6:23 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮೈಸೂರಿನ ಮೈಲಾರಿ ಹೊಟೇಲ್ ನಲ್ಲಿ ದೋಸೆ ಹೊಯ್ದ ಪ್ರಿಯಾಂಕಾ ವಾದ್ರ!: ಜನರಿಗೆ ಖುಷಿಯೇ ಖುಷಿ

26/04/2023, 23:46

ಮೈಸೂರು(reporterkarnataka.com); ಜನ ಸಾಮಾನ್ಯರ ಜತೆ ಬೆರೆಯುವ ಮೂಲಕವೇ ಗಾಂಧಿ ಕುಟುಂಬ ಪ್ರಸಿದ್ಧಿಗೆ ಬಂದಿರುವುದು. ಇದೀಗ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ ಪ್ರಿಯಾಂಕಾ ವಾದ್ರ ಇಲ್ಲಿನ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ದೋಸೆ ಹೊಯ್ದು ಸುದ್ದಿ ಮಾಡಿದರು.


ಮೈಸೂರಿನ ಮೈಲಾರಿ ಹೋಟೆಲ್ ಅಂದ್ರೆ ಲಲಿತ ಮಹಲ್ ಪ್ಯಾಲೇಸ್, ಬಾಂಬೆಯ ಅಶೋಕ, ದಿಲ್ಲಿಯ ಮೌರ್ಯ ಹೋಟೆಲ್ ತರಹ ಸ್ಟಾರ್ ಹೋಟೆಲ್ ಅಲ್ಲ. ಬದಲಿಗೆ ಅದೊಂದು ಸಣ್ಣ ಗೂಡಿನ ಮಾದರಿಯ ಹೋಟೆಲ್ ಆಗಿದೆ. ಕಾಂಗ್ರೆಸ್ ನ ಯುವ ರಾಣಿ ಪ್ರಿಯಾಂಕಾ ಅವರು ಹೋಟೆಲಿಗೆ ಭೇಟಿ ಕೊಟ್ಟವರು ನೇರವಾಗಿ ನುಗ್ಗಿದ್ದು ಅಡುಗೆ ಮನೆಗೆ. ಪ್ರಿಯಾಂಕಾ ಅವರಿಗೆ ದಕ್ಷಿಣ ಭಾರತದ ದೋಸೆ ಕುರಿತು ಕುತೂಹಲ. ಹೋಟೆಲಿನ ಮಾಲೀಕ ಕಮ್ ಅಡುಗೆ ಭಟ್ಟರಲ್ಲಿ ಮಾಹಿತಿ ಪಡೆದ ಪ್ರಿಯಾಂಕಾ ವಾದ್ರ ಅವರು ಕಾದ ಕಾವಲಿಯ ಮೇಲೆ ದೋಸೆ ಹೊಯ್ದೇ ಬಿಟ್ಟರು. ಉದ್ದಿನ ದಪ್ಪ ದೋಸೆಯನ್ನು ಮಗುಚಿ ಹಾಕಬೇಕೆನ್ನುವ ಮಾಹಿತಿ ಇಲ್ಲದ ಪ್ರಿಯಾಂಕಾ ಅವರು ಅದನ್ನು ಸಿಂಗ್ ಫೋಲ್ಡ್ ಮಾಡಿ ಕಾವಲಿಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಹೋಟೆಲ್ ನ ಅಡುಗೆ ಭಟ್ಟರು ಅದನ್ನು ತಿರುಗಿಸಿ ಹಾಕುವ ಬಗ್ಗೆ ಮಾಹಿತಿ ನೀಡಿದರು. ಒಟ್ಟಿನಲ್ಲಿ ಪ್ರಿಯಾಂಕಾ ಅವರು ದೋಸೆ ಹಾಕುವ ಕುರಿತು ಮಾಹಿತಿ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು