿಂದ ಅನಿರ್ದಿಷ್ಟ ಪ್ರತಿಭಟನೆ: ನ್ಯಾಯಾಲಯ ಕಲಾಪಕ್ಕೆ ಬಹಿಷ್ಕಾರ ಪವಿತ್ರ ಯಾತ್ರಾ ಸ್ಥಳ ಸುತ್ತೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ರಂಗಸ್ವಾಮಿ ಅವಿರೋಧ… ತುಮಕೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ-2024: ಸಿಎಂ ಸಿದ್ದರಾಮಯ್ಯ ಲಾಂಛನ ಅನಾವರಣ ಮೂಡಿಗೆರೆ: ಮದುವೆ ಸಮಾರಂಭದಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಖದೀಮರು ಸಂಡೂರು ವಿಧಾನಸಭೆ ಉಪ ಚುನಾವಣೆ: ಶೇ.76.24ರಷ್ಟು ಮತದಾನ ಕಾಫಿನಾಡಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ?: ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಆರಂಭ ಗಣಿ ಮಾಫಿಯಾ, ಹಣದ ಶಕ್ತಿ, ಸುಳ್ಳು ಪ್ರಚಾರದಿಂದ ರಕ್ಷಿಸಲು ಮತ ಚಲಾಯಿಸಿ: ಗೋಪಿನಾಥ್… ಶ್ವಾನವನ್ನು ಬೆನ್ನಟ್ಟಿ ಬಾವಿಗೆ ಬಿದ್ದ 10ರ ಹರೆಯದ ಚಿರತೆ; ಅರಣ್ಯ ಇಲಾಖೆಯಿಂದ ರಕ್ಷಣೆ

ಇತ್ತೀಚಿನ ಸುದ್ದಿ

ನಂಜನಗೂಡು: ಶ್ರೀ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

14/11/2024, 21:07

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ಪಟ್ಟಣದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಶ್ರೀ ನೀಲಕಂಠೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.


ಪುಟ್ಟ ಪುಟ್ಟ ವಿದ್ಯಾರ್ಥಿಗಳು ಸೇರಿದಂತೆ ವೇದಿಕೆ ಮೇಲಿನ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಮುರುಗೇಶ್ ಮಾತನಾಡಿ ನಮ್ಮ ರಾಷ್ಟ್ರದ ಮೊದಲ ಪ್ರಧಾನ ಮಂತ್ರಿಗಳಾದ ಜವಾಹರ್ಲಾಲ್ ನೆಹರು ಅವರ ಮಕ್ಕಳ ಪ್ರೇಮದಿಂದಾಗಿ ಅವರ ಜನ್ಮ ದಿನಾಚರಣೆಯ ದಿನದಂದು ಮಕ್ಕಳ ದಿನಾಚರಣೆಯ ಆಚರಣೆಯನ್ನು ಆರಂಭಿಸಲಾಯಿತು ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಇದೇ ಸಂದರ್ಭ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರಾದ ಮಕ್ಕಳಿಗೆ ವೇದಿಕೆ ಮೇಲಿನ ಗಣ್ಯರು ಬಹುಮಾನ ವಿತರಣೆ ಮಾಡಿದರು. ಇದಕ್ಕೂ ಮುನ್ನ ಮೈಸೂರಿನ ಪ್ರಸಿದ್ಧ ಜಾದುಗಾರರಾದ ಗುರುಸ್ವಾಮಿ ಅವರಿಂದ ಜಾದು ಮತ್ತು ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಟ್ಟು ಮಕ್ಕಳಿಗೆ ಉತ್ತಮ ಮನರಂಜನೆ ನೀಡಿ ರಂಜಿಸಿದರು ಹಾಗೂ ಮಾದೇಶ್ ಅವರು ಭಕ್ತಿ ಗೀತೆಗಳನ್ನು ಆಡುವ ಮೂಲಕ ಮಕ್ಕಳನ್ನು ಮಂತ್ರಮುಗ್ತರನ್ನಾಗಿಸಿದರು
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರುಣೇಶ್, ಕಾರ್ಯದರ್ಶಿ ಕುಮಾರ್, ಮಹಾದೇವಮ್ಮ ಮತ್ತು ಕೆಂಪಮ್ಮ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು