8:07 AM Friday15 - November 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಕ್ಸಲ್ ಚಟುವಟಿಕೆ ಪ್ರಕರಣ; ಇಬ್ಬರು ಶಂಕಿತ ನಕ್ಸಲರು ಸೇರಿ 4 ಮಂದಿ… ಬೆಂಗಳೂರು ಸೈಂಟ್ ಜೋಸೆಫ್ ವಿವಿಯ ಫ್ಯಾಕಲ್ಟಿ ಡೆವಲಪ್ ಮೆಂಟ್ ಪ್ರೋಗ್ರಾಂ: ಹೆಲ್ತ್ ಕೇರ್… ಶ್ರೀನಿವಾಸಪುರ ತಾಲೂಕು ವಕೀಲರಿಂದ ಅನಿರ್ದಿಷ್ಟ ಪ್ರತಿಭಟನೆ: ನ್ಯಾಯಾಲಯ ಕಲಾಪಕ್ಕೆ ಬಹಿಷ್ಕಾರ ಪವಿತ್ರ ಯಾತ್ರಾ ಸ್ಥಳ ಸುತ್ತೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ರಂಗಸ್ವಾಮಿ ಅವಿರೋಧ… ತುಮಕೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ-2024: ಸಿಎಂ ಸಿದ್ದರಾಮಯ್ಯ ಲಾಂಛನ ಅನಾವರಣ ಮೂಡಿಗೆರೆ: ಮದುವೆ ಸಮಾರಂಭದಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಖದೀಮರು ಸಂಡೂರು ವಿಧಾನಸಭೆ ಉಪ ಚುನಾವಣೆ: ಶೇ.76.24ರಷ್ಟು ಮತದಾನ ಕಾಫಿನಾಡಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ?: ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಆರಂಭ ಗಣಿ ಮಾಫಿಯಾ, ಹಣದ ಶಕ್ತಿ, ಸುಳ್ಳು ಪ್ರಚಾರದಿಂದ ರಕ್ಷಿಸಲು ಮತ ಚಲಾಯಿಸಿ: ಗೋಪಿನಾಥ್… ಶ್ವಾನವನ್ನು ಬೆನ್ನಟ್ಟಿ ಬಾವಿಗೆ ಬಿದ್ದ 10ರ ಹರೆಯದ ಚಿರತೆ; ಅರಣ್ಯ ಇಲಾಖೆಯಿಂದ ರಕ್ಷಣೆ

ಇತ್ತೀಚಿನ ಸುದ್ದಿ

ಮೈಸೂರು ‘ಮುಡಾ’ ಹಗರಣದ ಸಿಬಿಐ ತನಿಖೆಗೆ ಒಪ್ಪಿಸಿ: ಮಾಜಿ ಸಿಎಂ ಯಡಿಯೂರಪ್ಪ ಆಗ್ರಹ

06/11/2024, 18:23

ಬೆಂಗಳೂರು(reporterkarnataka.com): ಲೋಕಾಯುಕ್ತ ತನಿಖೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಈ ರಾಜಕೀಯ ದೊಂಬರಾಟ ಮಾಡಿ, ತಾನು ಸಾಚಾ ಎಂದು ತೋರಿಸಿಕೊಳ್ಳುವ ಪ್ರಯತ್ನ ಮುಖ್ಯಮಂತ್ರಿಗಳದು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಹೊರಡುವ ಮುನ್ನ ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ನಿಜಕ್ಕೂ ಪ್ರಾಮಾಣಿಕತೆ ಇದ್ದರೆ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಇದರಿಂದ ವಾಸ್ತವಿಕ ವಿಚಾರಗಳು ಹೊರಕ್ಕೆ ಬರಲು ಸಾಧ್ಯ ಎಂದು ನುಡಿದರು.
ಮುಖ್ಯಮಂತ್ರಿಗಳು ತಮ್ಮ ಜೀವನ ತೆರೆದ ಪುಸ್ತಕ ಎನ್ನುತ್ತಿದ್ದಾರೆ. ಲೋಕಾಯುಕ್ತದ ಬದಲಾಗಿ ತಮ್ಮ ಕುಟುಂಬದ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಪ್ರಾಮಾಣಿಕತೆಯನ್ನು ತೋರಿಸಲಿ ಎಂದು ಒತ್ತಾಯಿಸಿದರು.
ಉಪ ಚುನಾವಣೆ ಸಂಬಂಧ ಪ್ರಶ್ನಿಸಿದಾಗ, 3ಕ್ಕೆ 3 ಕ್ಷೇತ್ರಗಳನ್ನು ಎನ್‍ಡಿಎ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಉತ್ತರ ಕೊಟ್ಟರು.
ಅಬಕಾರಿ ಇಲಾಖೆಯಲ್ಲಿ ಸಾವಿರಾರು ಕೋಟಿಯ ಹಗರಣ ನಡೆದಿದ್ದು, ಆ ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಅವರು ಒತ್ತಾಯಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಇಲಾಖೆಯಲ್ಲಿ ಅಧಿಕಾರಿ ಆತ್ಮಹತ್ಯೆ ಕುರಿತು ತನಿಖೆ ನಡೆದು ಸತ್ಯ ಹೊರಬರಲಿ; ಆಮೇಲೆ ಪ್ರತಿಕ್ರಿಯೆ ಕೊಡುವುದಾಗಿ ಹೇಳಿದರು.
ರಾಜ್ಯದೆಲ್ಲೆಡೆ ವಕ್ಫ್ ಒತ್ತುವರಿ ನಡೆದಿದೆ. ಇದರ ಕುರಿತು ಸಮಗ್ರ ತನಿಖೆ ನಡೆಸಬೇಕಿದೆ. ಅಲ್ಲದೇ, ಸಂಬಂಧಿತ ಸಚಿವ ರಾಜೀನಾಮೆ ಕೊಡಬೇಕು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು