ಇತ್ತೀಚಿನ ಸುದ್ದಿ
ನಂಜನಗೂಡಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ: ಮಾಜಿ ಶಾಸಕರಿಂದ ಮತದಾರರ ಭೇಟಿ
11/04/2024, 18:02
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.ಕಂ
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಚಾಮರಾಜನಗರ
ಕ್ಷೇತ್ರ ವ್ಯಾಪ್ತಿಯ ನಂಜನಗೂಡಿನಲ್ಲಿ ಇಂದು ಬಿಜೆಪಿ ಬಿರುಸಿನ ಮತ ಪ್ರಚಾರ ನಡೆಸಿತು.
ಮಾಜಿ ಶಾಸಕ ಹರ್ಷವರ್ಧನ್ ನೇತೃತ್ವದಲ್ಲಿ ನಂಜನಗೂಡು ಪಟ್ಟಣದಲ್ಲಿ ಮತ ಪ್ರಚಾರ ನಡೆಸಲಾಯಿತು. ನಂಜನಗೂಡಿನ ಶ್ರೀ ರಾಘವೇಂದ್ರ ಸ್ವಾಮಿ ಅವರ ಮೂಲ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ ಬಿಜೆಪಿ ಗೆಲ್ಲಿಸುವಂತೆ ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಬಿಜೆಪಿ ಮುಖಂಡರು ಸಂಕಲ್ಪ ಮಾಡಿಕೊಂಡರು.
ಬಳಿಕ ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಮತ ಪ್ರಚಾರ ನಡೆಸಿದರು. ಅಲ್ಲಿಂದ ದೇವಾಲಯದ ಸುತ್ತಮುತ್ತಲ ಪ್ರಮುಖರ ಮನೆಗಳು ಹಾಗೂ ಬೀದಿ, ಬೀದಿಗಳಿಗೆ ತೆರಳಿ ಮತದಾರರನ್ನುಭೇಟಿ ಮಾಡಲಾಯಿತು.
ಬಳಿಕ ಮಾತನಾಡಿ ಹರ್ಷವರ್ಧನ ಅವರು ಇಂದು ನಂಜನಗೂಡಿನ ಶ್ರೀ ರಾಘವೇಂದ್ರ ಸ್ವಾಮಿ ಅವರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ ಪಟ್ಟಣದಾದ್ಯಂತ ಮತಪ್ರಚಾರ ನಡೆಸುತ್ತಿದ್ದೇವೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದ್ದು ಗೆಲುವು ಸಾಧಿಸಲಿದೆ. ನಮ್ಮ ಪಕ್ಷದಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳಿಂದಾಗಿ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ರಾಜ್ಯ ಖಾದಿ ಗ್ರಾಮೋದ್ಯೋಗ ನಿಗಮ ಮಂಡಳಿಯ ರಾಜ್ಯಾಧ್ಯಕ್ಷ ಕೃಷ್ಣಪ್ಪ ಗೌಡ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಿಕ್ಕರಂಗ ನಾಯಕ, ನಗರ ಘಟಕದ ಅಧ್ಯಕ್ಷ ಸಿದ್ದರಾಜು, ನಗರಸಭಾ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ನಗರಸಭಾ ಸದಸ್ಯ ಕಪಿಲೇಶ್, ಮಾದೇವ ಪ್ರಸಾದ್, ಮುಖಂಡರುಗಳಾದ ಬಾಲಚಂದ್ರು,ಗುರು, ಮಧು,ಅನಂತ, ನಂದಿನಿ, ಗಾಯತ್ರಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು