ಇತ್ತೀಚಿನ ಸುದ್ದಿ
ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಹುಲ್ಲಹಳ್ಳಿ ಮಾರಮ್ಮ ಜಾತ್ರೆ; ಕಪಿಲಾ ನದಿಯಲ್ಲಿ ಗಂಗಾ ಪೂಜೆ
14/03/2024, 16:41
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ತಾಲೂಕು ಗ್ರಾಮ ದೇವತೆ ಮಾರಿಹಬ್ಬವು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬುಧವಾರ ಬೆಳಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆ ಬಂದು ಗ್ರಾಮ ದೇವತೆಗೆ ಪ್ರಿಯವಾದ ತಂಬಿಟ್ಟು ಹಣ್ಣು ಕಾಯಿ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಭಾವ ಮೆರೆದರು. ಹಬ್ಬದ ಪ್ರಯುಕ್ತ ಮಾರಿಗುಡಿ ಸೇರಿದಂತೆ ಸುತ್ತಮುತ್ತ ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಂಗೊಳಿಸುತ್ತಿತ್ತು.
ಗ್ರಾಮ ದೇವತೆ ಮೂರ್ತಿಯನ್ನು ಸಹ ಹಾಗೂ ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಿ ದಿನವಿಡೀ ಪೂಜೆ ಸಲ್ಲಿಸಲಾಯಿತು. ರಾತ್ರಿ ಕಪಿಲಾ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸಿದ ಬಳಿಕ ಹರಕೆ ಹೊತ್ತ ಮಹಿಳಾ ಭಕ್ತರಿಗೆ ಬಾಯಿ ಬೀಗ ಹಾಕುವ ಮೂಲಕ ಮಂಗಳವಾದ್ಯ ವೀರಗಾಸೆ ಕುಣಿತ ಸತ್ತಿಗೆ ಸುರಪಾಣಿಗಳೊಂದಿಗೆ ದೇವಾಲಯಕ್ಕೆ ಬರಲಾಯಿತು.
ಮೆರವಣಿಗೆ ಉದ್ದಕ್ಕೂ ಗ್ರಾಮದ ಯುವಕರ ವೀರಮಕ್ಕಳ ಕುಣಿತ ನೋಡುಗರ ಮನಸೂರೆಗೊಂಡಿತು.
ಹುಲ್ಲಹಳ್ಳಿಯೂ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಭಾವ ಮೆರೆದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಲ್ಲಹಳ್ಳಿ ಪೊಲೀಸರು ಬಂದೋಬಸ್ತ್ ವಹಿಸಿದ್ದರು.