ಇತ್ತೀಚಿನ ಸುದ್ದಿ
ನಂಜನಗೂಡಿನಲ್ಲಿ ಮಧ್ಯವರ್ಜನ ಶಿಬಿರ ಉದ್ಘಾಟನೆ: 60ಕ್ಕೂ ಹೆಚ್ಚು ಮಧ್ಯ ವ್ಯಸನಿಗಳು ನೋಂದಣಿ
18/12/2024, 21:33
ಮೋಹನ್ ನಂಜನಗೂಡು ಮೈಸೂರು
info.reporterkarnataka@gmal.com
ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಮತ್ತು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಅನುರಾಗ ಸೇವಾ ಟ್ರಸ್ಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಸೇರಿದಂತೆ ವಿವಿಧ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಎಂಟು ದಿನಗಳ ಶಿಬಿರವನ್ನು ಆ ಯೋಜನೆ ಮಾಡಲಾಗಿದೆ.
ನಂಜನಗೂಡಿನ 7ನೇ ಮತ್ತು ರಾಜ್ಯದ 1901ನೇ ಮಧ್ಯ ವರ್ಜನ ಶಿಬಿರವನ್ನು ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ಸೇರಿದಂತೆ ಮತ್ತಿತರ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ನಂತರ ಮಾತನಾಡಿದ ಅವರು ಇಂದಿನಿಂದ ಡಿ. 25ರವರೆಗೆ ಒಂದು ವಾರಗಳ ಕಾಲ ಮಧ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಯವರು ಇಂತಹ ಹಲವಾರು ಜನಪರ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನಡೆಸುತ್ತಾ ಬಂದಿದ್ದಾರೆ. ಇಂತಹ ಮಧ್ಯವರ್ಜನ ಶಿಬಿರಗಳಿಂದ ಮಧ್ಯ ಮುಕ್ತರನ್ನಾಗಿಸಿ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದಾರಿದೀಪವಾಗುತ್ತಿದ್ದಾರೆ. ಈ ಭಾಗದ ಮದ್ಯವ್ಯಸನಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿಜಯಕುಮಾರ್ ನಾಗನಾಳ ಮಾತನಾಡಿ, ಬಡ ಹಾಗೂ ಮಧ್ಯಮ ಕುಟುಂಬದ ಲ್ಲಿ ಪುರುಷರು ಹಾಗೂ ಯುವಕರು ಮಧ್ಯವ್ಯಸನಕ್ಕೆ ಬಲಿಯಾಗಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುತ್ತಿರುವುದನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಇಂದು 1901ನೇ ಮಧ್ಯವರ್ಜನ ಶಿಬಿರ ನಡೆಯುತ್ತಿದೆ. ಇಂತಹ ಶಿಬಿರಗಳಿಂದ ಸಾವಿರಾರು ಮಂದಿ ಮದ್ಯವ್ಯಸನಿಗಳು ಮಧ್ಯಪಾನ ಮುಕ್ತರಾಗಿ ನವಜೀವನಕ್ಕೆ ಕಾಲಿಟ್ಟು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಇಂದಿನ ಶಿಬಿರದಲ್ಲಿ ಸುಮಾರು 60ಕ್ಕೂ ಹೆಚ್ಚು ಮಧ್ಯ ವ್ಯಸನಿಗಳು ನೋಂದಣಿ ಮಾಡಿಕೊಂಡರು. ವ್ಯಸನಿಗಳ ತಂದೆ, ತಾಯಿ, ಹೆಂಡತಿ ಸಹೋದರ, ಸಹೋದರಿಯರು ಸೇರಿದಂತೆ ಕುಟುಂಬದ ಸದಸ್ಯರು ತಮ್ಮ ಕುಟುಂಬದಲ್ಲಿನ ಮಧ್ಯವ್ಯಸನಿಗಳನ್ನು ಕರೆತಂದು ಶಿಬಿರಕ್ಕೆ ಸೇರಿಸುತ್ತಿದ್ದದ್ದು ವಿಶೇಷವಾಗಿತ್ತು. ಅದರಲ್ಲೂ ಕೆಲವರು ಶಿಬಿರಕ್ಕೆ ಮಧ್ಯ ಸೇವಿಸಿ ಬಂದು ರಾದ್ದಾಂತ ಮಾಡಿದರೆ ಮತ್ತೆ ಕೆಲವು ವ್ಯಸನಿಗಳು ತಮ್ಮನ್ನು ಕರೆತಂದ ಕುಟುಂಬಸ್ಥರಿಗೆ ಬೈದು ನಾನು ಶಿಬಿರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಗಲಾಟೆ ಮಾಡಿ ಶಿಬಿರದಿಂದ ಕದ್ದು ಓಡಿ ಹೋಗುವ ಪ್ರಯತ್ನ ಸಹ ನಡೆಯುತ್ತಿತ್ತು. ಆದರೆ ಶಿಬಿರದಲ್ಲಿ ಸಿಬ್ಬಂದಿಗಳು ಮಾತ್ರ ಅವರನ್ನು ಹೊರಗಡೆ ಬಿಡದೆ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿ ಕರೆತಂದು ಬಿಡಲಾಗುತ್ತಿತ್ತು.
ಒಂದು ವಾರಗಳ ಕಾಲ ಮಧ್ಯ ವ್ಯಸನಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಊಟ ವಸತಿ ಯನ್ನು ಸಂಸ್ಥೆ ವತಿಯಿಂದ ಏರ್ಪಡಿಸಲಾಗಿತ್ತು.
ಮದ್ಯವರ್ಜನ ಶಿಬಿರದ ಗೌರವಾಧ್ಯಕ್ಷ ನಂದಕುಮಾರ್, ಅಧ್ಯಕ್ಷರಾದ ಅಳಗಂಚಿ ಶಿವಯ್ಯ, ಉಪಾಧ್ಯಕ್ಷರಾದ ಶಶಿಕಲಾ ಗಿರೀಶ್, ಚಿಕ್ಕ ಮಾದಪ್ಪ, ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷರಾದ ಎಸ್ಎ ಎಲ್ ಮೂರ್ತಿ,ಸದಸ್ಯರುಗಳಾದ, ಸೋಮಶೇಖರ ಮೂರ್ತಿ, ಸಂಚಾಲಕರುಗಳಾದ ಅನಿಲ್ ಕುಮಾರ್, ಜಯರಾಮನೆಲ್ಲಿತಾಯ ನಂಜನಗೂಡು ಯೋಜನಾಧಿಕಾರಿ ಧರ್ಮರಾಜ್, ಉದ್ಯಮಿಗಳಾದ ಜಗದೀಶ್, ಮಣಿಕಂಠ, ಮೇಲ್ವಿಚಾರಕಿ ಪ್ರತಿಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.