ಇತ್ತೀಚಿನ ಸುದ್ದಿ
ನಂಜನಗೂಡು: ಅರಣ್ಯಧಿಕಾರಿಗಳ ಬೋನಿಗೆ ಬಿದ್ದ 2 ವರ್ಷದ ಹೆಣ್ಣು ಚಿರತೆ
23/12/2023, 15:43
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಮಡುವಿನಹಳ್ಳಿ ಮತ್ತು ಕಂದೇಗಾಲ ಗ್ರಾಮದ ಮುಖ್ಯ ರಸ್ತೆಯ ಜಮೀನಿನಲ್ಲಿ ದಿನನಿತ್ಯ ಜನ ಜಾನುವಾರು ಮೇಕೆ ಕುರಿಗಳಿಗೆ ಕಿರಿಕ್ ಮಾಡಿ ಭಯ ಸೃಷ್ಟಿಸಿದ್ದ ಎರಡು ವರ್ಷದ ಹೆಣ್ಣು ಚಿರತೆಯನ್ನು ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲ ತಿಂಗಳುಗಳಿಂದ ಮಡುವಿನಹಳ್ಳಿ ಮತ್ತು ಕಂದೇಗಾಲ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈತರಿಗೆ ಕಾಟ ನೀಡುತ್ತಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಚಿರತೆಯ ಚಲನವಲನಗಳನ್ನು ಗಮನಿಸಿ ಹೆಡಿಯಾಲ ಅರಣ್ಯ ಇಲಾಖೆ ಸಹಾಯಕ ಅಧಿಕಾರಿ ಮಹಾಂತೇಶ್ ನೇತೃತ್ವದಲ್ಲಿ ಬೋನು ಅಳವಡಿಸಲಾಗಿತ್ತು .
ನಿನ್ನೆ ತಡರಾತ್ರಿ ಎರಡು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಸರಿಯಾಗಿರುವ ಚಿರತೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮದ್ದೂರು ವಲಯದ ಅರಣ್ಯಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.