2:45 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ನಂಬಿಕೆಗೂ ದ್ರೋಹ, ಚಾರ್ಮಾಡಿಗೂ ಸೂತಕ: ಕೆಲಸಕ್ಕೆಂದು ಕರೆದೊಯ್ದು ಜೊತೆಗಾರರಿಂದಲೇ ಅಮಾನುಷ ಕೊಲೆ

01/12/2021, 21:23

ಆರೋಪಿ -ಕೃಷ್ಣೆ ಗೌಡ

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮನೆಯಲ್ಲಿದ್ದ ವ್ಯಕ್ತಿಯನ್ನ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಜೊತೆ ಹೋದವರೇ ಕೊಂದು ಕಾಡಿನ ಮಧ್ಯೆ ಹೂತು ಹಾಕಿರುವ ಅಮಾನುಷ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿದರುತಳ ಗ್ರಾಮದಲ್ಲಿ ನಡೆದಿದೆ. 

46 ವರ್ಷದ ನಾಗೇಶ್ ಆಚಾರ್ ಮೃತ ದುರ್ದೈವಿ. ಕಳೆದ ಗುರುವಾರ ಕೊಟ್ಟಿಗೆಹಾರ ಸಮೀಪದ ಬಾಳೂರು ಗ್ರಾಮದ ನಾಗೇಶ್ ಆಚಾರ್ ಎಂಬುವನನ್ನ ಕೃಷ್ಣೇಗೌಡ ಎಂಬುವರು ತಮ್ಮ ಜೀಪಿನಲ್ಲೇ ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ನಾಗೇಶ್ ಮನೆಗೆ ಹಿಂದಿರುಗಿ ಬರದ ಹಿನ್ನೆಲೆ ನಾಗೇಶ್ ಪತ್ನಿ ಪ್ರಶ್ನಿಸಿದಾಗ ಕೃಷ್ಣೇಗೌಡ ನನಗೆ ಗೊತ್ತಿಲ್ಲ ಎಂದು ಹೇಳಿದ್ದ. ಗಂಡ ನಾಪತ್ತೆಯಾದ ಹಿನ್ನೆಲೆ ಪತ್ನಿ ಸುಮ ಬಾಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಕೊಂದ ಕೃಷ್ಣೇಗೌಡ ಕೂಡ ಏನೂ ಗೊತ್ತಿಲ್ಲದವನಂತೆ ಪೊಲೀಸರು, ಸ್ಥಳಿಯರ ಜೊತೆ ಹುಡುಕಾಡುವ ನಾಟಕ ಮಾಡಿದ್ದ. ಆದರೆ, ತನ್ನ ಜೀಪಿನಲ್ಲಿ ಕರೆದುಕೊಂಡ ಹೋದ ಕೃಷ್ಣೇಗೌಡನೇ ಆತನಿಗೆ ಗುಂಡಿಟ್ಟು ಕೊಂದು ಚಾರ್ಮಾಡಿ ಅರಣ್ಯದ ಮಧ್ಯೆ ಹೂತು ಹಾಕಿದ್ದು ಬೆಳಕಿಗೆ ಬಂದಿದೆ. ಕೃಷ್ಣೇಗೌಡ ಹಾಗೂ ಹೆಣವನ್ನ ಹೂತು ಹಾಕಲು ಸಹಕರಿಸಿದ ಮತ್ತಿಬ್ಬರು ಪೊಲೀಸರು ಅತಿಥಿಯಾಗಿದ್ದಾರೆ. 


