1:19 PM Wednesday27 - November 2024
ಬ್ರೇಕಿಂಗ್ ನ್ಯೂಸ್
ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ…

ಇತ್ತೀಚಿನ ಸುದ್ದಿ

ನಾವು ಯಾವುದೇ ಪಕ್ಷಕ್ಕೆ ಬೈದು, ಹೀಯಾಳಿಸಿ ರಾಜಕೀಯ ಮಾಡಲು ಬಂದವರಲ್ಲ, ಆಮ್ ಆದ್ಮಿ ಪಾರ್ಟಿ ಹೊಸ ರಾಜಕೀಯ ವ್ಯವಸ್ಥೆ: ಜಿಲ್ಲಾಧ್ಯಕ್ಷ ಎಡಮಲೆ

10/04/2023, 16:47

ಆಮ್ ಆದ್ಮಿ ಪಾರ್ಟಿಯ ದ.ಕ. ಜಿಲ್ಲಾಧ್ಯಕ್ಷರಾದ ಅಶೋಕ್ ಎಡಮಲೆ ಅವರು ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಪ್ರಾಜೆಕ್ಟ್ ಮೆನೇಜರ್ ಆಗಿ ಕಾರ್ಯನಿರ್ವಹಿಸಿದವರು. ತಿಂಗಳಿಗೆ 1 ಲಕ್ಷ ಸಂಬಳಕ್ಕೆ ದುಡಿಯುತ್ತಿದ್ದ ಅವರು ಸ್ವಯಂ ನಿವೃತ್ತಿ ಘೋಷಿಸಿ ತಮ್ಮ ತಾಯ್ನಾಡಾದ ಸುಳ್ಯಕ್ಕೆ ಮರಳಿದವರು. ಆಮ್ ಆದ್ಮಿ ಪಾರ್ಟಿಯ ಧ್ಯೇಯ- ಸಿದ್ಧಾಂತಕ್ಕೆ ತಲೆ ಬಾಗಿ ಅದನ್ನು ಒಪ್ಪಿಕೊಂಡು ಅಪ್ಪಿಕೊಂಡ ಅವರು ಇದೀಗ ಪಕ್ಷದ ದ.ಕ.ಜಿಲ್ಲಾಧ್ಯಕ್ಷರು. ಸುಳ್ಯದ ಐವರ್ನಾಡಿನಲ್ಲಿ ಅವರನ್ನು ರಿಪೋರ್ಟರ್ ಕರ್ನಾಟಕ ಪ್ರಧಾನ ಸಂಪಾದಕ ಅಶೋಕ್ ಕಲ್ಲಡ್ಕ ಹಾಗೂ ಸಹ ಸಂಪಾದಕ ಅನುಷ್ ಪಂಡಿತ್ ಭೇಟಿಯಾಗಿ ಮಾತನಾಡಿಸಿದಾಗ ಮೂಡಿಬಂದ ಸಂಭಾಷಣೆಯನ್ನು ವರದಿ ರೂಪದಲ್ಲಿ ನಿಮ್ಮ ಮುಂದೆ ಇಡಲಾಗಿದೆ.

ನಾವು ಬೇರೆ ಪಕ್ಷಗಳಿಗೆ ಬೈದು, ಆ ಪಕ್ಷಗಳ ನಾಯಕರ ಕಾಲೆಳೆದು, ಹೀಯಾಳಿಸಿ ರಾಜಕೀಯ ಮಾಡಲು ಬಂದವರಲ್ಲ. ಆಮ್ ಆದ್ಮಿ ಪಾರ್ಟಿ(ಎಎಪಿ)ಯು ಈ ದೇಶದ ಒಂದು ಹೊಸ ರಾಜಕೀಯ ವ್ಯವಸ್ಥೆ. ಮನೆ ಬಾಗಿಲಿಗೆ ಸರಕಾರಿ ಸೇವೆ, ಉಚಿತ ಶಿಕ್ಷಣ, ಉಚಿತ ನೀರು- ವಿದ್ಯುತ್ ನೀಡುವ ಮೂಲಕ ಪ್ರತಿ ಕುಟುಂಬದ ನೆಮ್ಮದಿಯ ಬದುಕಿಗೆ ಅವಕಾಶ ನೀಡುವುದು ನಮ್ಮ ಧ್ಯೇಯ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದರು.
ರಿಪೋರ್ಟರ್ ಕರ್ನಾಟಕಕ್ಕೆ ಸೋಮವಾರ ಮಾತಿಗೆ ಸಿಕ್ಕದ ಎಡಮಲೆ ಅವರು, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿ ಬೆಳೆಸಿದ ಪಕ್ಷ. ಬಿಜೆಪಿ ಸಂಘ ಪರಿವಾರದ ಸೂತ್ರದಡಿ ಬೆಳೆದದ್ದು, ಆದರೆ ಆಮ್ ಆದ್ಮಿ ಪಾರ್ಟಿ ಹೊಸ ರಾಜಕೀಯ ವ್ಯವಸ್ಥೆಯನ್ನು ಈ ದೇಶಕ್ಕೆ ಪರಿಚಯಿಸಿದ ಪಕ್ಷ. ನಿಜ ಹೇಳಬೇಕೆಂದರೆ ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಅಲ್ಲಿ 15 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿಗೆ ಪದಾಧಿಕಾರಿಗಳೇ ಇರಲಿಲ್ಲ. ಆದರೆ ನಾವು ಚುನಾವಣೆಯಲ್ಲಿ ಬಹುಮತ ಪಡೆದವು.
ನಮ್ಮ ಕಾರ್ಯಕರ್ತರ ಶ್ರಮ ಹಾಗೂ ಡಿಜಿಟಲ್ ಮೀಡಿಯದ ಪ್ರಭಾವದಿಂದ ಇದು ಸಾಧ್ಯವಾಯಿತು ಎಂದು ಎಎಪಿ ಜಿಲ್ಲಾಧ್ಯಕ್ಷರು ಖುಷಿ ಹಂಚಿಕೊಂಡರು.

