ಇತ್ತೀಚಿನ ಸುದ್ದಿ
ನಂಜನಗೂಡು: ಡಿ.16ರಿಂದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 26ನೇ ವರ್ಷದ ಬ್ರಹ್ಮೋತ್ಸವ; 20ಕ್ಕೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ
15/12/2023, 20:10
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡಿನ ಕಪಿಲಾ ನದಿ ತೀರದಲ್ಲಿರುವ ಶ್ರೀ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ 26ನೇ ವರ್ಷದ ಬ್ರಹ್ಮೋತ್ಸವವನ್ನು ಡಿಸೆಂಬರ್ 16 ರಿಂದ 27ರವರೆಗೆ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದು ದೇವಾಲಯದ ಗುರುಸ್ವಾಮಿಗಳಾದ ಪಿ. ದೇವರಾಜಸ್ವಾಮಿ ತಿಳಿಸಿದರು.
ಇಂದು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಡಿಸೆಂಬರ್ 16ರ ಬೆಳಿಗ್ಗೆ ಧ್ವಜಾರೋಹಣ 17ರ ಸಂಜೆ ಪಡಿ ಪೂಜೆ 20ಕ್ಕೆಅನ್ನ ಸಂತರ್ಪಣೆ ಮತ್ತು ಅಯ್ಯಪ್ಪ ಸ್ವಾಮಿ ಉತ್ಸವ ಹಾಗೂ ಕಪಿಲಾ ನದಿಯಲ್ಲಿ ತೆಪ್ಪೋತ್ಸವ, 24ಕ್ಕೆ ಇರುಮುಡಿ , 25ಕ್ಕೆ ಬೃಹತ್ ಪಾದಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ನುರಿತ ಕಲಾವಿದರುಗಳಿಂದ ನೃತ್ಯ, ಭಕ್ತಿ ಗೀತೆ ಮತ್ತು ನಾಟಕಗಳೊಂದಿಗೆ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುಲಿವೆ ಎಂದು ಬ್ರಹ್ಮೋತ್ಸವದ ಬಗ್ಗೆ ವಿವರಿಸಿದರು.
ಅಲ್ಲದೆ ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಇತ್ತೀಚೆಗೆ ಭಕ್ತರ ಸಂಖ್ಯೆ ಹೆಚ್ಚಾಗಿ ನೂಕು ನುಗ್ಗಲು ಉಂಟಾಗಿ ವೃದ್ದರು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ.
ಅದಕ್ಕಾಗಿ ಶ್ರೀ ಕ್ಷೇತ್ರ ಶಬರಿಮಲೆಯ ಮಾದರಿಯಲ್ಲೇ ಎಲ್ಲಾ ದೇವತಾ ಕಾರ್ಯಗಳು ನಂಜನಗೂಡಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲೇ ನಡೆಯುತ್ತಿರುವುದರಿಂದ ಕರ್ನಾಟಕದ ಭಕ್ತರು ಇಲ್ಲೇ ಬಂದು ತಮ್ಮ ಸೇವೆ ಸಲ್ಲಿಸಬಹುದು ಎಂದು ಮನವಿ ಮಾಡಿಕೊಂಡು ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣಸ್ವಾಮಿ, ಮಂಜುನಾಥ್, ಗಿರೀಶ್, ಭಕ್ತವತ್ಸಲ, ವೆಂಕಟೇಶ್ ಉಪಸ್ಥಿತರಿದ್ದರು.