ವಾಸನೆಯಿಂದ ಪ್ರಕರಣ ಬೆಳಕಿಗೆ : ಯಾವಾಗ ಜೊತೆಗೆ ಕರೆದುಕೊಂಡ ಹೋದ ಕೃಷ್ಣೇಗೌಡನೇ ನಾಟಕ ಶುರುಮಾಡಿದ್ದ ಅನುಮಾನಗೊಂಡು ನೂರಾರು ಸ್ಥಳಿಯರು ಚಾರ್ಮಾಡಿ ಘಾಟಿಯ ಹಲವೆಡೆ ಸೋಮವಾರ-ಮಂಗಳವಾರ ಹುಡುಕಾಡಿದ್ದಾರೆ. ಈ ಹುಡುಕಾಟದಲ್ಲಿ ಕೊಲೆಗಾರ ಕೃಷ್ಣೇಗೌಡನೂ ಭಾಗಿಯಾಗಿದ್ದು ದುರಂತ. ಆದರೆ, ನಿನ್ನೆ ಸಂಜೆ ಹುಡುಕಾಡುವಾಗ ಮೃತದೇಹವನ್ನ ಭೂಮಿಯಿಂದ ತೀರಾ ಆಳ ಅಲ್ಲದಂತೆ ಮೇಲ್ಮೇಲೆ ಮುಚ್ಚಿ ಇಟ್ಟಿದ್ದರಿಂದ ಸ್ಥಳೀಯರಿಗೆ ಕೊಳೆತ ವಾಸನೆ ಬಂದಿದೆ. ಅದೇ ದಾರಿಯಲ್ಲಿ ಹುಡುಕ ಹೊರಟಾಗ ನಾಗೇಶ್ ಆಚಾರ್ ಮೃತದೇಹವಿರೋದು ಗೊತ್ತಾಗಿದೆ. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಮಣ್ಣಿನಲ್ಲಿ ಹೂತಿಟ್ಟಿದ್ದ ಶವವನ್ನ ಹೊರತೆಗೆದಿದ್ದಾರೆ. ಪ್ರಪಾತದಲ್ಲಿ ಹೂತು ಹಾಕಿದ್ದರಿಂದ ಮೃತದೇಹವನ್ನ ಮೇಲಕ್ಕೆ ತರುವಷ್ಟರಲ್ಲಿ ಸ್ಥಳಿಯರು, ಪೊಲೀಸರು ಹೈರಾಣಗಿದ್ದಾರೆ. ಒಬ್ಬರ ಕೈಯನ್ನೊಬ್ಬರು ಇಟ್ಟುಕೊಂಡು ಚೈಲ್‍ಲಿಂಕ್ ಮೂಲಕ ಮೃತದೇಹ ಮೇಲಕ್ಕೆ ತಂದಿದ್ದಾರೆ. ಸಂಸಾರದ ನೊಗ ಹೊತ್ತಿದ್ದ ಯಜಮಾನನ ಮೃತದೇಹ ಕಂಡು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು.

