4:09 AM Friday27 - September 2024
ಬ್ರೇಕಿಂಗ್ ನ್ಯೂಸ್
ಖಾಯಂ ಪಿಡಿಒ ನೇಮಕಕ್ಕೆ ಆಗ್ರಹಿಸಿ ತರುವೆ ಗ್ರಾ‌ಮ ಪಂಚಾಯಿತಿ ಎದುರು ಏಕಾಂಗಿ ಹೋರಾಟ ಸಿಬಿಐ ಬರಬಾರದು ಎಂದು ಬೇಲಿ ಹಾಕಿದ್ದು ಯಾಕೆ: ಮಾಜಿ ಗೃಹ ಸಚಿವ ಆರಗ… ಬಜಾಜ್ ಫಿನ್‍ಸರ್ವ್ ವತಿಯಿಂದ ವಯನಾಡ್ ಭೂಕುಸಿತ ಪರಿಹಾರಕ್ಕೆ 2 ಕೋಟಿ ರೂ. ದೇಣಿಗೆ ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿತನ: ಮೊಟ್ಟೆಗಾಗಿ ತಟ್ಟೆ ಹಿಡಿದು ಕುಳಿತ ವಿದ್ಯಾರ್ಥಿಗಳು! ಶಿರೂರು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಜತೆಗೆ ಚಾಲಕ ಅರ್ಜುನ್ ಮೃತದೇಹ ಪತ್ತೆ: ಗಂಗಾವಳಿ… ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖದೀಮ: ಬಾಳೆಹೊನ್ನೂರು ಪೊಲೀಸರಿಂದ ಬಂಧನ ತೀರ್ಥಹಳ್ಳಿಯಲ್ಲೂ ಶುರುವಾಗಿದೆ ಡಿಜಿಟಲ್ ವಂಚನೆ: ಹಣ ಟ್ರಾನ್ಸ್ಫರ್ ಮಾಡುವುದಾಗಿ ನಂಬಿಸಿ 5 ಸಾವಿರ… ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಲಿ: ಶಾಸಕ ಡಾ.ಭರತ್ ಶೆಟ್ಟಿ… ನ್ಯಾಯಾಲಯದ ತೀರ್ಪಿಗಾದರೂ ತಲೆಬಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಲಿ: ಶಾಸಕ ವೇದವ್ಯಾಸ ಕಾಮತ್ ಆಗ್ರಹ ಕೆಎಸ್ಸಾರ್ಟಿಸಿ: ಅಕ್ಟೋಬರ್ 3ರಿಂದ 12ರ ವರೆಗೆ ದಸರಾ ವಿಶೇಷ ಪ್ರವಾಸ ಪ್ಯಾಕೇಜ್

ಇತ್ತೀಚಿನ ಸುದ್ದಿ

ಮಾರಕಾಸ್ತ್ರ ಹಿಡಿದು ಮುಸುಕುಧಾರಿಗಳಿಂದ ದರೋಡೆಗೆ ಯತ್ನ: ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ದೃಶ್ಯಗಳು; ಬೆಚ್ಚಿಬಿದ್ದ ದಕ್ಷಿಣ ಕಾಶಿ ನಂಜನಗೂಡು ಜನತೆ