ಮನೆ ಬಾಗಿಲಿಗೆ ಸರಕಾರಿ ಸೇವೆಗಳನ್ನು ಒದಗಿಸುವುದು ಎಎಪಿಯ ಹೊಸ ಪರಿಕಲ್ಪನೆಯಾಗಿದೆ. ಇದೀಗ ಬೇರೆ ಪಕ್ಷದವರು ಕೂಡ ನಮ್ಮ ಅನುಕರಣೆ ಮಾಡುತ್ತಿದ್ದಾರೆ. ಆಮ್ ಆದ್ಮಿ ಪಾರ್ಟಿಯ ದೆಹಲಿ ಸರಕಾರ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉಚಿತ ನೀರು ಮತ್ತು ವಿದ್ಯುತ್ ಒದಗಿಸುತ್ತಿದೆ. 300 ಯುನಿಟ್ ಉಚಿತ ವಿದ್ಯುತ್, ಪ್ರತಿಯೊಬ್ಬರಿಗೆ 635 ಲೀಟರ್ ಉಚಿತ ನೀರು ಒದಗಿಸುವ ಮೂಲಕ ಶಿಸ್ತುಬದ್ಧ ಜೀವನಕ್ಕೆ ಬುನಾದಿ ಹಾಕಿಕೊಟ್ಟಿದೆ ಎಂದರು.
ದೆಹಲಿಯಲ್ಲಿ ಎಎಪಿ ಆಡಳಿತದ ಬಳಿಕ ಬಹಳಷ್ಟು ಅಭಿವೃದ್ಧಿ ಹಾಗೂ ಸುಧಾರಣೆಗಳಾಗಿವೆ. ದಿಲ್ಲಿ ಸರಕಾರದ ಬಜೆಟ್ ಗಾತ್ರ ಹಿಗ್ಗಿದೆ. 35 ಸಾವಿರ ಕೋಟಿ ಇದ್ದ ಬಜೆಟ್ ಗಾತ್ರ 75 ಸಾವಿರ ಕೋಟಿ ರೂ.ಗೆ ಹೆಚ್ಚಾಗಿದೆ. ಇದು ಎಎಪಿ ಆಡಳಿತ ಕಾರ್ಯವೈಖರಿಯ ಸಣ್ಣ ಉದಾಹರಣೆಯಷ್ಟೇ ಎಂದು ಎಡಮಲೆ ನುಡಿದರು.
ದ.ಕ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ 3 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು.
ಸ್ಥಳೀಯ ಸಮಸ್ಯೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಅಭಿವೃದ್ಧಿ ಕಾರ್ಯ ನಡೆಸಲಾಗುವುದು. ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆ ಕೃಷಿಗೆ ಉಂಟಾಗುವ ಕೊಳೆ ರೋಗದ ಕುರಿತು ನಮ್ಮ ಪ್ರಣಾಳಿಕೆಯಲ್ಲೇ ಉಲ್ಲೇಖ ಮಾಡಲಾಗಿದೆ. ಸುಳ್ಯ, ಸುಬ್ರಹ್ಮಣ್ಯ, ಕಡಬ ಭಾಗದಲ್ಲಿರುವ ಕಾಡಾನೆ ಹಾವಳಿ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖ ಇಲ್ಲದಿದ್ದರೂ ಅರಣ್ಯ ಇಲಾಖೆಯ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಎಎಪಿ ಪಕ್ಷದ ಪಾಲಿಸಿ ಡಿಫರೆಂಟ್ ಆಗಿದೆ.
ಒಬ್ಬ ಅಭ್ಯರ್ಥಿಗೆ 2 ಅವಧಿಗಿಂತ ಹೆಚ್ಚು ಸ್ಪರ್ಧಿಸಲು ಅವಕಾಶ ನೀಡಬಾರದು ಎನ್ನುವುದು ನನ್ನ ಅಭಿಪ್ರಾಯ. ಎರಡು ಬಾರಿಗಿಂತ ಹೆಚ್ಚು ಸಲ ಶಾಸಕರಾದರೆ ಅವರಲ್ಲಿ ಯಾವುದೇ ಹೊಸತನವಿರುವುದಿಲ್ಲ. ನಿಂತ ನೀರಾಗಿ ಬಿಡುತ್ತಾರೆ. ಆಮ್ ಆದ್ಮಿ ಪಾರ್ಟಿಯಲ್ಲಿ ಯಾರು ಕೂಡ ವೃತ್ತಿಪರ ರಾಜಕಾರಣಿಗಳಿಲ್ಲ. ನಾವು ಎಲ್ಲ ಕಡೆ ರಾಜಕೀಯ ಹಿನ್ನೆಲೆ ಇಲ್ಲದ ದಕ್ಷ, ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಅಭ್ಯರ್ಥಿ ಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಸುಳ್ಯ ಅಭ್ಯರ್ಥಿ ಸುಮನಾ ಅವರು ಮಾಜಿ ಶಾಸಕರ ಪುತ್ರಿ ಎನ್ನುವುದನ್ನು ಬಿಟ್ಟರೆ ಅವರಿಗೆ ರಾಜಕೀಯದ ಯಾವುದೇ ಸಂಬಂಧವಿಲ್ಲ. ಸಮಾಜ ಸೇವೆ ಮೂಲಕ ಸುಳ್ಯದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಎಡಮಲೆ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು