6:54 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಮೈಸೂರಿಗೆ ಬಂದ ಪ್ರಧಾನಿ ವರುಣಾಕ್ಕೆ ಯಾಕೆ ಬಂದಿಲ್ಲ? ಅಮಿತ್ ಶಾ ಇರುವಾಗಲೇ ಬಿಎಸ್ ವೈ ವೇದಿಕೆ ಇಳಿದು ಹೋಗಿರುವುದು ಯಾಕೆ?

03/05/2023, 23:40

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಬಿಜೆಪಿಯ ವಿ.ಸೋಮಣ್ಣ ಅವರ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ಉದ್ದೇಶದಿಂದಲೇ ಲಿಂಗಾಯತ ಸಮುದಾಯಕ್ಕೆ ಸೇರಿದ ವಸತಿ ಸಚಿವ ಸೋಮಣ್ಣ ಅವರನ್ನು ಬಿಜೆಪಿ ಹೈಕಮಾಂಡ್ ಕಣಕ್ಕಿಳಿದೆ. ಸಿದ್ದರಾಮಯ್ಯರ ವಿರುದ್ಧ ಇಷ್ಟೆಲ್ಲ ಜಿದ್ದಾಜಿದ್ದಿನ ಕಾರ್ಯತಂತ್ರ ರೂಪಿಸಿದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ವರುಣಾಕ್ಕೆ ಕರೆಸುವಲ್ಲಿ ಮಾತ್ರ ಕೇಸರಿ ಪಡೆ ವಿಫಲವಾಗಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಹಾಗಾದರೆ ಪ್ರಧಾನಿ ಮೋದಿ ವರುಣಾಕ್ಕೆ ಯಾಕೆ ಬಂದಿಲ್ಲ? ರಾಜ್ಯ ಬಿಜೆಪಿ ನಾಯಕರುಗಳೇ ಪ್ರಧಾನಿ ಬಾರದಂತೆ ನೋಡಿಕೊಂಡರೇ? ಅಥವಾ ಪ್ರಧಾನಿ ಮೋದಿ ಅವರೇ ವರುಣಾಕ್ಕೆ ಬರಲು ನಿರಾಕರಿಸಿದರೇ? ಪಕ್ಷದ ಒಂದು ಮೂಲಗಳ ಪ್ರಕಾರ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ವರುಣಾಕ್ಕೆ ಕರೆಸಲು ರಾಜ್ಯ ಬಿಜೆಪಿ ಪ್ಲ್ಯಾನ್ ಹಾಕಿತ್ತು. ಮೈಸೂರು ಸಂಸದ ಪ್ರತಾಪ ಸಿಂಹ ಅವರು ಕೂಡ ವರುಣಾಕ್ಕೆ ಬರುವಂತೆ ಪ್ರಧಾನಿಗೆ ಪದೇ ಪದೇ ಮನವಿ ಮಾಡಿದ್ದರು. ಇಂತಹ ಎಷ್ಟೇ ಪ್ರಯತ್ನಗಳನ್ನು ನಡೆಸಿದರೂ ಪ್ರಧಾನಿ ಮೋದಿ ಅವರನ್ನು ವರುಣಾಕ್ಕೆ ಕರೆಸುವಲ್ಲಿ ರಾಜ್ಯ ಬಿಜೆಪಿ ಸಫಲವಾಗಿಲ್ಲ.
ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಸರಕಾರವನ್ನು 10% ಸರಕಾರ ಎಂದು ಟೀಕಿಸಿದ್ದರು. ಈ ಕುರಿತು ಅಂದಿನ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಕಚೇರಿಗೆ ನೋಟಿಸ್ ಜಾರಿ ಮಾಡಿದ್ದರು.
ದೇಶದ ಇತಿಹಾಸದಲ್ಲೇ ಒಬ್ಬ ಸಿಎಂ ಪ್ರಧಾನ ಮಂತ್ರಿಗೆ ನೋಟಿಸ್ ಜಾರಿ ಮಾಡಿರುವುದು ಮೊದಲ ಬಾರಿ ಆಗಿತ್ತು. ಇಷ್ಟೆಲ್ಲ ನಡೆದು ಹೋದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂತು. ರಾಜ್ಯ ಬಿಜೆಪಿ ಸರಕಾರದ ಮೇಲೆ 40% ಕಮಿಷನ್ ಆರೋಪ ಕೇಳಿ ಬಂತು. ಕಮಿಷನ್ ವ್ಯವಹಾರದ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ವಿಷಯ ಅದೇನಿದ್ದರೂ ಪ್ರಸಕ್ತ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಹೇಗಾದರು ಮಾಡಿ ಸೋಲಿಸಲೇ ಬೇಕೆನ್ನುವುದೇ ಬಿಜೆಪಿ ಕಾರ್ಯತಂತ್ರವಾಗಿತ್ತು. ಸಿದ್ದರಾಮಯ್ಯ ಅವರನ್ನು ಮಣಿಸಲೆಂದೇ ಲಿಂಗಾಯತ ಸಮುದಾಯದ ಸೋಮಣ್ಣ ಅವರನ್ನು ಕಣಕ್ಕಿಳಿಸಿ ಜಿದ್ದಾಜಿದ್ದಿನ ಕಾರ್ಯತಂತ್ರವನ್ನು ರೂಪಿಸಿತ್ತು.
ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ವರುಣಾ ಕ್ಷೇತ್ರದಲ್ಲೇ ಕಟ್ಟಿ ಹಾಕಿ ಅವರು ರಾಜ್ಯ ಪ್ರವಾಸ ಮಾಡದಂತೆ ನೋಡಿಕೊಳ್ಳುವುದು ಮತ್ತು ವರುಣಾದಲ್ಲಿ ಸ್ವತಃ ಸಿದ್ದರಾಮಯ್ಯ ಅವರೇ ಸೋಲುವಂತೆ ಮಾಡುವುದು ಬಿಜೆಪಿ ಹೈಕಮಾಂಡ್ ಉದ್ದೇಶವಾಗಿತ್ತು. ಆದರೆ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಒಂದೆರಡು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ತನ್ನ ಪರವಾಗಿ ತನ್ನ ಪುತ್ರ ಯತೀಂದ್ರ ನಿಮ್ಮ ಬಳಿ ಓಟು ಕೇಳಲು ಬರುತ್ತಾನೆ. ದಯವಿಟ್ಟು ನಿಮ್ಮ ಮತವನ್ನು ಹಾಕಿ ಎಂದು ಮತದಾರರಲ್ಲಿ ವಿನಂತಿಸಿ ಪ್ರಚಾರದ ಹೊಣೆಯನ್ನು ಪುತ್ರ ಯತೀಂದ್ರ ಅವರಿಗೆ ಒಪ್ಪಿಸಿದ್ದರು. ವರುಣಾದಲ್ಲಿ ಯತೀಂದ್ರ ಪ್ರಚಾರ ಕಾರ್ಯದಲ್ಲಿ ತೊಡಗಿರುವುದರಿಂದ ಸಿದ್ದರಾಮಯ್ಯ ಅವರು ರಾಜ್ಯದ ಉದ್ದಗಲಕ್ಕೂ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೊಂದು ಕಡೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರಿಗೆ ಕ್ಷೇತ್ರದ ಹಲವು ಕಡೆ ವಿರೋಧ ವ್ಯಕ್ತವಾಗಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಜತೆ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಮತದಾರರು ಅಡ್ಡಿಪಡಿಸಿದ್ದಾರೆ. ನೀವು ಸಂವಿಧಾನ ಬದಲಾಯಿಸಲು ಹೊರಟವರು, ನಾವು ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು. ನಿಮಗೆ ಹೇಗೆ ಓಟು ಹಾಕಲಿ ಎಂದು ಯುವ ಮತದಾರರು ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಅವರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಇವೆಲ್ಲದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರುಣಾದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದಾರೆ. ಈ ಸಭೆಯ ವಿಶೇಷ ಏನೆಂದರೆ ವೇದಿಕೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮಿತ್ ಶಾ ವೇದಿಕೆಯಲ್ಲಿರುವಾಗಲೇ ಅರ್ಧದಲ್ಲಿ ಎದ್ದು ಹೋಗಿದ್ದಾರೆ. ಇದೆಲ್ಲ ನೋಡುವಾಗ ಸೋಮಣ್ಣ ಅವರನ್ನು ಬಿಜೆಪಿ ಮತ್ತು ಸಂಘ ಪರಿವಾರ ಬಲಿಪಶು ಮಾಡಲು ಹೊರಟಿದೆಯೇ ಎಂಬ ಪ್ರಶ್ನೆ ವರುಣಾ ಮಾತ್ರವಲ್ಲ ಇಡೀ ರಾಜ್ಯದ ಪ್ರಜ್ಞಾವಂತರಲ್ಲಿ ಕಾಡಲಾರಂಭಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು