ಇತ್ತೀಚಿನ ಸುದ್ದಿ
ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್ ಅಳವಡಿಕೆ
11/12/2025, 21:14
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮೈಸೂರು ಅರಮನೆಯ ಮುಖ್ಯದ್ವಾರದ ಮೇಲ್ಚಾವಣೀಯ ಒಂದು ಭಾಗ ಕುಸಿತವಾಗಿದೆ. ನಿಲ್ಲಿಸಿದ ಬೈಕ್ ಮೇಲೆಯೇ ಮೇಲ್ಚಾವಣಿಯ ಕುಸಿದಿದ್ದು ಸ್ಪಲ್ಪ ಹೊತ್ತು ಆತಂಕ ಮನೆ ಮಾಡಿತ್ತು.
ಅರಮನೆಯ ವರಾಹ ಗೇಟ್ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಭಾಗ ಸ್ವಲ್ಪ ಪ್ರಮಾಣದಲ್ಲಿ ಕುಸಿದುಬಿದ್ದಿದೆ.


ಮೈಸೂರು ಅರಮನೆಯ ಮುಖ್ಯದ್ವಾರದ ಮೇಲ್ಚಾವಣಿ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದೆ. ಅರಮನೆಯ ವರಹಾ ಗೇಟ್ ಮುಖ್ಯದ್ವಾರದ ಮೇಲ್ಚಾವಣಿ ಕುಸಿದಿದೆ. ಜನರು ಇಲ್ಲದ ವೇಳೆ ಮೇಲ್ಚಾವಣಿ ಕುಸಿದಿದ್ದರಿಂದ ಅನಾಹುತ ತಪ್ಪಿದೆ. ಸಿಬ್ಬಂದಿ ನಿಲ್ಲಿಸಿದ್ದ ಬೈಕ್ ಮೇಲೆಯೇ ಮೇಲ್ಚಾವಣಿ ಕುಸಿದಿದೆ. ಘಟನೆ ಬಳಿಕ ಸಿಬ್ಬಂದಿಗಳು ಗೇಟ್ ಬಳಿ ಬ್ಯಾರಿಕೇಟ್ ಅಳವಡಿಸಿದ್ದಾರೆ.












