ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಮುಂದಿನ 2 ದಿನಗಳ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ
16/05/2022, 09:34
ಬೆಂಗಳೂರು(reporterkarnataka.com): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಬಹುತೇಕ ಚಿಲ್ಲೆಗಳಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗಲಿದೆ ಎನ್ನಲಾಗಿದೆ.
ಮೇ 15, 16ರಂದು ಬಾಗಲಕೋಟೆ ಬೆಳಗಾವಿ ಧಾರವಾಡ ಗದಗ ಹಾವೇರಿ ಉತ್ತರ ಕನ್ನಡ ವಿಜಯಪುರ ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ಕೋಲಾರ ರಾಮನಗರ ಶಿವಮೊಗ್ಗ ತುಮಕೂರು ಬಳ್ಳಾರಿ ಬೀದರ್ ಕಲಬುರಗಿ ಕೊಪ್ಪಳ ರಾಯಚೂರು ವಿಜಯನಗರ ಯಾದಗಿರಿ ಚಾಮರಾಜನಗರ ಚಿಕ್ಕಮಗಳೂರು ದಕ್ಷಿಣ ಕನ್ನಡ ಹಾಸನಾ ಕೊಡಗು ಮಂಡ್ಯ ಮೈಸೂರು ಉಡುಪಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.