ಇತ್ತೀಚಿನ ಸುದ್ದಿ
‘ನಾವು ಹೋಗುತ್ತಿದ್ದೇವೆ, ಕ್ಷಮಿಸಿ!’: ಪತ್ರ ಬರೆದಿಟ್ಟು ಹಾಸ್ಟೆಲ್ ನಿಂದ ನಾಪತ್ತೆಯಾದ 3 ಮಂದಿ ವಿದ್ಯಾರ್ಥಿನಿಯರು
21/09/2022, 22:44

ಮಂಗಳೂರು(reporterkarnataka.com): ಖಾಸಗಿ ಪಿಯು ಕಾಲೇಜೊಂದರ ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ಕಿಟಕಿ ಮುರಿದು ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಾಪತ್ತೆಯಾದ ವಿದ್ಯಾರ್ಥಿನಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ನಿವಾಸಿಗಳಾಗಿದ್ದು, ಮತ್ತೋರ್ವ ವಿದ್ಯಾರ್ಥಿನಿ ಚಿತ್ರದುರ್ಗ ಮೂಲದವಳೆಂದು ತಿಳಿದು ಬಂದಿದೆ. ಮೂವರು ಪಿಯುಸಿ ಓದುತ್ತಿದ್ದಾರೆ.
“ನಾವು ಹೋಗುತ್ತಿದ್ದೇವೆ, ಕ್ಷಮಿಸಿ” ಎಂದು ಪತ್ರ ಬರೆದಿಟ್ಟು ಮುಂಜಾನೆ 3 ಗಂಟೆಯ ವೇಳೆಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ.