12:21 AM Wednesday1 - April 2026
ಬ್ರೇಕಿಂಗ್ ನ್ಯೂಸ್
ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ…

ಇತ್ತೀಚಿನ ಸುದ್ದಿ

ಮೈಸೂರು ದಸರಾ: ಊಟಿ ಸೇರಿದಂತೆ ವಿವಿಧ ಕಡೆ ಸಾರಿಗೆ ಸಂಸ್ಥೆಯಿಂದ ವಿಶೇಷ ಪ್ಯಾಕೇಜ್‌ ಟೂರ್

26/09/2022, 19:23

ಮೈಸೂರು(reporterkarnataka.com): ನಾಡಹಬ್ಬ ದಸರಾ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಒಂದು ದಿನದ ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಿದೆ.

*ಗಿರಿದರ್ಶಿನಿ:ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ ಸುತ್ತಾಡಲು ಅವಕಾಶವಿದ್ದು, ವಯಸ್ಕರಿಗೆ ₹ 400, ಮಕ್ಕಳಿಗೆ 250 ರೂ ದರ ನಿಗದಿಪಡಿಸಿದೆ.

*ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. ( ವಯಸ್ಕರಿಗೆ 450ರೂ , ಮಕ್ಕಳಿಗೆ 250ರೂ)

*ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ವಯಸ್ಕರಿಗೆ ರೂ300 ಮಕ್ಕಳಿಗೆ 175ರೂ)

*ಮೈಸೂರು ನಗರ: ನಗರ ಬಸ್ ನಿಲ್ದಾಣದಿಂದ ಅರಮನೆ ರಸ್ತೆ, ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ರಸ್ತೆ, ಎಲ್.ಐ.ಸಿ ವೃತ್ತ, ಬಂಬೂ ಬಜಾರ್ ರಸ್ತೆ, ರೈಲ್ವೆ ನಿಲ್ದಾಣ ವೃತ್ತ, ಜೆ.ಎಲ್.ಬಿ ರಸ್ತೆ ಮತ್ತು ನಗರ ಬಸ್ ನಿಲ್ದಾಣ (ವಯಸ್ಕರಿಗೆ 200ರೂ , ಮಕ್ಕಳಿಗೆ 150ರೂ).

*ಮೈಸೂರು ದರ್ಶಿನಿ: ನಗರ ವೋಲ್ವೋ ವಾಹನದಲ್ಲಿ ಪ್ರಯಾಣಿಸಲು ಅವಕಾಶವಿದ್ದು, ನಂಜನಗೂಡು, ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ, ಶ್ರೀರಂಗಪಟ್ಟಣ, ಕೆ.ಆರ್.ಎಸ್‌. (ವಯಸ್ಕರಿಗೆ 400, ಮಕ್ಕಳಿಗೆ 200).

*ಮಡಿಕೇರಿ ಪ್ಯಾಕೇಜ್ (ಐರಾವತ ಕ್ಲಬ್‌ ಕ್ಲಾಸ್‌): ನಿಸರ್ಗಧಾಮ-ಗೋಲ್ಡನ್ ಟೆಂಪಲ್-ಹಾರಂಗಿ ಜಲಾಶಯ-ರಾಜಾ ಸೀಟ್-ಅಬ್ಬೀಫಾಲ್ಸ್ (ವಯಸ್ಕರಿಗೆ: 1,200 ಮಕ್ಕಳಿಗೆ 1000)

*ಊಟಿ ಪ್ಯಾಕೇಜ್: ಊಟಿ-ಬಟಾನಿಕಲ್ ಗಾರ್ಡನ್-ಇಟಾಲಿಯನ್ ಮತ್ತು ರೋಸ್ ಗಾರ್ಡನ್- ಬೋಟ್ ಹೌಸ್ (ವಯಸ್ಕರಿಗೆ 1,600, ಮಕ್ಕಳಿಗೆ 1200).

ಅ.1ರಿಂದ ಅ.10ರವರೆಗೆ ಬಸ್‌ಗಳ ಕಾರ್ಯಾಚರಿಸಲಿದ್ದು, ಇ-ಟಿಕೇಟ್ ಬುಕಿಂಗ್‌ ಅನ್ನು ksrtc.karnataka.gov.in ವೆಬ್‌ಸೈಟ್‌ ಮುಖಾಂತರ, ಮೊಬೈಲ್ ಬುಕಿಂಗ್ ಹಾಗೂ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು