ಇತ್ತೀಚಿನ ಸುದ್ದಿ
ಮಸ್ಕಿ: ಶೀಲ ಶಂಕಿಸಿ ಪತಿಯಿಂದಲೇ ಪತ್ನಿ ಕತ್ತು ಸೀಳಿ ಭೀಕರ ಕೊಲೆ; ಆರೋಪಿ ಬಂಧನ
03/09/2025, 13:04

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಮಸ್ಕಿ ತಾಲೂಕಿನಲ್ಲಿ ನಡೆದಿದೆ.
ಮಸ್ಕಿ ತಾಲೂಕಿನ ದೇಸಾಯಿ ಬೋಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೀರ್ಗಿ ಗ್ರಾಮದ ನಿವಾಸಿ ಗಂಗಮ್ಮ(30) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ.
ಆಟೋ ಡ್ರೈವರ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಸಂಶಯದ ಮೇಲೆ ಗಂಡ ಯಲ್ಲಪ್ಪ ಎಂಬಾತ ಗಂಗಮ್ಮನ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಇವರ ಮದುವೆಯಾಗಿ 12 ವರ್ಷ ಕಳೆದಿದೆ. ಮೂರು ಜನ ಮಕ್ಕಳು ಕೂಡ ಇದ್ದಾರೆ. ಗಂಡನ ಮಾರಣಾಂತಿಕ ಹಲ್ಲೆ ಯಿಂದ ತಪ್ಪಿಸಿಕೊಳ್ಳಲು ಮಹಿಳೆ 100 ಮೀಟರ್ ನಷ್ಟು ದೂರ ಓಡಿಕೊಂಡು ಬಂದು ಪ್ರಾಣ ಬಿಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಸಿಪಿಐ ಬಾಲಚಂದ್ರ ಲಕ್ಕಮ್ ಭೇಟಿ ನೀಡಿ ಆರೋಪಿ ಗಂಡನನ್ನು ಬಂಧಿಸಿದ್ದಾರೆ.