17/06/2024, 17:05

*ನಂಜನಗೂಡು ಪೊಲೀಸರು ಅಲರ್ಟ್ ಆಗದಿದ್ದರೆ ಮುಂದಿನ ದಿನಗಳಲ್ಲಿ ಬಾರಿ ಅನಾಹುತ ಗ್ಯಾರಂಟಿ..!*

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಇದು ನಂಜನಗೂಡು ಜನತೆಯನ್ನ ಬೆಚ್ಚಿಬೀಳಿಸುವ ಘಟನೆ. ಇಬ್ಬರು ಮುಸುಕುಧಾರಿಗಳು ಮಾರಕಾಸ್ತ್ರಗಳನ್ನ ಹಿಡಿದು ದರೋಡೆಗೆ ಯತ್ನಿಸಿರುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸರು ಅಲರ್ಟ್ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಗ್ಯಾರೆಂಟಿ.
ಪೊಲೀಸರು ರಾತ್ರಿ ಗಸ್ತು ಟೈಟ್ ಮಾಡದಿದ್ದಲ್ಲಿ ದರೋಡೆಕೋರರು ಪೊಲೀಸರ ನಿದ್ದೆ ಕೆಡಿಸುವುದು ಗ್ಯಾರೆಂಟಿ.ಇಬ್ಬರು ಮುಸುಕುಧಾರಿಗಳ ಚಲನವಲನಗಳನ್ನ ಗಮನಿಸಿದರೆ ನಂಜನಗೂಡಿನ ಜನತೆ ಕಂಗಾಲಾಗುವುದು ಸಹ ಗ್ಯಾರೆಂಟಿ. ಮೈಸೂರು ಜಿಲ್ಲಾ ಪೊಲೀಸರೇ ಇದು ನಿಮಗೆ ಎಚ್ಚರಿಕೆಯ ಗಂಟೆ. ಈವತ್ತು ದರೋಡೆಕೋರರ ಸಂಚು ವಿಫಲವಾಗಿದೆ. ಹೀಗೆ ನಿರ್ಲಕ್ಷ್ಯ ಮುಂದುವರೆದಲ್ಲಿ ಭಾರಿ ಅನಹುತ ಎದುರಿಸ ಬೇಕಾಗುತ್ತದೆ. ಜಿಲ್ಲಾ ಪೊಲೀಸರೇ ಎಚ್ಚರ.
ಹೌದು…ನಂಜನಗೂಡು ಪಟ್ಟಣದ ವಿದ್ಯಾನಗರ ಮತ್ತು ಗೌತಮ ಬಡಾವಣೆಗಳಲ್ಲಿ ನಿನ್ನೆ ತಡರಾತ್ರಿ ನಡೆದ ಬೆಳವಣಿಗೆ ಇದು. ಇಬ್ಬರು ಮುಸುಕು ದಾರಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಮತ್ತೊಂದು ಕೈಯಲ್ಲಿ ಟಾರ್ಚ್ ಹಿಡಿದು ರಾಜಾರೋಷವಾಗಿ ಮನೆಗಳ ಮುಂದೆ ಓಡಾಡಿದ್ದಾರೆ. ಒಂದು ಮನೆಗೆ ನುಗ್ಗಿದ ಖದೀಮರು ಕೆಲಕಾಲ ಅಡ್ಡಾಡಿ ಬರಿಗೈಲಿ ಹಿಂದಿರುಗಿದ್ದಾರೆ. ಮನೆಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿದೆ. ಅದೃಷ್ಟವಶಾತ್ ನಿನ್ನೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ದರೊಡೆಕೋರರ ಸ್ಕೆಚ್ ವಿಫಲವಾಗಿದೆ.



ಇತ್ತೀಚೆಗಂತೂ ನಂಜನಗೂಡು ವ್ಯಾಪ್ತಿ

ಯಲ್ಲಿ ಸಾಕಷ್ಟು ಕ್ರೈಂ ಪ್ರಕರಣಗಳು ದಾಖಲಾಗಿವೆ. ರಾತ್ರಿ ಪಾಳಿಯ ಪೊಲೀಸರ ಗಸ್ತು ಸ್ಥಗಿತವಾಗಿರುವುದೇ ಇಂತಹ ಪ್ರಕರಣಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ನಂಜನಗೂಡು ಪಟ್ಟಣದ ಆರ್. ಪಿ. ರಸ್ತೆ ಮತ್ತು ಎಂ. ಜಿ. ರಸ್ತೆಗಳಲ್ಲಿ ಹಾಡಹಗಲೇ ಮಹಿಳೆಯರ ಕುತ್ತಿಗೆಯಲ್ಲಿರುವ ಮಾಂಗಲ್ಯ ಸರಗಳನ್ನು ಖದೀಮರು ಕಿತ್ತೊಯ್ಯುತ್ತಿದ್ದಾರೆ. ಬ್ಯಾಂಕುಗಳಲ್ಲಿ ಹಣ ಡ್ರಾ ಮಾಡಿಕೊಳ್ಳಲು ಬಂದ ಜನರ ಲಕ್ಷ ಲಕ್ಷ ಹಣವನ್ನು ಕಳ್ಳರ ಪಾಲಾಗುತ್ತಿದೆ. ವ್ಯಕ್ತಿಯೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿರುವ ಪ್ರಕರಣ ಇನ್ನೂ ಮಾಸದಿರುವಾಗಲೇ ದರೋಡೆಕೋರರ ಸಂಚು ಸಾರ್ವಜನಿಕರ ನೆಮ್ಮದಿ ಕೆಡಿಸಿದೆ. ನಂಜನಗೂಡು ಪಟ್ಟಣದ ವಿದ್ಯಾನಗರ ಮತ್ತು ಗೌತಮ ಬಡಾವಣೆಗಳಲ್ಲಿ ಒಬ್ಬಂಟಿಯಾಗಿ ವಾಸಿಸುವ ಮನೆಗಳೇ ಹೆಚ್ಚು ಇವೆ. ಇವುಗಳು ಖದೀಮರಿಗೆ ಟಾರ್ಗೆಟ್ ಆಗುತ್ತಿವೆ. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು