1:33 AM Saturday14 - February 2026
ಬ್ರೇಕಿಂಗ್ ನ್ಯೂಸ್
ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ ಸೋಮವಾರಪೇಟೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು,… ನಟ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 100 ಕಿಮೀ. ನಡಿಗೆ Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ

ಇತ್ತೀಚಿನ ಸುದ್ದಿ

ನಾರಾವಿ ಪ್ರದೇಶದಲ್ಲಿ ವರುಣನ ಆರ್ಭಟ: ತುಂಬಿ ಹರಿದ ಸುವರ್ಣ ನದಿ; ಜಲಸ್ಫೋಟದ ಶಂಕೆ

04/08/2022, 09:37

ಕಾರ್ಕಳ(reporterkarnataka.com): ಪಶ್ಚಿಮ ಘಟ್ಟ ತಪ್ಪಲಿಲ್ಲ ಪ್ರದೇಶದ ನಾರಾವಿ ಭಾಗದಲ್ಲಿ ಬುಧವಾರ ಸಂಜೆ 4 ಗಂಟೆ ವೇಳೆಗೆ  ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು, ಅವ್ಯಾಹತವಾಗಿ ಭಾರಿ ಮಳೆ ಸುರಿದಿದೆ. ಸುವರ್ಣ ನದಿಯಲ್ಲಿ ಭಾರಿ ಕೆಸರು ಮಿಶ್ರಿತ ನೀರು ಹರಿಯುತ್ತಿದೆ. ಸ್ಥಳೀಯರು ಜಲಸ್ಫೋಟದ ಶಂಕೆ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭೂ ಕುಸಿತವಾಗಿರುವ ಶಂಕೆ ವ್ಯಕ್ತವಾಗಿದೆ. ಕುದುರೆಮುಖ ಅಭಯಾರಣ್ಯ ವ್ಯಾಪ್ತಿ ಯಲ್ಲಿ ನದಿಯಲ್ಲಿ ಏಕಾಏಕಿ ಭಾರಿ ಕೆಸರು ನೀರಿನಿಂದ ನೀರಿನ ಹರಿವು ಉಂಟಾದ ಸಂದರ್ಭದಲ್ಲಿ ಭೂ ಕುಸಿತ ವಾಗಿರುವ ಸಂಶಯ ವ್ಯಕ್ತವಾಗಿದೆ .ಈ ಭಾಗದಲ್ಲಿ  ಮಳೆ ನಿರಂತರ ಸುರಿಯುತ್ತಿದೆ.


ನೂರಾಲ್ಬೆಟ್ಟು ನಾರಾವಿ ಕುತ್ಲೂರು , ಈದು  ಮೂರು ಗ್ರಾಮಗಳು 90% ಅರಣ್ಯ ಪ್ರದೇಶಗಳಿಂದ ಅವೃತವಾದ ಪ್ರದೇಶಗಳಾಗಿವೆ.

ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ  ಬಳಿ ಹರಿಯುತ್ತಿರುವ ಸುವರ್ಣ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು ದೇವಾಲಯ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು 

ಮೊದಲ ಬಾರಿ ಜಲಾವೃತವಾದ ಸೇತುವೆ: ಕಾರ್ಕಳ ಬೆಳ್ತಂಗಡಿ ರಾಜ್ಯ ಹೆದ್ದಾರಿ ಯ ನಾರಾವಿಯ ಅರಸಿಕಟ್ಟೆ ಎಂಬಲ್ಲಿ ಸೇತುವೆ ಮೇಲ್ಭಗದಲ್ಲಿ ನೀರು ಹರಿದಿದ್ದು  ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ತೊಂದರೆ ಉಂಟಾಗಿತ್ತು.

ಸೇತುವೆ ಮೇಲ್ಬಾಗದಲ್ಲಿ ಎಕಾಏಕಿ ನೀರು ಹೆಚ್ಚಾಗ ತೊಡಗಿದಾಗ  ಭಾರಿ ಟ್ರಾಫಿಕ್ ಜಾಂ ಉಂಟಾಗಿತ್ತು. ಬಿರ್ಮೊಟ್ಟು , ರಾಮೆರಗುತ್ತು ಸುತ್ತಮುತ್ತ , ನಾರಾವಿ ಯ ಕೆಳಗಿನ ಪೇಟೆ  ಯ ಸುತ್ತಮುತ್ತಲಿನ ತೋಟಗಳಿಗೆ ನೀರು ನುಗ್ಗಿತ್ತು‌.


ಸ್ಥಳೀಯ ರು ಹೇಳಿರುವಂತೆ ಮೊದಲ ಬಾರಿಗೆ ಮಳೆಗೆ ಅಂಚಿಕಟ್ಟೆ ಸೇತುವೆ ಮುಳುಗಡೆಯಾಗಿದೆ . ಸೆತುವೆಯ ಮೇಲ್ಭಾಗದಲ್ಲಿ2 ಅಡಿ ನೀರು ನಿಂತಿದ್ದು ಒಂದು ಘಂಟೆ ಗಳ ಕಾಲ ಜಾಂ  ಉಂಟಾಗಿತ್ತು

ಇತ್ತೀಚಿನ ಸುದ್ದಿ

ಜಾಹೀರಾತು