ಅಕ್ರಮ ಕೆಲಸ ಮಾಡಲ್ಲ ಎಂದಿದ್ದಕ್ಕೆ ಕೊಲೆ…? : ಕೃಷ್ಣೇಗೌಡ ಮೂಲತಃ ಬಿದಿರುತಳ ಗ್ರಾಮದವನು. ಪ್ರಸ್ತುತ ಬಾಳೂರಿನಲ್ಲಿ ವಾಸವಿದ್ದಾನೆ. ಬಿದಿರುತಳದಲ್ಲಿ ಹೋಂ ಸ್ಟೇ ನಿರ್ಮಾಣ ಮಾಡುತ್ತಿದ್ದನಂತೆ. ಅದಕ್ಕಾಗಿ ಬಾಳೂರು ಮೀಸಲು ಅರಣ್ಯದಲ್ಲಿ 2 ತಿಂಗಳ ಹಿಂದೆ ಸುಮಾರು 100 ಮರಗಳ ಕಡಿದಿದ್ದನಂತೆ. ಆದರೆ, ಈ ಬಗ್ಗೆ ಅರಣ್ಯ ಅಧಿಕಾರಿಗಳು ಕೆಡಿಸಿಕೊಂಡಿರಲಿಲ್ಲ ಎಂಬ ಆರೋಪವೂ ಅಧಿಕಾರಿಗಳ ಮೇಲಿದೆ. ಹೀಗೆ ಅಕ್ರಮವಾಗಿ ಕಡಿದ ಮರಗಳನ್ನ ಬಳಕೆಗೆ ಹದಗೊಳಿಸಲು ನಾಗೇಶ್ ಆಚಾರ್‍ನನ್ನ ಕೃಷ್ಣೇಗೌಡ ಬಿದಿರುತಳ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ. ಅಕ್ರಮವಾಗಿ ಕಡಿದ ಮರಗಳನ್ನ ಹದಗೊಳಿಸುವ ಕೆಲಸ ಮಾಡಲ್ಲ ಎಂದಿದ್ದಕ್ಕೆ ಮಾತಿಗೆ ಮಾತು ಬೆಳೆದು ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಸ್ಥಳಿಯರು ಮಾತನಾಡಿಕೊಳ್ಳುತ್ತಿದ್ದರು. ಅಷ್ಟೆ ಅಲ್ಲದೆ, ಕೃಷ್ಣೇಗೌಡ ನಾಗೇಶ್‍ನಿಂದ ಹಣ ಪಡೆದುಕೊಂಡಿದ್ದ. ಅದನ್ನ ಹಿಂದಿರುಗಿಸುವಂತೆ ನಾಗೇಶ್ ಕೃಷ್ಣೇಗೌಡನಿಗೆ ಕೇಳುತ್ತಿದ್ದ. ಹಾಗಾಗಿ, ಕೆಲಸ ಮಾಡಲ್ಲ ಅಂದ, ಹಣ ಕೇಳುತ್ತಿದ್ದಾನೆ ಎಂದು ಬಂದೂಕಿನಲ್ಲಿ ಗುಂಡಿಟ್ಟು ಕೊಂದು ಕಾಡಲ್ಲಿ ಹೂತು ಗೊತ್ತಿಲ್ಲದ ನಾಟಕ ಮಾಡಿದ್ದ. ಆದರೀಗ, ಬಾಳೂರು ಪೊಲೀಸರ ಅತಿಥಿಯಾಗಿದ್ದಾನೆ ಕೃಷ್ಣೇಗೌಡ. 


ಚಾರ್ಮಾಡಿಗೆ ಸೂತಕ: ಚಾರ್ಮಾಡಿ ಸೌಂದರ್ಯಕ್ಕೆ ಮನುಕುಲವೇ ತಲೆ ಬಾಗಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳು ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಈ ಭಾಗದಲ್ಲಿ ಸಂಚರಿಸುವ ಜನಸಾಮಾನ್ಯರು ಇಲ್ಲಿನ ಪ್ರಕೃತಿ ಸೌಂದರ್ಯದಲ್ಲಿ ಮಿಂದೇಳದೆ ಮುಂದೆ ಹೋಗಲ್ಲ. ಇದು ಒಂದೆಡೆಯಾದರೆ, ಮತ್ತೊಂದೆಡೆ, ಈ ಜಾಗ ಕೊಲೆಗಟುಕರಿಗೆ ಹಾಟ್ ಸ್ಪಾಟ್ ಅನ್ನುವುದರಲ್ಲಿ ನೋ ಡೌಟ್. ಯಾಕಂದರೆ, ಇಲ್ಲಿನ ಸಾವಿರಾರು ಅಡಿ ಪ್ರಪಾತದಲ್ಲಿ ಎಲ್ಲೋ ಕೊಲೆ ಮಾಡಿ ತಂದು ಬಿಸಾಡುವ ಪ್ರಕರಣಗಳೇ ಜಾಸ್ತಿ. ಆದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಳಿಯರೇ ಕೊಂದು ಚಾರ್ಮಾಡಿ ಸೌಂದರ್ಯದಲ್ಲಿ ಹೂತು ಹಾಕಿ ನಂಬಿಕೆಗೂ ದ್ರೋಹ ಮಾಡಿದ್ದಾರೆ, ಚಾರ್ಮಾಡಿ ಘಾಟಿಗೂ ಸೂತಕ ತಂದಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು