ಇತ್ತೀಚಿನ ಸುದ್ದಿ
ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ
24/07/2025, 23:20

ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ನಾಡಹಬ್ಬ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು 14 ಆನೆಗಳ ಪೈಕಿ 9 ಸಾಕಾನೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಮೊದಲ ಹಂತದ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಒಟ್ಟು 9 ಆನೆಗಳು ರಾಜ್ಯದ ವಿವಿಧ ಶಿಬಿರದಿಂದ ಮೈಸೂರಿಗೆ ತೆರಳಲಿದೆ ಆಗಸ್ಟ್ 4ರಂದು ಮೊದಲ ತಂಡ ಹೊರದಲಿದ್ದು, ಈ ತಂಡದಲ್ಲಿ ಕೊಡಗಿನ ಮತ್ತಿಗೋಡು ಕ್ಯಾಂಪ್ ನಿಂದ ಅಭಿಮನ್ಯು,ಭೀಮ, ದುಬಾರೆ ಯಿಂದ ಕಂಜನ್, ಪ್ರಶಾಂತ್, ಧನಂಜಯ, ಕಾವೇರಿ, ಬಳ್ಳೆ ಕ್ಯಾಂಪ್ನಿಂದ ಲಕ್ಷ್ಮೀ,ಮಹೇಂದ್ ಮತ್ತು ದೊಡ್ಡ ಹರವೆ ಯಿಂದ ಏಕಲವ್ಯ ಆನೆಗಳನ್ನು ಅಂತ್ಯಗೊಳಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೈಸೂರಿನಲ್ಲಿ ಪಟ್ಟಿ ಬಿಡುಗಡೆಗೊಳಿಸಿದರು.