9:09 PM Wednesday11 - February 2026
ಬ್ರೇಕಿಂಗ್ ನ್ಯೂಸ್
ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:…

ಇತ್ತೀಚಿನ ಸುದ್ದಿ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಮರ್ಡರ್: ಹೆಂಡತಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

11/02/2026, 19:55

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಗೆ ಪೊಟಾಷಿಯಂ ಸೈನೆಡ್ ಕುಡಿಸಿ ಕೊಲೆ ಮಾಡಿದ ಆರೋಪ ಸಾಬೀತಾದ ಮೇರೆಗೆ ಹಂತಕಿ ಪತ್ನಿಗೆ ಮತ್ತು ಆಕೆಯ ಪ್ರಿಯಕರನಿಗೆ ಮಡಿಕೇರಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ತಣ್ಣೀರುಹಳ್ಳ ಗ್ರಾಮದ ರಾಧ ಮತ್ತು ಸೋಮವಾರಪೇಟೆ ನಿವಾಸಿ ಬಿ.ಡಿ. ಮುರಳಿ ಎಂಬುವವರೇ ತಮ್ಮ ಈ ಹೀನ ಕೃತ್ಯದಿಂದಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಕಂಬಿ ಹಿಂದೆ ಸೇರಿದವರಾಗಿದ್ದಾರೆ.

*ಹತ್ಯೆ ಸಂಚು ನಡೆದಿದ್ದು ಹೇಗೆ:?*
ತಣ್ಣೀರುಹಳ್ಳದ ರಾಧಾ ಎಂಬಾಕೆ ಸೋಮವಾರಪೇಟೆಯ ಸುರೇಶ ಎಂಬಾತನೊಂದಿಗೆ ವಿವಾಹವಾಗಿದ್ದು ಈಕೆ ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡಿದ್ದ ಮುರಳಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ತಮ್ಮಿಬ್ಬರ ಅಕ್ರಮ ನಂಟಿಗೆ ಅಡ್ಡಿ ಆಗಿದ್ದ ಪತಿ ಸುರೇಶನ ಉಸಿರು ನಿಲ್ಲಿಸಲು ಪ್ರಿಯಕರನೊಂದಿಗೆ ಸೇರಿ ಮುಹೂರ್ತ ಫಿಕ್ಸ್ ಮಾಡಿ ಹತ್ಯೆಯ ಸಂಚು ರೂಪಿಸಿದ್ದರು.
ದಿನಾಂಕ 17-07-2019 ರಂದು ಮುರಳಿ ಮಹಾರಾಷ್ಟ್ರ ಸೊಲ್ಲಾಪುರದ ಮಲ್ಲಿಕಾರ್ಜುನ ಮೊಟಗಿ ಎಂಬಾತಾನೊಂದಿಗೆ ಪೊಟಾಷಿಯಂ ಸೈನೆಡ್ ವಿಚಾರವಾಗಿ ವಾಟ್ಸಪ್ ಚಾಟಿಂಗ್ ಮಾಡಿದ್ದಾನೆ. ನಂತರ ಆತನಿಂದ 500 ಗ್ರಾಂ ಪೊಟಾಷಿಯಂ ಸೈನೆಡ್ ಅನ್ನು ಕೊರಿಯರ್ ಮೂಲಕ ತರಿಸಿಕೊಂಡಿದ್ದಾನೆ. ಸ್ವಲ್ಪ ಪೊಟಾಷಿಯಂ ಸೈನೆಡ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ಅದರಲ್ಲಿ ಹೂವು ಮತ್ತು ಕುಂಕುಮ ಇರಿಸಿದ್ದಾನೆ ಅಲ್ಲದೇ ಅದರೊಂದಿಗೆ ಒಂದು ಪತ್ರ ಇಟ್ಟು “ಇದು ದೇವರ ಪ್ರಸಾದ ಮನೆಯ ಯಜಮಾನ ಮಾತ್ರ ಕುಡಿಯಬೇಕು” ಎಂದು ಬರೆದು ಪಾರ್ಸಲ್ ಅನ್ನು ಸುರೇಶ ಕೆಲಸ ಮಾಡುತ್ತಿದ್ದ ಸೋಮವಾರಪೇಟೆ ಟೌನ್ ಹೋಟೆಲ್ ಗೆ ಕೊರಿಯರ್ ಮಾಡಿದ್ದಾನೆ.
ದಿನಾಂಕ 04-08-2019 ರಂದು ಸಂಜೆ ಮನೆಯ ಹಾಲ್ ನಲ್ಲಿ ಕುಳಿತ್ತಿದ್ದ ಪತಿ ಸುರೇಶ ಬೇಡ ಎಂದರೂ ಬಿಡದ ರಾಧ, “ದೇವರ ಪ್ರಸಾದ ಬೇಡ ಎನ್ನಬಾರದು” ಎಂದು ಒತ್ತಾಯಪೂರ್ವಕವಾಗಿ ಪೊಟಾಷಿಯಂ ಸೈನೆಡ್ ಮಿಶ್ರಿತ ನೀರನ್ನು ಕುಡಿಸಿ ಆತನನ್ನು ಕೊಲೆ ಮಾಡಿದ್ದಳು. ಉಳಿದಿದ್ದ ಪೊಟಾಷಿಯಂ ಸೈನೆಡ್ ನೀರನ್ನು ಮತ್ತು ಪ್ಲಾಸ್ಟಿಕ್ ಡಬ್ಬವನ್ನು ಮನೆ ಹಿಂಬದಿಯಲ್ಲಿರುವ ಒಲೆಗೆ ಹಾಕಿ ಸುಟ್ಟು ಸಾಕ್ಷ್ಯ ನಾಶ ಮಾಡಿದ್ದಳು. ಸೋಮವಾರಪೇಟೆ ಪಿಎಸ್ಐ ಶಿವಶಂಕರ್ ಪ್ರಕರಣ ದಾಖಲಿಸಿ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಮಡಿಕೇರಿಯಲ್ಲಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ್ ಅವರು, ಆರೋಪ ಸಾಬೀತಾದ ಮೇರೆಗೆ ದಿನಾಂಕ 10-02-2026 ರಂದು ರಾಧ ಮತ್ತು ಮುರಳಿ ಇವರಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ಅವರು ವಾದ ಮಂಡಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು