ಇತ್ತೀಚಿನ ಸುದ್ದಿ
ನಂಜನಗೂಡು: ಸಾಲ ತೀರಿಸದ ಸ್ನೇಹಿತ; ಮನನೊಂದು ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
02/02/2025, 16:47
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಸ್ನೇಹಿತ ಸಾಲ ತೀರಿಸದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತನ್ನ ಹೆಸರಲ್ಲಿ ಸ್ನೇಹಿತನಿಗೆ ಸಿದ್ದೇಶ್ ಬ್ಯಾಂಕ್ ಸಾಲಕೊಡಿಸಿದ್ದರು. ಆದರೆ ಸ್ನೇಹಿತ ಸಾಲ ತೀರಿಸಲಿಲ್ಲ. ಇದರಿಂದ ಮನನೊಂದ
ನಂಜನಗೂಡು ತಾಲೂಕು ಮುಲ್ಲೂಪುರ ಗ್ರಾಮದ ಸಿದ್ದೇಶ್ 40 ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರು ತಾಲೂಕು ದಂಡಿಕೆರೆ ಗ್ರಾಮದ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ನೇಹಿತ ಮಣಿಕಂಠ ಎಂಬಾತನಿಗೆ ಖಾಸಗಿ ಬ್ಯಾಂಕ್‌ನಲ್ಲಿ ಕಾರು ಸಾಲ
ಸಿದ್ದೇಶ್ ಕೊಡಿಸಿದ್ದರು.
ಜೊತೆಗೆ ತನ್ನ ಹೆಸರಿನಲ್ಲಿ 2 ಲಕ್ಷ ನಗದು ಸಾಲ ಸಹ ಕೊಡಿಸಿದ್ದ ಎನ್ನಲಾಗಿದ್ದು, ಮಣಿಕಂಠ ಕೇವಲ ಎರಡು ಕಂತು ಕಟ್ಟಿ ಸುಮ್ಮನಾಗಿದ್ದರು ಎನ್ನಲಾಗಿದೆ.
ಸಾಲ ತೆಗೆಸಿಕೊಂಡಿದ್ದ ಸ್ನೇಹಿತ ಸಾಲ ತೀರಿಸದ ಕಾರಣ ಖಾಸಗಿ ಬ್ಯಾಂಕ್ ಸಿದ್ದೇಶ್ ಗೆ ಸಾಲ ತೀರಿಸುವಂತೆ ಒತ್ತಾಯಿಸಿತ್ತು ಎನ್ನಲಾಗಿದೆ
ಇದರಿಂದ ಮನನೊಂದು ಸಾಲ ಕೊಡಿಸಿದ್ದ ಸಿದ್ದೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುಂಚೆ ಸೆಲ್ಫಿ ವಿಡಿಯೋ ಮಾಡಿ ಸಿ ಎಂ ಸಿದ್ದರಾಮಯ್ಯಗೆ ಮನವಿ ಮಾಡಿಕೊಂಡಿರುವ ಸಿದ್ದೇಶ್ ತನ್ನ ಪತ್ನಿ, ಮಕ್ಕಳು, ತಂದೆ, ತಾಯಿ ಹಾಗೂ ಸಹೋದರರಲ್ಲಿ ಕ್ಷಮೆ ಯಾಚಿಸಿರುವ ಘಟನೆ ಮನ ಕಲಕುವಂತಿದೆ
ಘಟನೆಗೆ ಸಂಬಂಧಿಸಿದಂತೆ ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