ಇತ್ತೀಚಿನ ಸುದ್ದಿ
ನಂಜನಗೂಡಿನಲ್ಲಿ ವಕೀಲರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ: ವಕೀಲರ ಹಿತರಕ್ಷಣೆ ಕಾಯ್ದೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಅಕ್ರೋಶ
13/12/2023, 21:13
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ರಾಜ್ಯ ಸರ್ಕಾರ ಬೆಳಗಾವಿಯ ಅಧಿವೇಶನದಲ್ಲಿ ವಕೀಲರ ಹಿತದೃಷ್ಟಿ ಸಂರಕ್ಷಣಾ ಮಸೂದೆಯು ನಾಮಕಾವಸ್ಥೆ ಕಾಯಿದೆಯಾಗಿದೆ.
ಈ ಕಾಯ್ದೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದರು.
ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದೆ. ಮೊನ್ನೆ ಕಲ್ಬುರ್ಗಿಯಲ್ಲಿ ನಡೆದ ವಕೀಲರ ಹತ್ಯೆಯು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ರಾಜ್ಯ ಸರ್ಕಾರ ಮಸೂದೆಯಲ್ಲಿ ಜಾರಿಗೆ ತಂದಿರುವುದು ಕಣ್ಣು ಒರೆಸುವ ತಂತ್ರವಾಗಿದೆ ಆರೋಪಿಯು ತಪ್ಪಿಸಿಕೊಳ್ಳುವ ಜಾಮೀನು ಸಹಿತ ಕಾನೂನಾಗಿದೆ. ವಕೀಲರ ಸಂರಕ್ಷಣೆ ಕಾಯಿದೆಯು ಬಲಿಷ್ಠ ಮಸೂದೆಯಾಗಿ ರಾಜ್ಯ ಸರ್ಕಾರವು ಕಾನೂನು ಜಾರಿಗೆ ತರಬೇಕು.ಇಲ್ಲದಿದ್ದರೆ ನಾವು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುತ್ತವೆ.
ಹಾಗೆಯೇ ನ್ಯಾಯಾಂಗದ ಕಾರ್ಯಕಲಾಪವನ್ನು ಅನಿರ್ದಿಷ್ಟದ ಅವಧಿವರೆಗೂ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತೇವೆ.
ಬಲಿಷ್ಠವಾದ ಕಾಯಿದೆ ಜಾರಿಯಾಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಸುರೇಶ್ ಹಾಗೂ ಹಿರಿಯ ಮತ್ತು ಕಿರಿಯ ವಕೀಲರು ಅನಿರ್ದಿಷ್ಟ ಅವಧಿ ಪ್ರತಿಭಟನೆಯಲ್ಲಿ ಹಾಜರಿದ್ದರು.