ಇತ್ತೀಚಿನ ಸುದ್ದಿ
ನಾಗಮಂಗಲ: ಬೀದಿ ಬದಿ ವ್ಯಾಪಾರಸ್ಥರಿಗೆ ಚೆಲುವರಾಯಸ್ವಾಮಿ 250ಕ್ಕೂ ಹೆಚ್ಚು ಛತ್ರಿ ವಿತರಣೆ
01/03/2023, 21:32
ನಾಗಮಂಗಲ(reporterkarnataka.com): ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರು ಛತ್ರಿ ವಿತರಿಸಿದರು.
ಅವರು ಪಟ್ಟಣದ ಕೆ ಎಸ್ ಟಿ ರಸ್ತೆ ಹಳೆ ಮಾರ್ಕೆಟ್ ಬಸ್ ಸ್ಟಾಂಡ್ ಮುಂತಾದ ಕಡೆಗಳಲ್ಲಿ ವ್ಯಾಪಾರ ಮಾಡುತ್ತಿರುವಂತಹ ಸುಮಾರು 250ಕ್ಕೂ ಹೆಚ್ಚಿನ ವ್ಯಾಪಾರಸ್ಥರಿಗೆ ಛತ್ರಿಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಚಿನ್ ಚೆಲುವರಾಯಸ್ವಾಮಿ, ಸುನಿಲ್ ಲಕ್ಷ್ಮಿಕಾಂತ್, ಪುರಸಭೆ ಸದಸ್ಯರಾದ ರಮೇಶ್ ತಿಮ್ಮಪ್ಪನವರು ಮುಖಂಡರುಗಳಾದ ಪಾನಿಪುರಿ ಸುರೇಶ್, ವಿನಯ್ ಕುಮಾರ್, ಚೇತನ್ ಕುಮಾರ್, ರವೀಕಾಂತೇಗೌಡ, ಮುತಾಬೀರ್ ಖಾನ್ ಪುರಸಭೆ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆಸಿಫ್ ಪಾಷ ಹಾಗೂ ಕಾರ್ಯಕರ್ತರು ಹಾಜರಿದ್ದರು.